ಮನೆ ಅಪರಾಧ ಐವರ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

ಐವರ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

0

ಒಡಿಶಾ: ಆಸ್ತಿ ವಿಚಾರಕ್ಕಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬ ತನ್ನ ಹಿರಿಯ ಸಹೋದರನ ಕುಟುಂಬದ ಇಬ್ಬರು ಚಿಕ್ಕಮಕ್ಕಳೂ ಸೇರಿದಂತೆ ಐವರನ್ನು ದಾರುಣವಾಗಿ ಹತ್ಯೆ ಮಾಡಿದ ನಂತರ  ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹಗಳನ್ನು ಕಂಡು ನೊಂದು, ಪಶ್ಚಾತ್ತಾಪಕ್ಕೊಳಗಾಗಿ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿರುವ ಘಟನೆ ಒಡಿಶಾದ ಕಟಕ್ ಜಿಲ್ಲೆಯ ಕುಸುಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಶಿವ ಸಾಹೂ(50)ಕೊಲೆ ಆರೋಪಿ. ಅಲೇಖ್ ಸಾಹೂ (55), ಅವರ ಪತ್ನಿ ಸ್ಮೃತಿ ರೇಖಾ ಪ್ರಸ್ಟಿ (50), ಪುತ್ರಿ ಸಂಧ್ಯಾ (18), ಸೌರವ್ (12) ಮತ್ತು ಸಾಯಿ (8) ಪ್ರಾಣ ತೆತ್ತವರು.

ಆಸ್ತಿಯ ವಿಚಾರಕ್ಕಾಗಿ ತನ್ನ ಹಿರಿಯ ಸಹೋದರನ ಜೊತೆ ಆರೋಪಿ ಶಿವ ಸಾಹೂ ಕಿತ್ತಾಟ ನಡೆಸುತ್ತಿದ್ದನಂತೆ. 3 ದಿನಗಳ ಹಿಂದೆಯೂ ಕೂಡ ಇಬ್ಬರ ಮಧ್ಯೆ ಜಗಳವಾಗಿದೆ.ಈ ವೇಳೆ ಅಲೇಖ್​ ಸಾಹೂ ತನ್ನ ತಮ್ಮ ಶಿವ ಸಾಹೂವಿನ ಮೇಲೆ ಹಲ್ಲೆ ನಡೆಸಿದ್ದನಂತೆ. ಇದರಿಂದ ಕ್ರುದ್ಧನಾದ ಶಿವ ಸಾಹೂ ಅದೇ ದಿನ ರಾತ್ರಿ ತನ್ನ ಅಣ್ಣನ ಇಡೀ ಕುಟುಂಬವನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ತನ್ನದೇ ಕುಟುಂಬವನ್ನು ಕಂಡು ಮರುಕ ಉಂಟಾಗಿದೆ.

ತಾನು ಮಾಡಿದ ತಪ್ಪಿನ ಅರಿವಾಗಿ ಮೊಬೈಲ್​ನಲ್ಲಿ ವಿಡಿಯೋ ಮಾಡಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಜಗಳದ ವೇಳೆ ತನ್ನ ಹಿರಿಯಣ್ಣ ಸೇರಿದಂತೆ ಕುಟುಂಬದವರು ನನ್ನನ್ನು ಥಳಿಸಿದ್ದರಿಂದ ಕೋಪದಲ್ಲಿ ಎಲ್ಲರನ್ನೂ ಕೊಲೆ ಮಾಡಿದೆ ಎಂದು ಹೇಳಿಕೊಂಡಿದ್ದಾನೆ. ಇದಾದ ಬಳಿಕ ಪಶ್ಚಾತ್ತಾಪದಿಂದ ಪೊಲೀಸ್​ ಠಾಣೆಗೆ ಬಂದು ತಾನೇ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಹಿಂದಿನ ಲೇಖನಭ್ರಷ್ಟಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಕಾಮಗಾರಿ ಸ್ಥಗಿತ: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಎಚ್ಚರಿಕೆ
ಮುಂದಿನ ಲೇಖನಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ನಾಳೆಯಿಂದ ಐದು ದಿನ ಕಾಂಗ್ರೆಸ್ ಪ್ರತಿಭಟನೆ