ಮನೆ ರಾಜ್ಯ ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

0

ಕೊಪ್ಪಳ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗೆ ಒತ್ತಾಯಿಸಿ ಡಿ.10 ರಂದು 5 ಸಾವಿರ ಟ್ರ್ಯಾಕ್ಟರ್ ಹಾಗೂ 10 ಸಾವಿರ ವಕೀಲರ ಮೂಲಕ ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ‌ ನೀಡರು.

Join Our Whatsapp Group

ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪಂಚಮಸಾಲಿ ಸಮಾಜ ಮೀಸಲಾತಿಗಾಗಿ ಹೋರಾಟ ನಿರಂತರ ನಡೆಸಿದೆ. ನಿರಂತರ ಹೋರಾಟಕ್ಕೆ ಸಮಾಜದಿಂದ ಬೆಂಬಲ ದೊರೆತಿದೆ. ಕಳೆದ 30 ವರ್ಷಗಳಿಂದ ಮೀಸಲಾತಿಯ ಹೋರಾಟ ನಡೆದಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಹೋರಾಟ ತೀವ್ರ ವಾಗಿತ್ತು. ಹೋರಾಟ ನಡೆದಿತ್ತು. ಈ ಸರ್ಕಾರದಲ್ಲಿ ನಮಗೆ ಮೀಸಲಾತಿ ದೊರೆಯುವ ಭರವಸೆ ಇತ್ತು. ಆದರೆ ಎರಡು ವರ್ಷ ಕಳೆಯುತ್ತಾ ಬಂದರೂ ನಮಗೆ ಭರವಸೆ ಸಿಗುತ್ತಿಲ್ಲ.  ನಮ್ಮ ಹೋರಾಟ ಯಾವುದೇ ಪಕ್ಷದ ವಿರುದ್ದವಲ್ಲ. ಈ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಮಗೆ ಸ್ಪಂದನೆ ಮಾಡದೇ ಇದ್ದಾಗ ವಕೀಲರ ಮೂಲಕ ಬೆಳಗಾವಿ ಸಮಾವೇಶದ ಹೋರಾಟ ಆರಂಭ ಮಾಡಿದವು. ಇದನ್ನರಿತು ಸಿಎಂ ಬೆಂಗಳೂರಲ್ಲಿ ಸಿಎಂ ಸಭೆ ಕರೆದರು. ನಮ್ಮ ಶಾಸಕರು ಸಿಎಂಗೆ ಒತ್ತಡ ಹಾಕಿದರು. ಆದರೆ ಸಿಎಂರಿಂದ ಸ್ಪಷ್ಟ ಉತ್ತರ ಸಿಗಲಿಲ್ಲ. ಈಗ ಉಪ ಚುನಾವಣೆ ಇವೆ ಎಂದು ಹೇಳಿದರು. ಆ ನೀತಿ ಸಂಹಿತೆಗೂ ಚುನಾವಣೆಗೂ ಸಂಬಂಧ ಇಲ್ಲ ಹೇಳಿ ಭರವಸೆ ಕೊಡಿ ಎಂದೆವು. ಕನಿಷ್ಟ ಪಕ್ಷ ಎಲ್ಲ ಲಿಂಗಾಯತಕ್ಕೆ ಕೇಂದ್ರದಲ್ಲಿ ಓಬಿಸಿಗೆ ಶಿಫಾರಸ್ಸು ಮಾಡಿ ಎಂದವು. ಅದಕ್ಕೂ ಹಾರಿಕೆಯ ಉತ್ತರ ನೀಡಿದರು. ಹಾಗಾಗಿ ನಾವು ಕ್ರಾಂತಿಕಾರಿಯ ಹೋರಾಟ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ ಎಂದರು.

ಡಿ. 10 ರಂದು ಲಕ್ಷಾಂತರ ಪಂಚಮಸಾಲಿಗಳು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ. ಈಗಾಗಲೇ ಎಲ್ಲ ಜಿಲ್ಲೆಗಳಲ್ಲಿ ಸಮಾಜದ ಸಭೆ ಮಾಡಿದೆ. ಎಲ್ಲಾ ಪದಾಧಿಕಾರಿಗಳ ಸಭೆ ನಡೆಸಲಾಗಿದೆ. ಪಂಚಮಸಾಲಿಗಳಿಂದ ಟ್ರ್ಯಾಕ್ಟರ್ ಚಳುವಳಿ ನಡೆಯಲಿದೆ. ಹಳ್ಳಿಗೊಂದು ಟ್ರ್ಯಾಕ್ಟರ್ ತನ್ನಿ ಎಂದು ಕರೆ ನೀಡಿದ್ದೇವೆ. ಸರ್ಕಾರದ ಬೆದರಿಕೆ ಹಾಗೂ ಆಮಿಷಕ್ಕೆ ಒಳಗಾಗಿ ಬಿಡಬೇಡಿ. ಸಮಾಜ ಬೆಂಬಲ ಕೊಡಬೇಕು ಎಂದು ಹೇಳಿದ್ದೇವೆ. ಈ ಸರ್ಕಾರ ನಮ್ಮ ವಾಹನ ತಡೆಯುವ ಕೆಲಸ ಮಾಡಬಾರದು‌. ಅಂದಿನ ಹೋರಾಟ ಯಾವ ಸ್ವರೂಪಕ್ಕಾದರೂ ತಿರುವು ಪಡೆಯಬಹುದು. ಹೋರಾಟದ ವೇಳೆ ಏನಾದರೂ ಆದರೆ ಈ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರಲ್ಲದೇ ಅಷ್ಟರೊಳಗೆ ಸಿಎಂ ಅವರು ಸಚಿವ ಸಂಪುಟ ಸಭೆ ಕರೆದು ನಿರ್ಣಯ ಕೈಗೊಳ್ಳಲಿ ಎಂದರು.