ಮನೆ ಅಪರಾಧ ಮಾದರಿ ನೀತಿ ಸಂಹಿತೆ ಜಾರಿ: 99 ಕೋಟಿಗೂ ಹೆಚ್ಚು ಮೌಲ್ಯದ ಸ್ವತ್ತು ವಶ

ಮಾದರಿ ನೀತಿ ಸಂಹಿತೆ ಜಾರಿ: 99 ಕೋಟಿಗೂ ಹೆಚ್ಚು ಮೌಲ್ಯದ ಸ್ವತ್ತು ವಶ

0

ಬೆಂಗಳೂರು: ಚುನಾವಣಾ ಅಕ್ರಮ ತಡೆಗೆ ಸ್ಥಾಪಿಸಿರುವ ತನಿಖಾ ಠಾಣೆಗಳು ಮತ್ತು ನೇಮಿಸಿರುವ ಜಾಗೃತ ದಳಗಳು ಮಾರ್ಚ್‌ 29ರಿಂದ ಈವರೆಗೆ ವಶಪಡಿಸಿಕೊಂಡಿರುವ ನಗದು, ಮದ್ಯ, ಉಚಿತ ಕೊಡುಗೆಗೆ ಬಳಸುವ ಉತ್ಪನ್ನಗಳ ಒಟ್ಟು ಮೌಲ್ಯ ₹ 99.18 ಕೋಟಿ ತಲುಪಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

Join Our Whatsapp Group

ದೈನೆಂದಿನ ಬುಲೆಟಿನ್​ ಪ್ರಕಾರ, ಮಾರ್ಚ್​​ 29 ರಂದು ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಅಂದಿನಿಂದ ಇಲ್ಲಿಯವರೆಗು ಒಟ್ಟು 99.18 ಕೋಟಿಯಷ್ಟು ಹಣ ಮತ್ತು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಕೇವಲ 10 ದಿನಗಳಲ್ಲಿ 36.8 ಕೋಟಿ ರೂ. ಹಣ, 15.46 ಕೋಟಿ ರೂ. ಬೆಲೆಯ ಉಚಿತ ವಸ್ತುಗಳು, 30 ಕೋಟಿ ರೂ. ಬೆಲೆಯ 5.2 ಲಕ್ಷ ಲೀಟರ್​ ಮದ್ಯ, 15 ಕೋಟಿ ರೂ. ಬೆಲೆಯ ಬಂಗಾರ ಮತ್ತು 2.5 ಕೋಟಿ ರೂ. ಬೆಲೆಯ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ರವಿವಾರ (ಏ.09) ಯಾದಗಿರಿ ಜಿಲ್ಲೆಯಲ್ಲಿ 34 ಲಕ್ಷ ರೂ. ಹಣ, 21 ಲಕ್ಷ ರೂ. ಮೌಲ್ಯದ 56 ಟಿವಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಕ್ಷೇತ್ರದಲ್ಲಿ ಸ್ಟಾಟಿಕ್ ಸರ್ವೆಲೆನ್ಸ್ ತಂಡ ವಶಪಡಿಸಿಕೊಂಡಿದೆ. ಹೀಗೆ ಅಬಕಾರಿ ಇಲಾಖೆಯ ಅಧಿಕಾರಿಗಳು 1.62 ಕೋಟಿ ರೂ ಮೌಲ್ಯದ 54,282 ಲೀಟರ್​​ನಷ್ಟು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

5.59 ಲಕ್ಷ ನಗದು, 19 ಲಕ್ಷದ ಮದ್ಯ ಜಪ್ತಿ

ಮೈಸೂರು: ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ವಿಶೇಷ ದಳ, ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳ ತಂಡ ₹ 5.59 ಲಕ್ಷ ನಗದು, ₹19 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

224 ಸದಸ್ಯರ ಬಲದ ಕರ್ನಾಟಕ ವಿಧಾನಸಭೆಗೆ ಮೇ 10 ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಘೋಷಣೆಯಾಗಲಿದೆ. ಈ ಸಂಬಂಧ ಪ್ರಮುಖ ಮೂರು ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ.