ಮನೆ ರಾಷ್ಟ್ರೀಯ ಕೇರಳದಲ್ಲಿ 3ನೇ ಮಂಕಿಪಾಕ್ಸ್‌ ಸೋಂಕು ವರದಿ

ಕೇರಳದಲ್ಲಿ 3ನೇ ಮಂಕಿಪಾಕ್ಸ್‌ ಸೋಂಕು ವರದಿ

0

ತಿರುವನಂತಪುರಂ (Thiruvananthapuram): ಕೇರಳದಲ್ಲಿ ಮೂರನೇ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದೆ. ಆ ಮೂಲಕ ಒಂದೇ ರಾಜ್ಯದಲ್ಲಿ ಮೂರು ಪ್ರಕರಣಗಳು ವರದಿಯಾಗಿವೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಜುಲೈ 6ರಂದು ಯುಎಇಯಿಂದ ಕೇರಳಕ್ಕೆ ಆಗಮಿಸಿದ ಮಲಪ್ಪುರಂ ಮೂಲದ 35 ವರ್ಷದ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್‌ ಸೋಂಕು ತಗುಲಿರುವುದು  ದೃಢಪಟ್ಟಿದೆ. ಸದ್ಯ ಅವರು ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತಿಳಿಸಿದ್ದಾರೆ. 

ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ರೋಗಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

ಹಿಂದಿನ ಲೇಖನ68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಸೂರ್ಯ, ಅಜಯ್‌ ದೇವ್ಗನ್‌ ಗೆ ಅತ್ಯುತ್ತಮ ನಟ, ಅಪರ್ಣ ಬಾಲಮುರಳಿಗೆ ಅತ್ಯುತ್ತಮ ನಟಿ ಪ್ರಶಸ್ತಿ
ಮುಂದಿನ ಲೇಖನಭಾರತ ವಿರುದ್ದದ ಏಕದಿನ ಸರಣಿ: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ವಿಂಡೀಸ್‌