ಮನೆ ಕಾನೂನು ಹೈಕೋರ್ಟ್ ನಲ್ಲಿ ಹಿಜಾಬ್ ವಿವಾದ ವಿಚಾರಣೆ: ಮಧ್ಯಂತರ ಆದೇಶಕ್ಕೆ ಅರ್ಜಿದಾರರ ಪರ ವಕೀಲರಿಂದ ಮನವಿ

ಹೈಕೋರ್ಟ್ ನಲ್ಲಿ ಹಿಜಾಬ್ ವಿವಾದ ವಿಚಾರಣೆ: ಮಧ್ಯಂತರ ಆದೇಶಕ್ಕೆ ಅರ್ಜಿದಾರರ ಪರ ವಕೀಲರಿಂದ ಮನವಿ

0

ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು ಮಧ್ಯಂತರ ಆದೇಶ ನೀಡುವಂತೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದಾರೆ.

ಪ್ರಕರಣ ಸಂಬಂಧ ಅರ್ಜಿದಾರರ ವಿಚಾರಣೆ ಮುಂದುರೆಸಿದ ಹೈಕೋರ್ಟ್ ನ್ಯಾಯಾಧೀಶರು, ಪ್ರಕರಣ ವಿಸ್ತೃತ ಪೀಠಕ್ಕೆ ವಹಿಸುವ ಅಗತ್ಯವಿದೆ.  ನೀವು ಒಪ್ಪಿದರೇ ವಿಸ್ತೃತ ಪೀಠಕ್ಕೆ ವರ್ಗಾಯಿಸುವೆ. ಹಿಜಾಬ್ ವಿವಾದ ವಿಸ್ತೃತ ಪೀಠಕ್ಕೆ ಹೋಗಬೇಕೆಂಬುದೇ ನನ್ನ ಅಭಿಪ್ರಾಯ ಎಂದರು.

ಈ ವೇಳೆ ವಾದ  ಅರ್ಜಿದಾರ ಪರ ವಕೀಲ ಮಂಡಿಸಿದ ದೇವದತ್ ಕಾಮತ್ ವಿಸ್ತೃತ ಪೀಠಕ್ಕೆ ವರ್ಗಾಯಿಸಲು ನಮಗೆ ವಿರೋಧವಿಲ್ಲ.   ವಿಸ್ತೃತ ಪೀಠಕ್ಕೆ ವಹಿಸಲಿ ಆದರೇ ವಿದ್ಯಾರ್ಥಿಗಳ ನಂಬಿಕೆ ಆಚರಿಸಲು ಅವಕಾಶ ನೀಡಿ.  ನಮಗೆ ನ್ಯಾಯಾಧೀಶರ ಮೇಲೆ ಸಂಪೂರ್ಣ ನಂಬಿಕೆ ಇದೆ. ನ್ಯಾಯಾಂಗದ ಸೂಕ್ಷ್ಮತೆಯನ್ನ ನಾವು ಪರಿಗಣಿಸುತ್ತೇವೆ.  ಹಿಜಾಬ್ ಧರಿಸಲು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಹಾಗೆಯೇ ಅರ್ಜಿದಾರರ ಪರ ವಕೀಲ ಸಂಜಯ್ ಹೆಗಡೆ ವಾದ ಮಂಡಿಸಿ, ಸರ್ಕಾರಕ್ಕೆ ಸಮವಸ್ತ್ರದ ಬಗ್ಗೆ ನಿರ್ದೇಶಿಸುವ ಅಧಿಕಾರ ಇಲ್ಲ.  ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾಯಿಸುವುದಾದರೇ  2 ತಿಂಗಳಿಗೆ ಮಧ್ಯಂತರ ತೀರ್ಪು ಕೊಡಿ ಎಂದು ಮನವಿ ಮಾಡಿದರು.

ಇದೇ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಎಜಿ ಪ್ರಭುಲುಂಗ ನಾವದಗಿ, ಸರ್ಕಾರ ಆದೇಶ ಪ್ರಶ್ನಿಸಿದ್ದಾರೆ.  ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಗೂ ಸ್ವಾತಂತ್ರ್ಯ ಕೊಟ್ಟಿದ್ದೇವೆ.  ಖುರಾನ್ ನಲ್ಲಿ ಒಂದೆರೆಡು ವಾಕ್ಯಗಳನ್ನ ಬಿಟ್ಟರೇ ಹಿಜಾಬ್ ಕಡ್ಡಾಯ ಎಂಬುದಕ್ಕೆ ಸಮರ್ಥ ಆಧಾರಗಳಿಲ್ಲ.  ಸರ್ಕಾರ ಆದೇಶದ ಮೂಲಕ ಕಾಲೇಜು ಅಭಿವೃದ‍್ಧಿ ಸಮಿತಿಗೆ ಅಧಿಕಾರ ನೀಡಿದೆ.  ಈ ಹಂತದಲ್ಲಿ ಮಧ್ಯಂತರ ಆದೇಶ ನೀಡುವುದು ಸರಿಯಲ್ಲ ಮಧ್ಯಾಂತರ ಆದೇಶ ಕೊಟ್ಟರೇ ಅರ್ಜಿದಾರರ ಬೇಡಿಕೆ ಒಪ್ಪಿಕೊಂಡಂತೆ ಎಂದು ಆಕ್ಷೇಪಿಸಿದರು.

ಹಿಂದಿನ ಲೇಖನಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಬಿಜೆಪಿ ಕಾರಣ: ಆರ್.ಧ್ರುವನಾರಾಯಣ್
ಮುಂದಿನ ಲೇಖನಮಹಿಳಾ ಏಕೈಕ ಟಿ20 ಪಂದ್ಯ: ಭಾರತದ ವಿರುದ್ಧ ನ್ಯೂಜಿಲೆಂಡ್ ಗೆ ಜಯ