ಮನೆ ರಾಷ್ಟ್ರೀಯ ನಕ್ಸಲರೊಂದಿಗೆ ಗುಂಡಿನ ಚಕಮಕಿ: ಮೂವರು ಪೊಲೀಸರು ಹುತಾತ್ಮ

ನಕ್ಸಲರೊಂದಿಗೆ ಗುಂಡಿನ ಚಕಮಕಿ: ಮೂವರು ಪೊಲೀಸರು ಹುತಾತ್ಮ

0

ಛತ್ತೀಸ್‌ ಗಡ: ಸುಕ್ಮಾ ಜಿಲ್ಲೆಯಲ್ಲಿ ಸಶಸ್ತ್ರಪಡೆ ಪೊಲೀಸರು ಹಾಗೂ ನಕ್ಸಲರ ನಡುವಿನ ಗುಂಡಿನ ಚಕಮಕಿಯಲ್ಲಿ ಶನಿವಾರ ಸಹಾಯಕ ಸಬ್ ಇನ್ಸ್‌’ಪೆಕ್ಟರ್ ಸೇರಿದಂತೆ ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ.

ಸಹಾಯಕ ಸಬ್ ಇನ್ಸ್‌’ಪೆಕ್ಟರ್ ರಾಮುರಾಮ್ ನಾಗ್, ಕಾನ್‌’ಸ್ಟೆಬಲ್‌’ಗಳಾದ ಕುಂಜ್ರಾ ಮೋಗ ಮತ್ತು ವಂಜಮ್‌ ಭೀಮ ಹುತಾತ್ಮರಾಗಿದ್ದಾರೆ ಎಂದು ಸಿಆರ್‌’ಪಿಎಫ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

ಇಲ್ಲಿನ ಜಗರಗುಂಡ ಹಾಗೂ ಕುಂಡೆಡ್ ಗ್ರಾಮಗಳ ವ್ಯಾಪ್ತಿಯ ಅರಣ್ಯಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಸಶಸ್ತ್ರಪಡೆ ಪೊಲೀಸರು ನಕ್ಸಲರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ನಕ್ಸಲರು, ಭದ್ರತಾ ಪಡೆ ಯೋಧರು, ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಘಟನೆಯಲ್ಲಿ ಮೂವರು ಪೊಲೀಸರು ಮೃತರಾಗಿದ್ದಾರೆ.

ಈ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಲೇಖನಬಿಜೆಪಿಯ 8 ನಾಯಕರು ಸಿಎಂ ಆಗಲು ಸೂಟ್ ಕೇಸ್ ಹಿಡಿದು ಸಿದ್ದವಾಗಿದ್ದಾರೆ: ಮುಖ್ಯಮಂತ್ರಿ ಚಂದ್ರು
ಮುಂದಿನ ಲೇಖನಹಾಸನ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸುತ್ತೇನೆ: ಹೆಚ್.ಡಿ ರೇವಣ್ಣ