ಮನೆ ಶಿಕ್ಷಣ 402 PSI ಹುದ್ದೆಗಳ ಲಿಖಿತ ಪರೀಕ್ಷೆ ಮುಂದೂಡಿಕೆ

402 PSI ಹುದ್ದೆಗಳ ಲಿಖಿತ ಪರೀಕ್ಷೆ ಮುಂದೂಡಿಕೆ

0

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆ 402 PSI ಹುದ್ದೆಗಳ ಲಿಖಿತ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ.

ಮೇ 8 ರಂದು ನಿಗದಿಯಾಗಿದ್ದ ಪಿಎಸ್​ ಐ ನೇಮಕಾತಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶ ಹೊರಡಿಸಿದೆ. ಅಲ್ಲದೆ, ಶೀಘ್ರದಲ್ಲೇ ಮುಂದಿನ ದಿನಾಂಕವನ್ನು ಪ್ರಾಧಿಕಾರದ ವೆಬ್​ ಸೈಟ್​ನಲ್ಲಿ ಪ್ರಕಟಿಸುವುದಾಗಿ ತಿಳಿಸಿದೆ.

2021ನೇ ಸಾಲಿನಲ್ಲಿ ಅಧಿಸೂಚಿಸಿದ್ದ ಹುದ್ದೆಗಳು ಇವಾಗಿದ್ದು, ಮೇ 8 ರಂದು ಲಿಖಿತ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತು. ಈ ವೇಳಾಪಟ್ಟಿಗೆ ಯಾವುದೇ ಆಕ್ಷೇಪಣೆ ಹಾಗೂ ಆಡಳಿತಾತ್ಮಕ ಸಮಸ್ಯೆಗಳು ಎದುರಾಗದಿದ್ದಲ್ಲಿ ಇದೇ ದಿನಾಂಕದಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು.

ಸಹಿಷ್ಣುತೆ ಪರೀಕ್ಷೆ ಹಾಗೂ ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಲಿಖಿತ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಒಟ್ಟು ಎರಡು ರೀತಿಯ ಪ್ರಶ್ನೆ ಪತ್ರಿಕೆಗಳು ಇರಲಿವೆ. ಮೊದಲ ಪತ್ರಿಕೆ ಪ್ರಬಂಧ, ಸಾರಂಶ, ಭಾಷಾಂತರ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಎರಡನೇ ಪತ್ರಿಕೆಯು ವಸ್ತುನಿಷ್ಟ ಮಾದರಿಯದಾಗಿದ್ದು, ಬಹುವಿಧ ಆಯ್ಕೆ ಉತ್ತರಗಳ ಲಿಖಿತ ಪರೀಕ್ಷೆ ಇರುತ್ತದೆ. ಎರಡೂ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲಿಷ್ ​ನಲ್ಲಿ ಇರಲಿದೆ.

ಹಿಂದಿನ ಲೇಖನಮರ್ಮಾಂಗದ ಫೋಟೋ ಕಳಿಸಿ ವಿದ್ಯಾರ್ಥಿನಿಯರನ್ನು ಕಿರುಕುಳ ನೀಡುತ್ತಿದ್ದ ಪ್ರೊಬೇಷನರಿ ಪಿಎಸ್ಐ ವಿರುದ್ಧ ದೂರು ದಾಖಲು
ಮುಂದಿನ ಲೇಖನಬಿಬಿಎಂಪಿ ಸಹಾಯಕ ಸಿವಿಲ್‌ ಎಂಜಿನಿಯರ್‌ ಹುದ್ದೆಗಳ ನೇಮಕಾತಿ ವಿಳಂಬ: ಕೆಪಿಎಸ್‌ಸಿಗೆ ಹೈಕೋರ್ಟ್‌ ನೋಟಿಸ್‌