ಮನೆ ದೇವರ ನಾಮ ಹಾಡು ಕೋಗಿಲೆ ನಲಿದಾಡು ಕೋಗಿಲೆ

ಹಾಡು ಕೋಗಿಲೆ ನಲಿದಾಡು ಕೋಗಿಲೆ

0

ಹಾಡು ಕೋಗಿಲೆ ನಲಿದಾಡು ಕೋಗಿಲೆ

ರಾಘವೇಂದ್ರ, ರಾಘವೇಂದ್ರ

ರಾಘವೇಂದ್ರ, ರಾಘವೇಂದ್ರ

ಎಂದು ಹಾಡು ಈಗಲೆ ಎಂದು ಹಾಡು ಈಗಲೇ

||ಹಾಡು ಕೋಗಿಲೆ||

ಹರಿವ ನದಿಯ ಕಲರವದಲಿ ನಿನ್ನ ದನಿಯು ಸೇರಲಿ

ಗಾಳಿಯೊಡನೆ ತೇಲಿ ಹೋಗಿ ದೂರ ದೂರ ಸಾಗಲಿ

ಎಲ್ಲಿ ತಿರುಗಲಲ್ಲಿ ನಿನ್ನ ಮಧುರ ಗಾನ ಕೇಳಲಿ

ಮಧುರ ಗಾನ ಕೇಳಲೀ ||ಹಾಡು ಕೋಗಿಲೆ||

ಮಧುವನರಸಿ ಹೋಗುತಿರುವ ದುಂಬಿಗಳು ಕೇಳಲಿ

ಹೃದಯ ತುಂಬಿ ಬಂದ ದನಿಗೆ ತಮ್ಮ ಶೃತಿಯ ಬೆರಸಲಿ ಕುಸುಮ ಕುಸುಮದಲ್ಲು ಅವನ

ನಾಮ ತುಂಬಿ ಹೋಗಲಿ||ಹಾಡು ಕೋಗಿಲೆ||

ನಿನ್ನ ದನಿಯ ಸವಿಯ ಕೇಳಿ ಜೀವ ರಾಶಿ ನಲಿಯಲಿ

ಎಲ್ಲ ಮರೆತು ನಿನ್ನ ಸ್ವರಕೆ ಎಲ್ಲ ಮರೆತು ನಿನ್ನ ಸ್ವರಕೆ

ಕೊರಳ ಬೆರಸಿ ಹಾಡಲಿ ರಾಘವೇಂದ್ರನೆಂಬ ಧ್ಯಾನ

ಜಗವನೆಲ್ಲ ಕುಣಿಸಲಿ ಜಗವನೆಲ್ಲ ಕುಣಿಸಲೀ

||ಹಾಡು ಕೋಗಿಲೆ||

ಹಿಂದಿನ ಲೇಖನಶಾಲೆಗಳು ಎಲ್ಲಾ ಮಕ್ಕಳಿಗೂ ಸುರಕ್ಷಿತ ಸ್ಥಳವಾಗಬೇಕು: ಡಾ. ಕೆ ವಿ ರಾಜೇಂದ್ರ
ಮುಂದಿನ ಲೇಖನಯೋಗದಿಂದ ಮಧುಮೇಹವನ್ನು ನಿಯಂತ್ರಿಸಬಹುದು