ಮನೆ ರಾಜ್ಯ ಅದ್ದೂರಿಯಾಗಿ 75 ನೇ ಗಣರಾಜ್ಯೋತ್ಸವ ಆಚರಣೆ: ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

ಅದ್ದೂರಿಯಾಗಿ 75 ನೇ ಗಣರಾಜ್ಯೋತ್ಸವ ಆಚರಣೆ: ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

0

ಮೈಸೂರು:  75 ನೇ ಅಮೃತ ಮಹೋತ್ಸವ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಸಿ ಮಹದೇವಪ್ಪ ಅವರು ದ್ವಜರೋಹಣ ನೆರವೇರಿಸಿ,ನಾಡಿಗೆ ಸಂದೇಶ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಸಂಯುಕ್ತಾಶ್ರದಲ್ಲಿ ಪಂಜಿನ ಕವಾಯತು ಮೈದಾನದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವರು ದ್ವಜ ವಂದನೆ ಸ್ವೀಕರಿಸಿದರು.

ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ  ನಂತರ ತೆರೆದ ವಾಹನದಲ್ಲಿ ತೆರಳಿ ಪಥ ಸಂಚಲನ ತುಕಡಿಗಳಿಂದ ಗೌರವ ಸ್ವೀಕರಿಸಿದರು.

ಪೊಲೀಸ್ ತುಕಡಿಗಳು, ಮಹಿಳಾ ಪೊಲೀಸ್ ತುಕಡಿಗಳು, ಮೀಸಲು ಪೊಲೀಸ್ ತುಕಡಿಗಳು, ಗೃಹ ರಕ್ಷಕ ದಳ, ಅರಣ್ಯ ರಕ್ಷಕ ದಳ, ಎನ್ ಎಸ್ ಎಸ್ , ಎನ್ ಸಿ ಸಿ ತಂಡಗಳು, ಸ್ಕೌಟ್ ಮತ್ತು ಗೈಡ್ಸ್ ತಂಡಗಳು, ಪೊಲೀಸ್ ಬ್ಯಾಂಡ್ ತಂಡ ಹಾಗೂ ವಿವಿಧ ಶಾಲೆಗಳ ತಂಡಗಳು ಪೆರೇಡ್ ನಲ್ಲಿ ಭಾಗವಹಿಸಿ ಆಕರ್ಷಕ  ಪಥ ಸಂಚಲನ ನಡೆಸಿದವು.

ಇದೇ ಸಂದರ್ಭದಲ್ಲಿ ಮಾನ್ಯ ಸಚಿವರು ಹಾಗೂ ಅತಿಥಿಗಳು ಸಂವಿಧಾನ ಜಾಗೃತಿ ಸಾರುವ ಜಾಥಾದ ಸ್ಥಬ್ದ ಚಿತ್ರವಾಹನಗಳಿಗೆ ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜಯ ವಿಠಲ ಶಾಲೆ ಮಕ್ಕಳು ಭಾರತಾಂಬೆಯ ಮಕ್ಕಳು ನಾವು ಎಂಬ ದೇಶಭಕ್ತಿ ಗೀತೆಗೆ ನೃತ್ಯ ಪ್ರದರ್ಶನ ನೀಡಿದರು.

 ಜಿ ಎಸ್ ಎಸ್ ಎಸ್ ಶಾಲೆಯ ಮಕ್ಕಳಿಂದ ಚಕ್ ದೇ ಇಂಡಿಯಾ ಹಾಡಿಗೆ ನೃತ್ಯ ಪ್ರದರ್ಶನ ಹಾಗೂ ನಳಂದ ಇಂಗ್ಲಿಷ್ ಶಾಲೆಯ ಮಕ್ಕಳಿಂದ ಜೈ ಹೋ ಹಾಡಿಗೆ ನೃತ್ಯ ಪ್ರದರ್ಶನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ತನ್ವೀರ್ ಸೇಠ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಪ್ರಾದೇಶಿಕ ಆಯುಕ್ತರಾದ ಬಿ ಜಿ ಪ್ರಕಾಶ್, ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ ಎಂ ಗಾಯತ್ರಿ ಅವರು ಸೇರಿದಂತೆ ಮತ್ತಿತರು ಉಪಸ್ಥಿರಿದ್ದರು.