ಮನೆ ಅಂತಾರಾಷ್ಟ್ರೀಯ ಅಂಡಮಾನ್ ಮತ್ತು ನಿಕೋಬಾರ್’ನಲ್ಲಿ 6 ಬಾರಿ ಕಂಪಿಸಿದ ಭೂಮಿ

ಅಂಡಮಾನ್ ಮತ್ತು ನಿಕೋಬಾರ್’ನಲ್ಲಿ 6 ಬಾರಿ ಕಂಪಿಸಿದ ಭೂಮಿ

0

ಅಂಡಮಾನ್ ಮತ್ತು ನಿಕೋಬಾರ್: ಭಾನುವಾರ ಮಧ್ಯಾಹ್ನದಿಂದ ಸೋಮವಾರ ನಸುಕಿನ ಜಾವದವರೆಗೆ ಅಂಡಮಾನ್​ ಮತ್ತು ನಿಕೋಬಾರ್ ದ್ವೀಪದಲ್ಲಿ 6 ಬಾರಿ ಭೂಮಿ ಕಂಪಿಸಿದ್ದು, ಆತಂಕಕ್ಕೆ ಕಾರಣವಾಗಿದೆ

Join Our Whatsapp Group

ಇಲ್ಲಿನ ಕ್ಯಾಂಪ್‌ ಬೆಲ್ ಕೊಲ್ಲಿಯಲ್ಲಿ ಸೋಮವಾರ ನಸುಕಿನ ಜಾವ 2.26 ಗಂಟೆಯ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ಕ್ಯಾಂಪ್​ ಬೆಲ್​ ಕೊಲ್ಲಿಯ ಉತ್ತರದಿಂದ 220 ಕಿಲೋ ಮೀಟರ್​ ದೂರದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದ್ದು, 32 ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ. 4.6ರಷ್ಟು ತೀವ್ರತೆಯ ಕಂಪನ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಅಧ್ಯಯನ ಕೇಂದ್ರ ಟ್ವೀಟ್​ ಮಾಡಿದೆ.

ಕ್ಯಾಂಪ್​ ಬೆಲ್​ ಕೊಲ್ಲಿಯಲ್ಲಿ ಭೂಕಂಪ ಸಂಭವಿಸುವ ಒಂದು ಗಂಟೆ ಮುನ್ನ ಅಂಡಮಾನ್​’ನ ಡಿಗ್ಲಿಪುರ್​ ಎಂಬಲ್ಲಿ ಭೂಮಿ ಕಂಪಿಸಿತ್ತು. ನಸುಕಿನ ಜಾವ 1.07 ಗಂಟೆಯ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ಡಿಗ್ಲಿಪುರ್​ ಪೂರ್ವದಿಂದ ಸುಮಾರು 34 ಕಿ.ಮೀ ದೂರದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದ್ದು, 15 ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ.3.9ರಷ್ಟು ತೀವ್ರತೆಯ ಭೂಮಿ ಕಂಪಿಸಿದೆ.

ಅಂಡಮಾನ್ ಮತ್ತು ನಿಕೋಬಾರ್ ​ನಲ್ಲಿ ಐದು ಗಂಟೆಗಳ ಅವಧಿಯಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿರುವುದರ ಬಗ್ಗೆ ವರದಿಯಾಗಿದೆ. ಭಾನುವಾರ ನಿಕೋಬಾರ್​ ದ್ವೀಪದಲ್ಲಿ ಸಂಜೆ 5.47ಕ್ಕೆ ಸುಮಾರು 37 ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ.5.5ರಷ್ಟು ತೀವ್ರತೆಯ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.

ನಿಕೋಬಾರ್​ ದ್ವೀಪದಲ್ಲಿ ಭಾನುವಾರ ಸಂಜೆ 4.01ಕ್ಕೆ ಸುಮಾರು 10 ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ.5.3ರಷ್ಟು ತೀವ್ರತೆಯ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್​ ಮಾಡಿದೆ.

ಆದರೆ ಈವರೆಗೆ ಯಾವುದೇ ಪ್ರಾಣ ಮತ್ತು ಆಸ್ತಿಪಾಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ. ಪದೇ ಪದೆ ಭೂಮಿ ಕಂಪಿಸಿರುವುದರಿಂದ ಅಲ್ಲಿನ ಜನರಲ್ಲಿ ಆತಂಕ ಮನೆಮಾಡಿದೆ.