ಮನೆ ಆರೋಗ್ಯ ಭಾರತದ ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಅಮೃತಮಹೋತ್ಸವ: ವಿದ್ಯಾರ್ಥಿಗಳಿಂದ ಸೂರ್ಯನಮಸ್ಕಾರ

ಭಾರತದ ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಅಮೃತಮಹೋತ್ಸವ: ವಿದ್ಯಾರ್ಥಿಗಳಿಂದ ಸೂರ್ಯನಮಸ್ಕಾರ

0

ಮೈಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಾರ್ತಾ, ಆಯುಷ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಭಾರತ ಸ್ವಾತಂತ್ರೋತ್ಸವ 75 ನೇ ವರ್ಷದ ಅಮೃತಮಹೋತ್ಸವದ ಅಂಗವಾಗಿ ಇಂದು ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್ ಚಾಲನೆ ನೀಡಿದರು.

 ಕೋವಿಡ್ ನಿಯಮಗಳನ್ನು ಉಲ್ಲಂಘಿಸದಂತೆ 200 ವಿದ್ಯಾರ್ಥಿಗಳಿಗೆ ಸಾಮೂಹಿಕ ಸೂರ್ಯನಮಸ್ಕಾರ ಯೋಗಾಭ್ಯಾಸ ನಡೆಸಲಾಗಿತ್ತು.

ಈ ಸಂದರ್ಭ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ  ಕೆ.ಸುರೇಶ್, ಭಾರತ ಸರ್ಕಾರ, ಸರ್ಕಾರೇತರ ಸಂಘ ಸಂಸ್ಥೆಗಳು ಮನುಕುಲದ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನು ಆಗ್ಗಿಂದಾಗೆ ರೂಪಿಸುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಉಳಿವಿಗಾಗಿ ಹಾಗೂ ದೇಹ ಮತ್ತು ಮಾನಸಿಕ ಸಮತೋಲನೆಗಾಗಿ ಯೋಗ ಅವಶ್ಯಕ.ಮೂರನೇ ಅಲೆ ಕೋವಿಡ್ ಸಂಖ್ಯೆ ಹೆಚ್ಚುತ್ತಿದೆ ಹೀಗಾಗಿ ಯೋಗ ಪ್ರತಿ ದಿನ ಮಾಡುವುದರಿಂದ ಆರೋಗ್ಯವಾಗಿ ಇರಬಹುದು ಈಗಾಗಲೇ ನಮ್ಮ ವಿದ್ಯಾರ್ಥಿಗಳಿಗೆ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯದಲ್ಲಿ ಪ್ರತಿ ದಿನ ಯೋಗಾಭ್ಯಾಸ ನಡೆಸಲಾಗುತ್ತಿದೆ ಎಂದರು.

ಭಾರತ ಸ್ವಾತಂತ್ರೋತ್ಸವ 75 ನೇ ವರ್ಷದ ಅಮೃತಮಹೋತ್ಸವ ಪೂರೈಸಿರುವ ಹಿನ್ನೆಲೆಯಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದ ಉದ್ದೇಶ ಎಲ್ಲರೂ ಆರೋಗ್ಯವಾಗಿ ಇರಲು ಯೋಗ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಹಾಗಾಗಿ ಪ್ರತಿ ಒಬ್ಬರು ಯೋಗಾಭ್ಯಾಸ ಮಾಡಿ.
– ಸಹನಾ,  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿದ್ಯಾರ್ಥಿನಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಮಾತನಾಡಿ, ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡದಂತೆ 200 ವಿದ್ಯಾರ್ಥಿಗಳಿಗೆ ಸಾಮೂಹಿಕ ಸೂರ್ಯನಮಸ್ಕಾರ ಯೋಗಾಭ್ಯಾಸ ನಡೆಸಲಾಗಿತ್ತು,  ಸೂರ್ಯ ನಮಸ್ಕಾರವನ್ನು ಬಹಳ ಹಿಂದಿನಿಂದಲೂ ಮಾಡಿಕೊಂಡು ಬರಲಾಗುತ್ತಿದೆ. ಹೀಗಾಗಿ ಈ ಸೂರ್ಯ ನಮಸ್ಕಾರ ಪಾರಂಪರಿಕ ನಮಸ್ಕಾರವಾಗಿದೆ. ಸೂರ್ಯ, ಭೂಮಿ, ಗಾಳಿ ಇವೆಲ್ಲ ಅಮೂಲ್ಯವಾದದ್ದು. ಅವುಗಳಿಗೆ ಗೌರವ ಸೂಚಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್, ಆಯುಷ್ ಇಲಾಖೆಯ ಉಪನಿರ್ದೇಶಕರಾದ ಡಾ.ಸೀತಾಲಕ್ಷ್ಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್.ಚೆನ್ನಪ್ಪ ಸೇರಿದಂತೆ ಇತರರು ಹಾಜರಿದ್ದರು.

ಹಿಂದಿನ ಲೇಖನಡಿವೈಡರ್’ಗೆ ಕಾರು ಡಿಕ್ಕಿ, 7 ಮಂದಿ ದುರ್ಮರಣ
ಮುಂದಿನ ಲೇಖನರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ: ಸಚಿವ ಡಾ ಕೆ ಸುಧಾಕರ್