ಮನೆ ಸುದ್ದಿ ಜಾಲ ಹರ್ಷನ ಕುಟುಂಬಕ್ಕೆ  50 ಲಕ್ಷಕ್ಕೂ ಹೆಚ್ಚು ಆರ್ಥಿಕ ನೆರವು

ಹರ್ಷನ ಕುಟುಂಬಕ್ಕೆ  50 ಲಕ್ಷಕ್ಕೂ ಹೆಚ್ಚು ಆರ್ಥಿಕ ನೆರವು

0

ಶಿವಮೊಗ್ಗ: ಮೃತ ಹರ್ಷ ಅವರ ಕುಟುಂಬಕ್ಕೆ ಸಾಕಷ್ಟು ನೆರವು ಹರಿದುಬರುತ್ತಿದ್ದು, ಬಹುತೇಕರು ಮೃತರ ತಾಯಿ ಪದ್ಮಾ ಅವರ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಖಾತೆಗೆ ಹಣ ನೀಡುತ್ತಿದ್ದಾರೆ. ಕೆಲವರು ಹರ್ಷ ಅವರ ಖಾತೆಗೆ ಜಮೆ ಮಾಡಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ₹ 10 ಲಕ್ಷ ಬಿಜೆಪಿ ಯುವ ಮೋರ್ಚಾ ₹ 5 ಲಕ್ಷ, ಉನ್ನತ ಶಿಕ್ಷಣ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ ಅವರು ತಮ್ಮ ಫೌಂಡೇಷನ್‌ನಿಂದ ₹ 10 ಲಕ್ಷ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ₹ 6 ಲಕ್ಷ ಸೇರಿ ಹಲವರು ನೆರವು ನೀಡಿದ್ದಾರೆ.

ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್ ತಲಾ ₹ 2 ಲಕ್ಷ ಸೇರಿದಂತೆ ಇದುವರೆಗೂ ₹ 50 ಲಕ್ಷಕ್ಕೂ ಹೆಚ್ಚು ನೆರವು ಹರಿದುಬಂದಿದೆ. ಇನ್ನಷ್ಟು ನೆರವು ದೊರಕುವ ನಿರೀಕ್ಷೆ ಇದೆ. ಹರ್ಷ ಅವರ ತಂದೆ ನಾಗರಾಜ್ ಟೈಲರಿಂಗ್‌ ವೃತ್ತಿ ಮಾಡುತ್ತಿದ್ದಾರೆ. ತಾಯಿ ಗೃಹಿಣಿ. ಇಬ್ಬರೂ ಸಹೋದರಿಯರ ಮದುವೆಯಾಗಿದೆ.