ಕೀವ್: ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ಯುದ್ಧ ಸಾರಿ ನಿರಂತರ ದಾಳಿ ನಡೆಸಿರುವ ರಷ್ಯಾ ಇದೀಗ ಕದನ ವಿರಾಮ ಘೋಷಣೆ ಮಾಡಿದೆ.
ಸಾರ್ವಜನಿಕ ಜೀವಹಾನಿ ತಡೆಗೆ ಉಕ್ರೇನ್ ನ ಮರಿಯೂಪೋಲ್ ವೋಲ್ನೋವಾಕ್ ಎರಡು ನಗರಗಳಲ್ಲಿ ರಷ್ಯಾ ಕದನ ವಿರಾಮ ಘೋಷಣೆ ಮಾಡಿದೆ. ಇಂದು ಬೆಳಿಗೆ 11.30ಕ್ಕೆ ಕದನ ವಿರಾಮ ಘೋಷಿಸಿರುವ ರಷ್ಯಾ ನಾಗರೀಕರಿಗೆ ಉಕ್ರೇನ್ ತೊರೆಯುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.
ಜಾಗತೀಕ ಒತ್ತಡ ಉಂಟಾದ ಹಿನ್ನೆಲೆ ರಷ್ಯಾ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.