ಮನೆ ಸುದ್ದಿ ಜಾಲ ಬೆಂಗಳೂರಿನಲ್ಲಿ ಶೇ.90ರಷ್ಟು ಮಂದಿಗೆ ಒಮೈಕ್ರಾನ್ ರೂಪಾಂತರಿ ಸೋಂಕು

ಬೆಂಗಳೂರಿನಲ್ಲಿ ಶೇ.90ರಷ್ಟು ಮಂದಿಗೆ ಒಮೈಕ್ರಾನ್ ರೂಪಾಂತರಿ ಸೋಂಕು

0

ಬೆಂಗಳೂರು:  ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಪ್ರತಿ ನಿತ್ಯ  20 ಸಾವಿರಕ್ಕೂ ಅಧಿಕ ಕೊರೋನಾ‌ ಪ್ರಕರಣಗಳು ಬೆಳಕಿಗೆ ಬರ್ತಿದೆ. ಇದರ ಜೊತೆಗೆ 931 ಓಮೈಕ್ರಾನ್ ಸೋಂಕಿತರೂ ಇರುವ ಮಾಹಿತಿ ಆತಂಕಕ್ಕೆ ಕಾರಣವಾಗಿದೆ.
ಮೂರನೇ ಅಲೆಯಲ್ಲಿ ದಾಖಲಾಗುತ್ತಿರುವ ಕೊರೋನಾ ಸೋಂಕು ಬಹುಪಾಲು ಓಮೈಕ್ರಾನ್ ಆಗಿರುವ ಸಾಧ್ಯತೆ ಇದೆ ಎಂದು ತಜ್ಞರು ಆರಂಭದಲ್ಲೇ ಅಭಿಪ್ರಾಯ ಪಟ್ಟಿದ್ದರು. ಅದರಂತಯೇ ಸದ್ಯ ದೃಢವಾಗುತ್ತಿರುವ ಸೋಂಕಿನ ಸಿಂಪಾಲು ಓಮೈಕ್ರಾನ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ, ಇಡೀ ರಾಜ್ಯದಲ್ಲಿ ಸದ್ಯ 931 ಓಮೈಕ್ರಾನ್ ಸೋಂಕಿತರಿದ್ದಾರೆ. ಈ ಪೈಕಿ ಬಹುಪಾಲು ಸೋಂಕಿತರು ಬೆಂಗಳೂರಿನಲ್ಲೇ ಇದ್ದಾರೆ. ಇತ್ತೀಚೆಗೆ ಪಾಲಿಕೆ ಜಿನೋಮಿಕ್ ಸೀಕ್ವೆನ್ಸಿಂಗ್ ವರದಿಯನ್ನು ತರಿಸಿಕೊಂಡಿತ್ತು. ಪ್ರತಿ ದಿನ ಜಿನೋಮಿಕ್ ಸೀಕ್ವೆನ್ಸಿಂಗ್ ಸರಾಸರಿ 300 ಸ್ಯಾಂಪಲ್ಸ್ ಬಿಬಿಎಂಪಿ ಕಳುಹಿಸಿಕೊಡುತ್ತಿತ್ತು. ಈ ವರದಿಯಲ್ಲಿ ಜಿನೋಮಿಕ್ ಸೀಕ್ವೆನ್ಸಿಂಗ್ ಗೆ ಕಳುಹಿಸುತ್ತಿರುವ 90% ಸ್ಯಾಂಪಲ್ ನಲ್ಲಿ ಓಮೈಕ್ರಾನ್ ದೃಢವಾಗುತ್ತಿದೆ ಎಂದು ಉಲ್ಲೇಖವಾಗಿದೆ. ಈಗ ಜಿನೋಮಿಕ್ ಸೀಕ್ವೆನ್ಸಿಂಗ್ ನಲ್ಲಿ 90% ಓಮೈಕ್ರಾನ್ ಸೋಂಕು ದೃಢವಾಗುತ್ತಿರುವ ಹಿನ್ನೆಲೆ, ಪ್ರತಿದಿನ ಪತ್ತೆಯಾಗಿತ್ತಿರುವ ಸೋಂಕಿತರ ಪೈಕಿ 90% ರಷ್ಟು ಓಮೈಕ್ರಾನ್ ಸೋಂಕಿತರು ಆಗಿರುವ ಸಾಧ್ಯತೆ ಇದೆ.
ಐದು ದಿನದಲ್ಲಿ 1,27,008 ಸೋಂಕಿತರು ಪತ್ತೆ: ಕಳೆದ ಐದು ದಿನದಲ್ಲಿ ಪತ್ತೆಯಾದ ಒಟ್ಟು ಸೋಂಕಿತರು 1,27,008. ಜಿನೋಮಿಕ್ ಸೀಕ್ವೆನ್ಸಿಂಗ್ ವರದಿಯ ಆಧಾರವಾಗಿಟ್ಟುಕೊಂಡು, ಹೇಳುವುದಾದರೆ ಈ ಪೈಕಿ 90% ಓಮೈಕ್ರಾನ್ ಸೋಂಕಿತರುವ ಇರುವ ಸಾಧ್ಯತೆ ಇದೆ. ಅಂದರೆ ಕಳೆದ ಐದೇ ದಿನದಲ್ಲಿ ಬೆಂಗಳೂರಿನಲ್ಲಿ ಅಂದಾಜು 1 ಲಕ್ಷಕ್ಕೂ ಅಧಿಕ ಓಮೈಕ್ರಾನ್ ಸೋಂಕು ದೃಢವಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಹಿಂದಿನ ಲೇಖನಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ:ವಿಪಕ್ಷ ನಾಯಕ ಸಿದ್ದರಾಮಯ್ಯ
ಮುಂದಿನ ಲೇಖನಮಂಡ್ಯ ಪತ್ರಕರ್ತರ ಸಂಘಕ್ಕೆ 5 ಲಕ್ಷ ರೂ.: ದಿನೇಶ್ ಗೂಳಿಗೌಡ