ಮನೆ ಮನರಂಜನೆ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಸೂರ್ಯ, ಅಜಯ್‌ ದೇವ್ಗನ್‌ ಗೆ ಅತ್ಯುತ್ತಮ ನಟ, ಅಪರ್ಣ...

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಸೂರ್ಯ, ಅಜಯ್‌ ದೇವ್ಗನ್‌ ಗೆ ಅತ್ಯುತ್ತಮ ನಟ, ಅಪರ್ಣ ಬಾಲಮುರಳಿಗೆ ಅತ್ಯುತ್ತಮ ನಟಿ ಪ್ರಶಸ್ತಿ

0

ನವದೆಹಲಿ (New Delhi): 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಕಾಲಿವುಡ್‌ನ ಸೂಪರ್ ಹಿಟ್ ಸಿನಿಮಾ ‘ಸೂರರೈ ಪೋಟ್ರು’ ಚಿತ್ರದ ಅಭಿನಯಕ್ಕಾಗಿ ತಮಿಳು ನಟ ಸೂರ್ಯ, ‘ತಾನ್ಹಾಜಿ: ದಿ ಅನ್‌ಸಂಗ್ ವಾರಿಯರ್’ ಚಿತ್ರದ ನಟನೆಗಾಗಿ ಬಾಲಿವುಡ್ ನಟ ಅಜಯ್‌ ದೇವ್ಗನ್‌ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಒಲಿದು ಬಂದಿದೆ.

ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಯಿತು. ಸೂರರೈ ಪೋಟ್ರು ಸಿನಿಮಾದಲ್ಲಿನ ಅಭಿನಯಕ್ಕಾಗಿ ಅಪರ್ಣ ಬಾಲಮುರಳಿ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ. ಸೂರರೈ ಪೋಟ್ರು ಸಿನಿಮಾ ಒಟ್ಟು 5 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಉಳಿದಂತೆ ಪ್ರಶಸ್ತಿಗಳ ವಿವರ ಇಂತಿದೆ. ಅತ್ಯುತ್ತಮ ನಿರ್ದೇಶನ: ಸಚ್ಚಿದಾನಂದನ್.ಕೆ.ಆರ್. – ಚಿತ್ರ: Ayyappanum Koshiyum (ಮಲಯಾಳಂ), ಅತ್ಯುತ್ತಮ ಪೋಷಕ ನಟಿ: ಲಕ್ಷ್ಮಿ ಪ್ರಿಯ ಚಂದ್ರಮೌಳಿ – ಚಿತ್ರ: Shivaranjaniyum Innum Sila Pengallum (ತಮಿಳು), ಅತ್ಯುತ್ತಮ ಪೋಷಕ ನಟ: ಬಿಜು ಮೆನನ್ – ಚಿತ್ರ: Ayyappanum Koshiyum (ಮಲಯಾಳಂ), ಅತ್ಯುತ್ತಮ ಚಿತ್ರ: ಸೂರರೈ ಪೋಟ್ರು (ತಮಿಳು), ಅತ್ಯುತ್ತಮ ಮಕ್ಕಳ ಚಿತ್ರ: ಸುಮಿ (ಮರಾಠಿ), ಅತ್ಯುತ್ತಮ ಪರಿಸರ ಚಿತ್ರ: ತಲೆದಂಡ (ಕನ್ನಡ), ಅತ್ಯುತ್ತಮ ಸಾಮಾಜಿಕ ಕಳಕಳಿ ಚಿತ್ರ: ಫ್ಯೂನರಲ್ (ಮರಾಠಿ), ಅತ್ಯುತ್ತಮ ಮನರಂಜನಾತ್ಮಕ ಚಿತ್ರ: ತಾನ್ಹಾಜಿ ದಿ ಅನ್‌ಸಂಗ್ ವಾರಿಯರ್, ಇಂದಿರಾ ಗಾಂಧಿ ಪ್ರಶಸ್ತಿ (ನಿರ್ದೇಶಕರ ಚೊಚ್ಚಲ ಚಿತ್ರ) : Madonne Ashwin – ಚಿತ್ರ: ಮಂಡೇಲಾ (ತಮಿಳು), ಅತ್ಯುತ್ತಮ ಚಿತ್ರಕಥೆ – ಶಾಲಿನಿ ಉಷಾ ನಾಯರ್, ಸುಧಾ ಕೊಂಗಾರ – ಚಿತ್ರ: ಸೂರರೈ ಪೋಟ್ರು (ತಮಿಳು), ಅತ್ಯುತ್ತಮ ಸಂಭಾಷಣೆ – Madonne Ashwin – ಚಿತ್ರ: ಮಂಡೇಲಾ (ತಮಿಳು), ಅತ್ಯುತ್ತಮ ಛಾಯಾಗ್ರಹಣ – Supratim Bhol – ಚಿತ್ರ: Avijatrik (ಬೆಂಗಾಲಿ), ಅತ್ಯುತ್ತಮ ಗಾಯಕಿ: ನಂಚಮ್ಮ – ಚಿತ್ರ: Ayyappanum Koshiyum (ಮಲಯಾಳಂ), ಅತ್ಯುತ್ತಮ ಗಾಯಕ: ರಾಹುಲ್ ದೇಶಪಾಂಡೆ- ಚಿತ್ರ: ಮಿ ವಸಂತರಾವ್ (ಮರಾಠಿ), ಅತ್ಯುತ್ತಮ ಬಾಲನಟ: ಅನೀಶ್ ಮಂಗೇಶ್ ಗೊಸಾವಿ – ಚಿತ್ರ: ಟಕ್‌-ಟಕ್ (ಮರಾಠಿ), ಅತ್ಯುತ್ತಮ ಬಾಲನಟಿ: ಆಕಾಂಕ್ಷ ಪಿಂಗ್ಳೆ ದಿವ್ಯೇಶ್ ಇಂದುಲ್ಕರ್ – ಚಿತ್ರ: ಸುಮಿ, ಅತ್ಯುತ್ತಮ ಸಾಹಸ ನಿರ್ದೇಶನ: ರಾಜಶೇಖರ್, ಮಾಫಿಯಾ ಶಶಿ ಮತ್ತು ಸುಪ್ರೀಂ ಸುಂದರ್ – ಚಿತ್ರ: Ayyappanum Koshiyum (ಮಲಯಾಳಂ), ಅತ್ಯುತ್ತಮ ನೃತ್ಯ ನಿರ್ದೇಶನ: ಸಂಧ್ಯಾ ರಾಜು – ಚಿತ್ರ: ನಾಟ್ಯಂ (ತೆಲುಗು), ಅತ್ಯುತ್ತಮ ಸಾಹಿತ್ಯ: Manoj Muntashir – ಚಿತ್ರ: ಸೈನಾ (ಹಿಂದಿ), ಅತ್ಯುತ್ತಮ ಸಂಗೀತ ನಿರ್ದೇಶನ: ಥಮನ್ – ಚಿತ್ರ: ಅಲಾ ವೈಕುಂಠಪುರಮುಲೋ (ತೆಲುಗು), ಅತ್ಯುತ್ತಮ ಸಂಗೀತ ನಿರ್ದೇಶನ (ಬ್ಯಾಕ್‌ಗ್ರೌಂಡ್ ಮ್ಯೂಸಿಕ್): ಜಿ.ವಿ.ಪ್ರಕಾಶ್ ಕುಮಾರ್ – ಚಿತ್ರ: ಸೂರರೈ ಪೋಟ್ರು (ತಮಿಳು), ಅತ್ಯುತ್ತಮ ಮೇಕಪ್ ಆರ್ಟಿಸ್ಟ್: ಟಿ.ವಿ.ರಾಮಬಾಬು – ಚಿತ್ರ: ನಾಟ್ಯಂ (ತೆಲುಗು), ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್: ನಚಿಕೇತ್ ಬಾರ್ವೆ, ಮಹೇಶ್ ಶೆರ್ಲಾ – ಚಿತ್ರ: ತಾನ್ಹಾಜಿ: ದಿ ಅನ್‌ಸಂಗ್ ವಾರಿಯರ್ (ಹಿಂದಿ), ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: Anees Nadodi – ಚಿತ್ರ: Kappela (ಮಲಯಾಳಂ), ಅತ್ಯುತ್ತಮ ಸಂಕಲನ: ಶ್ರೀಕಾರ್ ಪ್ರಸಾದ್ – ಚಿತ್ರ: Shivaranjaniyum Innum Sila Pengallum (ತಮಿಳು), ಅತ್ಯುತ್ತಮ ಆಡಿಯೋಗ್ರಫಿ (ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್): ಜೋಬಿನ್ ಜಯನ್ – ಚಿತ್ರ: ಡೊಳ್ಳು (ಕನ್ನಡ), ಅತ್ಯುತ್ತಮ ಆಡಿಯೋಗ್ರಫಿ (ಸೌಂಡ್ ಡಿಸೈನರ್) : ಅನ್‌ಮೋಲ್ ಭಾವೆ – ಚಿತ್ರ: ಮಿ ವಸಂತರಾವ್ (ಮರಾಠಿ), ಅತ್ಯುತ್ತಮ ಆಡಿಯೋಗ್ರಫಿ (ರೀ-ರೆಕಾರ್ಡಿಸ್ಟ್): ವಿಷ್ಣು ಗೋವಿಂದ್, ಶ್ರೀಶಂಕ್ – ಚಿತ್ರ: ಮಾಲಿಕ್ (ಮಲಯಾಳಂ).

ಅತ್ಯುತ್ತಮ ಪ್ರಾದೇಶಿಕ ಚಿತ್ರಗಳು: ಅತ್ಯುತ್ತಮ ತೆಲುಗು ಚಿತ್ರ: ಕಲರ್‌ ಫೋಟೋ (ನಿರ್ಮಾಪಕರು: ಅಮೃತಾ ಪ್ರೊಡಕ್ಷನ್ಸ್, ನಿರ್ದೇಶಕ: Angirekula Sandeep Raj), ಅತ್ಯುತ್ತಮ ತಮಿಳು ಚಿತ್ರ: Shivaranjaniyum Innum Sila Pengallum (ನಿರ್ಮಾಪಕರು: ಹಂಸ ಪಿಕ್ಚರ್ಸ್, ನಿರ್ದೇಶಕ: ವಸಂತ್.ಎಸ್‌.ಸಾಯಿ), ಅತ್ಯುತ್ತಮ ಮಲಯಾಳಂ ಸಿನಿಮಾ: Thumkalazcha Nishchayam (ನಿರ್ಮಾಪಕರು: ಪುಷ್ಕರ್ ಫಿಲ್ಮ್ಸ್, ನಿರ್ದೇಶಕ: ಪ್ರಸನ್ನ ಸತ್ಯನಾಥ್ ಹೆಗ್ಡೆ), ಅತ್ಯುತ್ತಮ ಮರಾಠಿ ಚಿತ್ರ: Goshta Eka Paithanichi (ನಿರ್ಮಾಪಕರು: ಪ್ಲಾನೆಟ್ ಮರಾಠಿ, ನಿರ್ದೇಶಕ: ಶಂತನು ಗಣೇಶ್), ಅತ್ಯುತ್ತಮ ಕನ್ನಡ ಚಿತ್ರ: ಡೊಳ್ಳು (ನಿರ್ಮಾಪಕರು: ಒಡೆಯರ್ ಮೂವೀಸ್, ನಿರ್ದೇಶಕ: ಸಾಗರ್ ಪುರಾಣಿಕ್), ಅತ್ಯುತ್ತಮ ಹಿಂದಿ ಚಿತ್ರ: ತುಳಸಿದಾಸ್ ಜೂನಿಯರ್ (ನಿರ್ಮಾಪಕರು: ಆಶುತೋಷ್ ಗೋವಾರಿಕರ್ ಪ್ರೊಡಕ್ಷನ್ಸ್, ನಿರ್ದೇಶಕ: ಮೃದುಲ್ ತುಳಸಿದಾಸ್), ಅತ್ಯುತ್ತಮ ಬೆಂಗಾಲಿ ಚಿತ್ರ: Avijatrik (ನಿರ್ಮಾಪಕರು: ಜಿಎಂಬಿ ಫಿಲ್ಮ್ಸ್, ನಿರ್ದೇಶಕ: Subhrajit Mitra), ಅತ್ಯುತ್ತಮ ಅಸ್ಸಾಮೀಸ್ ಚಿತ್ರ: ಬ್ರಿಡ್ಜ್ (ನಿರ್ಮಾಪಕರು: ಸಬಿತಾ ದೇವಿ, ನಿರ್ದೇಶಕ: ಕೃಪಾಲ್ ಕಲಿತಾ), ಅತ್ಯುತ್ತಮ ಹರಿಯಾಣ್ವಿ ಭಾಷೆ ಚಿತ್ರ: ದಾದಾ ಲಕ್ಮಿ (ನಿರ್ಮಾಪಕರು: Anhad Studio, ನಿರ್ದೇಶಕ: ಯಶ್‌ಪಾಲ್ ಶರ್ಮಾ)
ಅತ್ಯುತ್ತಮ Dimasa ಚಿತ್ರ: Semkhor (ನಿರ್ಮಾಪಕರು: Aimee Baruah Production Society, ನಿರ್ದೇಶಕಿ: Aimee Baruah), ಅತ್ಯುತ್ತಮ ತುಳು ಚಿತ್ರ: ಜೀತಿಗೆ (ನಿರ್ಮಾಪಕರು: ಎ.ಆರ್.ಪ್ರೊಡಕ್ಷನ್ಸ್, ನಿರ್ದೇಶಕ: ಸಂತೋಷ್ ಮಾಡಾ)

ಸ್ಪೆಷಲ್ ಜ್ಯೂರಿ ಮೆನ್ಷನ್: ಚಿತ್ರ: Semkhor (Dimasa) – ನಟಿ Aimee Baruah, ಚಿತ್ರ: ವಾಂಕು (ಮಲಯಾಳಂ) – ನಿರ್ದೇಶಕಿ: ಕಾವ್ಯಾ ಪ್ರಕಾಶ್, ಚಿತ್ರ: ಜೂನ್ (ಮರಾಠಿ) – ನಟ: ಸಿದ್ಧಾರ್ಥ್ ಮೆನನ್, ಚಿತ್ರ: Avwanchhit (ಮರಾಠಿ) ಮತ್ತು Godakaath (ಮರಾಠಿ) – ನಟ: ಕಿಶೋರ್ ಕಡಮ್, ಚಿತ್ರ: ತುಳಸಿದಾಸ್ ಜೂನಿಯರ್ (ಹಿಂದಿ) – ಬಾಲನಟ: ವರುಣ್ ಬುದ್ಧದೇವ್.