ಮನೆ ಸುದ್ದಿ ಜಾಲ ಕರ್ನಾಟಕದ ಜನತೆ ಅನುಕಂಪ ತೋರಿಸಿದ್ದಾರೆ, ಅವರಿಗೆ ಧನ್ಯವಾದ: ಪ್ರಧಾನಿ ಸಹೋದರ ಪ್ರಹ್ಲಾದ ದಾಮೋದರ ಮೋದಿ

ಕರ್ನಾಟಕದ ಜನತೆ ಅನುಕಂಪ ತೋರಿಸಿದ್ದಾರೆ, ಅವರಿಗೆ ಧನ್ಯವಾದ: ಪ್ರಧಾನಿ ಸಹೋದರ ಪ್ರಹ್ಲಾದ ದಾಮೋದರ ಮೋದಿ

0

ಮೈಸೂರು(Mysuru): ಕರ್ನಾಟಕದ ಜನತೆ ಅನುಕಂಪ ತೋರಿಸಿದ್ದಾರೆ. ಕರ್ನಾಟಕ ಸರ್ಕಾರ, ಮುಖಂಡರು, ವಿರೋಧ ಪಕ್ಷದವರು, ಕಾರ್ಯಕರ್ತರು ಬಂದು ವಿಚಾರಿಸಿದ್ದಾರೆ.  ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ ದಾಮೋದರ ಮೋದಿ ತಿಳಿಸಿದ್ದಾರೆ.

ಇಲ್ಲಿನ ಕಡಕೊಳ ಬಳಿ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪ್ರಹ್ಲಾದ ದಾಮೋದರ ಮೋದಿ ಅವರು ಚೇತರಿಸಿಕೊಂಡಿದ್ದು, ಇಂದು ಜೆಎಸ್ಎಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ.ಮಧು, ಶಾಸಕ ಎಸ್.ಎ.ರಾಮದಾಸ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದರು.

ಈ ವೇಳೆ ಮಾತನಾಡಿದ ಅವರು, ನಾನು, ನಮ್ಮ ಕುಟುಂಬದವರು ಪ್ರಯಾಣ ಮಾಡುತ್ತಿದ್ದೆವು.  ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ಯಾರಿಗೂ ತೊಂದರೆ ಆಗಲಿಲ್ಲ. ಕಮಾಂಡ್, ಪೊಲೀಸ್ ಸಿಬ್ಬಂದಿ ಜತೆಗೆ ಇದ್ದರು. ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದೇವೆ ಎಂದರು.

ಎರಡು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದೆವು.  ಒಂದು ಕಾರಿನಲ್ಲಿ ನಾನು, ಮಗ, ಸೊಸೆ, ಮೊಮ್ಮಗ ಇದ್ದೆವು. ಮತ್ತೊಂದು ಕಾರಿನಲ್ಲಿ ಮಗಳು, ಅಳಿಯ ಮತ್ತು ಕುಟುಂಬದವರು ಇದ್ದರು. ಕಾರು ನನ್ನ ಸ್ನೇಹಿತ ರಾಜಶೇಖರ್ ಅವರದ್ದು.  ಬೆಂಗಳೂರಿನಲ್ಲಿ ಕಾರು ಪಡೆದು ಕೊಂಡಿದ್ದೆವು. ಚಾಲಕನದ್ದೂ ಏನೂ ತಪ್ಪಿಲ್ಲ.  ಎಸ್ಕಾರ್ಟ್ ಇದ್ದ ಕಾರಣ ಅತಿ ವೇಗದಲ್ಲಿ ಹೋಗಲು ಅವಕಾಶವೇ ಇರಲಿಲ್ಲ. ಅಚಾನಕ್ಕಾಗಿ ಅಪಘಾತವಾಗಿದೆ. ಸೀಟ್ ಬೆಲ್ಟ್ ಹಾಕಿದ್ದೆವು, ಏರ್ಬ್ಯಾಗ್ ಓಪನ್ ಆಗಿದ್ದರಿಂದ ತೊಂದರೆ ಆಗಲಿಲ್ಲ ಎಂದು ಮಾಹಿತಿ ನೀಡಿದರು.

ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಯಾರಿಗೂ ತೊಂದರೆ ಆಗಿಲ್ಲವೆಂದು ಹೇಳಿದ್ದೇನೆ. ಚಿಕಿತ್ಸೆ ಮುಗಿಸಿದ ಬಳಿಕ ಗುಜರಾತ್’ಗೆ ಹೋಗುತ್ತೇವೆ ಎಂದು ಪ್ರಹ್ಲಾದ್ ಮೋದಿ ಹೇಳಿದರು.

ಹಿಂದಿನ ಲೇಖನಆರ್.ವಿ.ದೇಶಪಾಂಡೆಗೆ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ
ಮುಂದಿನ ಲೇಖನಪಾಲನೆಯಾಗದ ಸುಪ್ರೀಂ ತೀರ್ಪು: ಒಬಿಸಿ ಮೀಸಲಾತಿ ಇಲ್ಲದೆ ಯುಪಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಅಲಾಹಾಬಾದ್ ಹೈಕೋರ್ಟ್ ಆದೇಶ