ಮನೆ ಅಪರಾಧ ಬೆಂಗಳೂರು ಉತ್ತರ ವಿವಿಯಲ್ಲಿ ನಕಲಿ ಅಂಕಪಟ್ಟಿ ನೀಡಿ ಪದವಿಗೆ ಸೇರಿದ 8 ವಿದ್ಯಾರ್ಥಿಗಳು ಪತ್ತೆ

ಬೆಂಗಳೂರು ಉತ್ತರ ವಿವಿಯಲ್ಲಿ ನಕಲಿ ಅಂಕಪಟ್ಟಿ ನೀಡಿ ಪದವಿಗೆ ಸೇರಿದ 8 ವಿದ್ಯಾರ್ಥಿಗಳು ಪತ್ತೆ

0

ಕೋಲಾರ(Kolar): ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ನಕಲಿ ಅಂಕಪಟ್ಟಿಗಳನ್ನು ನೀಡಿ 8 ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ಪತ್ತೆಯಾಗಿದೆ.

ವಿಶ್ವವಿದ್ಯಾಲಯದಲ್ಲಿ ದಾಖಲಾತಿಗಳ ಪರಿಶೀಲನೆ ವೇಳೆ ಎಸ್‌’ಎಸ್‌’ಎಲ್‌’ಸಿ ಹಾಗೂ ಪಿಯುಸಿ ಮೂಲ ಅಂಕಪಟ್ಟಿ ಪರಿಶೀಲಿಸಿದಾಗ ನಕಲಿ ಅಂಕ ಪಟ್ಟಿ ನೀಡಿರುವುದು ಬಯಲಾಗಿದೆ.

ಸುಮಾರು ಎಂಟು ನಕಲಿ ವಿದ್ಯಾರ್ಥಿಗಳ ಮೇಲೆ ತೂಗುಕತ್ತಿ ಎದುರಾಗಿದ್ದು, ಮತ್ತಷ್ಟು ಎಂದರೆ ನೂರಕ್ಕು ಹೆಚ್ಚು ನಕಲಿ ಅಂಕಪಟ್ಟಿಗಳು ಸಿಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ವಿಶ್ವವಿದ್ಯಾಲಯದಿಂದ ಲಭ್ಯವಾಗಿದೆ.

ದೇವನಹಳ್ಳಿ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಹೊಸಕೋಟೆ ಸೇರಿದಂತೆ ನೆರೆ ರಾಜ್ಯಗಳಿಂದಲೂ ನಕಲಿ ಅಂಕಪಟ್ಟಿ ಪ್ರಕರಣ ಬಯಲಾಗಿದ್ದು, ಇದರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೇ ಹೆಚ್ಚಾಗಿ ಕಂಡು ಬಂದಿವೆ. ಖಾಸಗಿಯವರು ಹಣದಾಸೆಗೆ ಇಷ್ಟೆಲ್ಲಾ ನಕಲಿ ಮಾಡುತ್ತಿದ್ದಾರೆ.

ಇಷ್ಟೇ ಅಲ್ಲದೆ ನೂರಕ್ಕೂ ಹೆಚ್ಚು ನಕಲಿ ವಿದ್ಯಾರ್ಥಿಗಳು ಇರುವ ಸಾಧ್ಯತೆ ಹೆಚ್ಚಾಗಿದ್ದು, ವ್ಯಾಸಂಗ ಮಾಡಿದ ಕಾಲೇಜು ಶಾಲೆಗಳಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಉತ್ತರ ವಿವಿ ಕುಲಪತಿ ನಿರಂಜನ್ ವಾನಹಳ್ಳಿ ಆದೇಶ ನೀಡಿದ್ದಾರೆ.

ಹಿಂದಿನ ಲೇಖನದಿನವಿಡೀ ಪ್ರಲಾಪ ಮಾಡಿದರೂ ಅದರ ಬೆಲೆ 8 ಡಾಲರ್: ಎಲಾನ್ ಮಸ್ಕ್
ಮುಂದಿನ ಲೇಖನಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುವ ಆಹಾರಗಳಿವು