ಮನೆ ಮನರಂಜನೆ 68ನೇ ಫಿಲ್ಮ್’ಫೇರ್ ಪ್ರಶಸ್ತಿ ಪ್ರಕಟ: ‘ಗಂಗೂಬಾಯಿ ಕಥಿಯಾವಾಡಿ’ & ‘ಬಧಾಯಿ ದೋ’ ಸಿನಿಮಾಗಳಿಗೆ ಸಿಂಹಪಾಲು

68ನೇ ಫಿಲ್ಮ್’ಫೇರ್ ಪ್ರಶಸ್ತಿ ಪ್ರಕಟ: ‘ಗಂಗೂಬಾಯಿ ಕಥಿಯಾವಾಡಿ’ & ‘ಬಧಾಯಿ ದೋ’ ಸಿನಿಮಾಗಳಿಗೆ ಸಿಂಹಪಾಲು

0

ಪ್ರತಿಷ್ಠಿತ 68ನೇ ಫಿಲ್ಮ್ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ಮುಂಬೈನಲ್ಲಿ ಅದ್ದೂರಿಯಾಗಿ ನಡೆದಿದೆ. ಬಾಲಿವುಡ್ ನ ಘಟಾನುಘಟಿ ಕಲಾವಿದರಾದ ಅನೀಲ್ ಕಪೂರ್, ರೇಖಾ ಮುಂತಾದವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

Join Our Whatsapp Group

ಆಲಿಯಾ ಭಟ್, ಜಾಹ್ನವಿ ಕಪೂರ್, ನೋರಾ ಫತೇಹಿ, ವಿಕ್ಕಿ ಕೌಶಲ್ ಸೇರಿದಂತೆ ಸಾಕಷ್ಟು ಬಾಲಿವುಡ್ ತಾರೆಯರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ರಂಗು ತುಂಬಿದರು. ಈ ಬಾರಿ ಪ್ರಶಸ್ತಿ ಪಟ್ಟಿಯಲ್ಲಿ ‘ಗಂಗೂಬಾಯಿ ಕಥಿಯಾವಾಡಿ’ & ‘ಬಧಾಯಿ ದೋ’ ಸಿನಿಮಾಗಳಿಗೆ ಸಿಂಹಪಾಲು ಸಿಕ್ಕಿದೆ.

ನಟ ಸಲ್ಮಾನ್ ಖಾನ್ ಫಿಲ್ಮ್ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಿರೂಪಣೆ ಮಾಡಿದರು. ಅವರೊಂದಿಗೆ ಆಯುಷ್ಮಾನ್ ಖುರಾನಾ, ಮನೀಶ್ ಪೌಲ್ ಕೂಡ ಇದ್ದರು. ಜಿಯೋ ವರ್ಲ್ಡ್ ಕನ್ವೇಷನ್ ಸೆಂಟರ್ನಲ್ಲಿ ನಡೆದ ಈ ಸಮಾರಂಭದಲ್ಲಿ ವಿಕ್ಕಿ ಕೌಶಲ್, ಟೈಗರ್ ಶ್ರಾಫ್, ಜಾಹ್ನವಿ ಕಪೂರ್, ಜಾಕ್ವೇಲಿನ್ ಫರ್ನಾಂಡೀಸ್ ಮುಂತಾದವರು ಅದ್ಭುತವಾಗಿ ಡ್ಯಾನ್ಸ ಮಾಡಿ, ರಂಜಿಸಿದರು.

68ನೇ ಫಿಲ್ಮ್‌ಫೇರ್ ಪ್ರಶಸ್ತಿ ಪಟ್ಟಿ

ಅತ್ಯುತ್ತಮ ಸಿನಿಮಾ- ಗಂಗೂಬಾಯಿ ಕಥಿಯಾವಾಡಿ

ಅತ್ಯುತ್ತಮ ನಟ- ರಾಜ್ಕುಮಾರ್ ರಾವ್ (ಬಧಾಯಿ ದೋ)

ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)- ಬಧಾಯಿ ದೋ (ನಿರ್ದೇಶನ: ಹರ್ಷವರ್ಧನ್ ಕುಲಕರ್ಣಿ)

ಅತ್ಯುತ್ತಮ ನಟ (ಕ್ರಿಟಿಕ್ಸ್)- ಸಂಜಯ್ ಮಿಶ್ರಾ (ವಧ್)

ಅತ್ಯುತ್ತಮ ನಟಿ- ಆಲಿಯಾ ಭಟ್ (ಗಂಗೂಬಾಯಿ ಕಥಿಯಾವಾಡಿ)

ಅತ್ಯುತ್ತಮ ನಟಿ (ಕ್ರಿಟಿಕ್ಸ್)- ಭೂಮಿ ಪೆಡ್ನೇಕರ್ (ಬಧಾಯಿ ದೋ)

ಅತ್ಯುತ್ತಮ ನಟಿ (ಕ್ರಿಟಿಕ್ಸ್)- ಟಬು (ಭೂಲ್ ಭುಲಯ್ಯಾ 2)

ಅತ್ಯುತ್ತಮ ನಿರ್ದೇಶಕ- ಸಂಜಯ್ ಲೀಲಾ ಬನ್ಸಾಲಿ (ಗಂಗೂಬಾಯಿ ಕಥಿಯಾವಾಡಿ)

ಅತ್ಯುತ್ತಮ ಪೋಷಕ ನಟ- ಅನೀಲ್ ಕಪೂರ್ (ಜುಗ್ಜುಗ್ ಜೀಯೋ)

ಅತ್ಯುತ್ತಮ ಪೋಷಕ ನಟಿ- ಶೀಬಾ ಚಡ್ಡಾ (ಬಧಾಯಿ ದೋ)

ಅತ್ಯುತ್ತಮ ಸಂಗೀತ ನಿರ್ದೇಶನ- ಪ್ರೀತಮ್ (ಬ್ರಹ್ಮಾಸ್ತ್ರ)

ಅತ್ಯುತ್ತಮ ಸಾಹಿತ್ಯ- ಅಮಿತಾಭ್ ಭಟ್ಟಾಚಾರ್ಯ (ಕೇಸರಿಯಾ- ಚಿತ್ರ: ಬ್ರಹ್ಮಾಸ್ತ್ರ)

ಅತ್ಯುತ್ತಮ ಗಾಯಕ- ಅರಿಜಿತ್ ಸಿಂಗ್ (ಕೇಸರಿಯಾ- ಚಿತ್ರ: ಬ್ರಹ್ಮಾಸ್ತ್ರ)

ಅತ್ಯುತ್ತಮ ಗಾಯಕಿ- ಕವಿತಾ ಸೇಠ್ (ರಂಗಿಸರಿ- ಚಿತ್ರ: ಜುಗ್ಜುಗ್ ಜೀಯೋ)

ಅತ್ಯುತ್ತಮ ಚೊಚ್ಚಲ ನಿರ್ದೇಶನ- ಜಸ್ಪಾಲ್ ಸಿಂಗ್ ಸಂಧು & ರಾಜೀವ್ ಬರ್ನಾವಾಲ್ (ವಧ್)

ಅತ್ಯುತ್ತಮ ಚೊಚ್ಚಲ ನಟ: ಅಂಕುಶ್ ಗೆದಮ್ (ಜುಂಡ್ )

ಅತ್ಯುತ್ತಮ ಚೊಚ್ಚಲ ನಟಿ: ಆಂಡ್ರೆಯಾ (ಅನೇಕ್)

ಅತ್ಯುತ್ತಮ ಸಂಭಾಷಣೆ: ಪ್ರಕಾಶ್ ಕಪಾಡಿಯಾ, ಉತ್ಕರ್ಷಿಣಿ ವಸಿಷ್ಠ (ಗಂಗೂಬಾಯಿ ಕಥಿಯಾವಾಡಿ)

ಅತ್ಯುತ್ತಮ ಚಿತ್ರಕಥೆ: ಅಕ್ಷತ್, ಸುಮನ್ ಅಧಿಕಾರಿ, ಹರ್ಷವರ್ಧನ್ ಕುಲಕರ್ಣಿ (ಬಧಾಯಿ ದೋ)

ಅತ್ಯುತ್ತಮ ಕಥೆ: ಅಕ್ಷತ್, ಸುಮನ್ ಅಧಿಕಾರಿ (ಬಧಾಯಿ ದೋ)

ಅತ್ಯುತ್ತಮ ಸಾಹಸ ನಿರ್ದೇಶನ: ಪರ್ವೇಜ್ ಶೇಕ್ (ವಿಕ್ರಮ್ ವೇದ)

ಅತ್ಯುತ್ತಮ ಹಿನ್ನೆಲೆ ಸಂಗೀತ: ಸಂಚಿತ್ ಬಲ್ಹಾರಾ & ಅಂಕಿತ್ ಬಲ್ಹಾರಾ (ಗಂಗೂಬಾಯಿ ಕಥಿಯಾವಾಡಿ)

ಅತ್ಯುತ್ತಮ ನೃತ್ಯ ನಿರ್ದೇಶನ: ಕೃತಿ ಮಹೇಶ್ (ಗಂಗೂಬಾಯಿ ಕಥಿಯಾವಾಡಿ)

ಅತ್ಯುತ್ತಮ ಛಾಯಾಗ್ರಹಣ: ಸಂದೀಪ್ ಚಟರ್ಜೀ (ಗಂಗೂಬಾಯಿ ಕಥಿಯಾವಾಡಿ)

ಅತ್ಯುತ್ತಮ ವಸ್ತ್ರ ವಿನ್ಯಾಸ: ಶೀತಲ್ ಇಕ್ಬಾಲ್ ಶರ್ಮಾ (ಗಂಗೂಬಾಯಿ ಕಥಿಯಾವಾಡಿ)

ಅತ್ಯುತ್ತಮ ಸಂಕಲನ: ನೀನಾದ್ (ಆ್ಯನ್ ಆ್ಯಕ್ಷನ್ ಹೀರೋ)

ಅತ್ಯುತ್ತಮ ನಿರ್ಮಾಣ ವಿನ್ಯಾಸ: ಸುಬ್ರತಾ ಚಕ್ರವರ್ತಿ & ಅಮಿತ್ ರೇ (ಗಂಗೂಬಾಯಿ ಕಥಿಯಾವಾಡಿ)

ಅತ್ಯುತ್ತಮ ಧ್ವನಿ ವಿನ್ಯಾಸ: ಬಿಶ್ವಾದೀಪ್ ದೀಪಕ್ ಚಟರ್ಜಿ (ಬ್ರಹ್ಮಾಸ್ತ್ರ)

ಅತ್ಯುತ್ತಮ ವಿಎಫ್ಎಕ್ಸ್: ಬ್ರಹ್ಮಾಸ್ತ್ರ