ಮನೆ ಸುದ್ದಿ ಜಾಲ ಐಎಎಫ್‌ನ ಮೂರು ವಿಮಾನಗಳಲ್ಲಿ 629 ಭಾರತೀಯರು ಸ್ವದೇಶಕ್ಕೆ ವಾಪಾಸ್

ಐಎಎಫ್‌ನ ಮೂರು ವಿಮಾನಗಳಲ್ಲಿ 629 ಭಾರತೀಯರು ಸ್ವದೇಶಕ್ಕೆ ವಾಪಾಸ್

0

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ 629 ಭಾರತೀಯರನ್ನು ಐಎಎಫ್‌ನ ಮೂರು ವಿಮಾನಗಳ ಮೂಲಕ ಶನಿವಾರ ಬೆಳಿಗ್ಗೆ ಸ್ವದೇಶಕ್ಕೆ ಕರೆತಲಾಗಿದೆ.

ಉಕ್ರೇನ್‌ನ ನೆರೆಯ ರಾಷ್ಟ್ರಗಳಾದ ರೊಮೇನಿಯಾ, ಸ್ಲೋವಾಕಿಯಾ ಹಾಗೂ ಪೊಲೆಂಡ್‌ನಿಂದ ಹಾರಾಟ ಆರಂಭಿಸಿದ ಈ ವಿಮಾನಗಳು ದೆಹಲಿಯ ಹಿಂಡನ್ ವಾಯುನೆಲೆಗೆ ಬಂದಿಳಿದಿವೆ ಎಂದು ವಾಯುಪಡೆಯು ತಿಳಿಸಿದೆ.

ಉಕ್ರೇನ್ ವಾಯುಪ್ರದೇಶ ಸಂಪೂರ್ಣವಾಗಿ ಮುಚ್ಚಿರುವುದರಿಂದ ಭಾರತವು ಫೆಬ್ರುವರಿ 24ರಿಂದ ಉಕ್ರೇನ್ ನೆರೆ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಮತ್ತು ಪೊಲೆಂಡ್‌ನಿಂದ ನಾಗರಿಕರನ್ನು ಸ್ಥಳಾಂತರಿಸುತ್ತಿದೆ.’ಆಪರೇಷನ್ ಗಂಗಾ’ ಭಾಗವಾಗಿ ಇಲ್ಲಿಯವರೆಗೆ 2,056 ಭಾರತೀಯರನ್ನು ಕರೆ ತರಲು ವಾಯುಪಡೆಯು 10 ವಿಮಾನಗಳ ಹಾರಾಟ ನಡೆಸಿದ್ದು, 26 ಟನ್ ಪರಿಹಾರ ಸಾಮಾಗ್ರಿಗಳನ್ನು ಹೊತ್ತೊಯ್ದಿದೆ.ಭಾರತೀಯ ವಾಯುಪಡೆಯು ಈ ಮಹತ್ವದ ಕಾರ್ಯಾಚರಣೆಗೆ ಸಿ-17 ವಿಮಾನಗಳನ್ನು ಬಳಕೆ ಮಾಡುತ್ತಿವೆ.