ಮೈಸೂರು : ಜಿಲ್ಲೆಯ ನಂಜನಗೂಡಿನ ಕಪಿಲಾ ನದಿಯ ದಡದಲ್ಲಿ ಅರಣ್ಯ ಇಲಾಖೆ ಬೆಳೆಸಿದ್ದ, ಮರಗಳ ಕಡಿದ ಆರೋಪಿಯನ್ನು ಬಂಧಿಸಲಾಗಿದೆ. ಆಲತ್ತೂರು ಗ್ರಾಮದ ಕೃಷ್ಣ (45) ಬಂಧಿತ ಆರೋಪಿ ಎನ್ನಲಾಗಿದೆ.
ಮಾರ್ಚ್ 8 ರಂದು ಹೆಜ್ಜಿಗೆ ಗ್ರಾಮ ಕಪಿಲಾ ನದಿ ದಂಡೆಯಲ್ಲಿ ಬೆಳೆದಿದ್ದ 45 ವಿವಿಧ ಜಾತಿಯ ಮರಗಳನ್ನ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಕಡಿದುಹಾಕಲಾಗಿತ್ತು. ಈ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣ ನಡೆದು ಹಲವು ದಿನಗಳಾದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮಾರ್ಚ್ 10 ರಂದು ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಖಡಕ್ ವಾರ್ನಿಂಗ್ ನೀಡಿದ್ದರು. ಘಟನೆ ನಡೆದು 17 ದಿನಗಳ ನಂತರ ಎಚ್ಚೆತ್ತ ಅಧಿಕಾರಿಗಳು ಓರ್ವನನ್ನು ಬಂಧಿಸಿದ್ದಾರೆ.















