ಮನೆ ಅಪರಾಧ ಕರಾಚಿ ವಿವಿಯಲ್ಲಿ ಆತ್ಮಾಹುತಿ ದಾಳಿ: ನಾಲ್ವರ ಸಾವು

ಕರಾಚಿ ವಿವಿಯಲ್ಲಿ ಆತ್ಮಾಹುತಿ ದಾಳಿ: ನಾಲ್ವರ ಸಾವು

0

ಕರಾಚಿ(Karachi): ಕರಾಚಿ ವಿಶ್ವವಿದ್ಯಾಲಯದ(Karachi university) ಆವರಣದ ಕನ್‌ಫ್ಯೂಷಿಯಸ್‌ ಇನ್‌ಸ್ಟಿಟ್ಯೂಟ್(Confucius Institute) ಬಳಿ ಮಂಗಳವಾರ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ(suicide bombing) ಮೂವರು ಚೀನಾ(China) ಪ್ರಜೆಗಳು(Citizen) ಸೇರಿ ನಾಲ್ವರು ಮೃತಪಟ್ಟಿದ್ದು,(4 Dead) ಇನ್ನಿಬ್ಬರು ಗಾಯ(2 Injured) ಗೊಂಡಿರುವ ಘಟನೆ ನಡೆದಿದೆ.

ಚೀನಾ ಪ್ರಜೆಗಳಿದ್ದ ವಾಹನವು ವಿವಿಯ ಆವರಣವನ್ನು ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ, ಬುರ್ಕಾ ಧರಿಸಿದ್ದ ಮಹಿಳೆಯೊಬ್ಬರು ಸ್ಫೋಟಿಸಿಕೊಂಡು ಕೃತ್ಯ ಎಸಗಿದ್ದು, ಮೃತರಲ್ಲಿ ಇಬ್ಬರು ಮಹಿಳೆಯರಿದ್ದಾರೆ. ಮೃತರನ್ನು ಕನ್‌ಫ್ಯೂಷಿಯಸ್‌ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಹುಹಾಂಗ್‌ ಗ್ಯುಪಿಂಗ್, ಡಿಂಗ್ ಮುಪೆಂಗ್, ಚೆನ್ ಸಾ ಮತ್ತು ವಾಹನ ಚಾಲಕ ಖಾಲಿದ್‌ ಎಂದು ಗುರುತಿಸಲಾಗಿದೆ.

ನಿಷೇಧಿತ ಬಲೂಚ್‌ ಲಿಬರೇಷನ್ ಆರ್ಮಿಗೆ (ಬಿಎಲ್‌ಎ) ಸೇರಿದ ಮಜೀದ್‌ ಬ್ರಿಗೇಡ್‌ ಎಂಬ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಸಂಘಟನೆಯ ಸದಸ್ಯೆ ಶಾರಿ ಬಲೂಚ್‌ ಅಲಿಯಾಸ್ ಬ್ರಂಶ್‌ ಈ ಕೃತ್ಯ ಎಸಗಿಸಿದ್ದಾರೆಎಂದು ಸಂಘಟನೆಯು ಹೇಳಿಕೊಂಡಿದೆ.