ಮೈಸೂರು : ಆನ್ ಲೈನ್ ನಲ್ಲಿ ಬ್ಯುಸಿನೆಸ್ ಮಾಡುವ ಆಫರ್ ನೀಡಿದ ವಂಚಕನೊಬ್ಬ ಮಹಿಳೆಗೆ ೪೨.೮೦ ಲಕ್ಷ ದೋಖಾ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಚಾಮರಾಜಪುರಂ ನಿವಾಸಿ ಸಂಗೀತಾ ಎಂಬುವರೇ ಹಣ ಕಳೆದುಕೊಂಡ ಮಹಿಳೆ. ಟೆಲಿಗ್ರಾಂ ಆಪ್ ನಲ್ಲಿ ಆನ್ ಲೈನ್ ವ್ಯವಹಾರ ಮಾಡುವುದಾಗಿ ನಂಬಿಸಿದ ವಂಚಕ ಸಂಗೀತಾರಿಂದ ಹಂತ ಹಂತವಾಗಿ ಹಣ ಪಡೆದು ವಂಚಿಸಿದ್ದಾನೆ. ಒಟ್ಟು ೪೨.೮೦ ಲಕ್ಷ ಕಳೆದುಕೊಂಡ ಸಂಗೀತಾ ರವರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Saval TV on YouTube