ಮನೆ ರಾಜಕೀಯ ಬಿಜೆಪಿಯ 8 ನಾಯಕರು ಸಿಎಂ ಆಗಲು ಸೂಟ್ ಕೇಸ್ ಹಿಡಿದು ಸಿದ್ದವಾಗಿದ್ದಾರೆ: ಮುಖ್ಯಮಂತ್ರಿ ಚಂದ್ರು

ಬಿಜೆಪಿಯ 8 ನಾಯಕರು ಸಿಎಂ ಆಗಲು ಸೂಟ್ ಕೇಸ್ ಹಿಡಿದು ಸಿದ್ದವಾಗಿದ್ದಾರೆ: ಮುಖ್ಯಮಂತ್ರಿ ಚಂದ್ರು

0

ಕೊಪ್ಪಳ: ಬಿಜೆಪಿಯಲ್ಲಿ 2500 ಕೋಟಿ ಇರುವ 8 ನಾಯಕರು ಮುಖ್ಯಮಂತ್ರಿಯಾಗಲು ಸೂಟ್’ಕೇಸ್ ಹಿಡಿದು ಸಿದ್ದವಾಗಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇರೋ ಬಸನಗೌಡ ಪಾಟೀಲ ಯತ್ನಾಳ್, ಅಶ್ವತ್ಥ ನಾರಾಯಣ, ಅಶೋಕ್, ಸುಧಾಕರ್ ಸೇರಿದಂತೆ ಅನೇಕ ನಾಯಕರು ಸಿಎಂ ಆಗಲು ಸೂಟ್ ಕೇಸ್ ಹಿಡಿದು ನಿಂತಿದ್ದಾರೆ ಎಂದು ಆರೋಪಿಸಿದರು.

ದೇವೇಗೌಡರ ಕುಟುಂಬದಲ್ಲಿ ಕಿಂಗ್ ಮೇಕರ್ ಆಗಲು ಹೊರಟಿದ್ದಾರೆ. ಆದರೆ ಕುಮಾರಸ್ವಾಮಿಯನ್ನ ಸಿಎಂ ಮಾಡಲು ಸಿದ್ದವಾಗಿಲ್ಲ. ರೇವಣ್ಣನನ್ನು ಸಿಎಂ ಮಾಡಬೇಕು ಎಂದಿದ್ದಾರೆ. ಈಗಾಗಲೇ ಅವರ ಕುಟುಂಬದಲ್ಲಿ ಹಲವರು ಅಧಿಕಾರದಲ್ಲಿದ್ದಾರೆ ಎಂದು ಜೆಡಿಎಸ್ ವಿರುದ್ಧ ಹರಿಹಾಯ್ದರು.

ಮಾರ್ಚ್ 4ರಂದು ಆಪ್ ಸಮಾವೇಶ

ಮಾರ್ಚ್ 4ರಂದು ಆಪ್ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ 50 ಸಾವಿರ ಜನ ಸೇರಲಿದ್ದಾರೆ. ಸಮಾವೇಶಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗು ಪಂಜಾಬ್ ಸಿಎಂ ಭಗವಂತ್ ಮಾನ್ ಆಗಮಿಸಲಿದ್ದಾರೆ. ರಾಜಕೀಯ ಶುದ್ಧೀಕರಣಕ್ಕಾಗಿ ಆಪ್ ಪಕ್ಷ ಕೆಲಸ ಮಾಡುತ್ತಿದೆ. ಕರ್ನಾಟಕ ಆಪ್ ಪಕ್ಷಕ್ಕೆ ದಕ್ಷಿಣ ಭಾರತದ ಹೆಬ್ಬಾಗಿಲು ಆಗಲಿದೆ ಎಂದರು.

ರಾಜಕೀಯ ಅನ್ನೋದು ಸ್ವಂತಕ್ಕೆ ಬಳಕೆಯಾಗುತ್ತಿದೆ. ಕೆಲವರ ಹಿತಕ್ಕಾಗಿ ರಾಜಕೀಯ ಇದೆ. ಮೂರು ಪಕ್ಷದ ಬಗ್ಗೆ ಜನರಿಗೆ ಬೇಸರವಿದೆ. ಕಾಂಗ್ರೆಸ್ ಪಕ್ಷದವರು ಖದೀಮರು. ದರೋಡೆಕೋರರು. ಬಿಜೆಪಿ ಭ್ರಷ್ರರು. ಭಂಡರು. ಮುಖ್ಯಮಂತ್ರಿಗಳ ರಿಮೋಟ್ ಕಂಟ್ರೋಲ್ ಅಗಿದ್ದಾರೆ. ಮೋದಿ, ಅಮಿತ್ ಷಾ, ಆರ್’ಎಸ್’ಎಸ್ ಸಂತೋಷ್, ಯಡಿಯೂರಪ್ಪ ಕುಟುಂಬದ ಹಿಡಿತದಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಪ್ ಪಕ್ಷದಿಂದ 224 ಸ್ಥಾನಕ್ಕೆ ಅಭ್ಯರ್ಥಿಗಳು ನಿಲ್ಲುತ್ತೇವೆ. ಹಣ ಬಲ, ತೋಳ ಬಲ ಜಾತಿಬಲ ಪ್ರಭಾವದ ಕಾಲದಲ್ಲಿ ನಾವು ಯಾವುದೇ ಖರ್ಚು ಇಲ್ಲದೆ ಚುನಾವಣೆ ಏದುರಿಸುತ್ತೇವೆ. ಕೇಂದ್ರದವರು ಹೇಗಾದರೂ ಮಾಡಿ ಅಧಿಕಾರಕ್ಕೆ ಸಿದ್ದವಾಗಿದ್ದಾರೆ. ಈಗ ರಾಮಮಂದಿರ ಅಭಿವೃದ್ಧಿ ಮಾಡೋದು ಸರಿ. ನಮ್ಮೂರಿನಲ್ಲಿರುವ ದೇವರ ಮಂದಿರವನ್ನ ಏನು ಮಾಡ್ತೀರಾ.. ನಮಗೆ ರಾಮಮಂದಿರ ಅಲ್ಲ, ರಾಮರಾಜ್ಯ ಬೇಕು ಎಂದರು.

ನಾನು ಚುನಾವಣೆಯಲ್ಲಿ ನಿಲ್ಲುವುದಿಲ್ಲ. ನಾನು ಒಮ್ಮೆ ಎಂಎಲ್ಎ ಹಾಗು ಎಂಎಲ್ಸಿ ಆಗಿದ್ದೇನೆ. ರಾಜಕಾರಣದಿಂದ ದೂರವಿಲ್ಲ ಆದರೆ ಚುನಾವಣೆ ರಾಜಕಾರಣದಿಂದ ದೂರವಿದ್ದೇನೆ ಎಂದರು.

ಹಿಂದಿನ ಲೇಖನರಾಯಚೂರು: ವಿದ್ಯುತ್ ತಂತಿ ಸ್ಪರ್ಶಿಸಿ 8 ಗುಡಿಸಲು ಭಸ್ಮ
ಮುಂದಿನ ಲೇಖನನಕ್ಸಲರೊಂದಿಗೆ ಗುಂಡಿನ ಚಕಮಕಿ: ಮೂವರು ಪೊಲೀಸರು ಹುತಾತ್ಮ