ಮನೆ ಸುದ್ದಿ ಜಾಲ 9 ದಿನದಲ್ಲಿ 8 ಬಾರಿ ತೈಲ ದರ ಏರಿಕೆ

9 ದಿನದಲ್ಲಿ 8 ಬಾರಿ ತೈಲ ದರ ಏರಿಕೆ

0

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾನುವಾರ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಲೀಟರಿಗೆ ತಲಾ 80 ಪೈಸೆಯಷ್ಟು ಹೆಚ್ಚಿಸಿದ್ದು, ಕಳೆದ ಒಂಬತ್ತು ದಿನಗಳಲ್ಲಿ ಎಂಟು ಬಾರಿ ತೈಲ ದರದಲ್ಲಿ ಏರಿಕೆಯಾಗಿದೆ.

 ಪ್ರತಿ ಲೀಟರಿಗೆ ₹5.60ರಷ್ಟು ಹೆಚ್ಚಿಸಿದಂತಾಗಿದೆ.ದರ ಹೆಚ್ಚಳದಿಂದಾಗಿ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆಯು ಲೀಟರಿಗೆ ₹101.01 ಹಾಗೂ ಡೀಸೆಲ್‌ ಬೆಲೆಯು ₹91.47ಕ್ಕೆ ಏರಿಕೆಯಾಗಿದೆ.

ಮುಂಬೈನಲ್ಲಿ ಪೆಟ್ರೋಲ್‌ ಬೆಲೆಯು ಲೀಟರಿಗೆ ₹115.88 ಹಾಗೂ ಡೀಸೆಲ್‌ ಬೆಲೆಯು ₹100.10 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆಯು ಲೀಟರಿಗೆ ₹106.44 ಹಾಗೂ ಡೀಸೆಲ್‌ ಬೆಲೆಯು ₹90.16 ಕ್ಕೆ ಏರಿಕೆಯಾಗಿದೆ.