ಬೆಂಗಳೂರು: ಕಳೆದ 1 ತಿಂಗಳಲ್ಲಿ 42 ಗಾಂಜಾ, ಡ್ರಗ್ಸ್ ಪ್ರಕರಣಗಳು ದಾಖಲಾಗಿವೆ. ಪ್ರಕರಣ ಸಂಬಂಧ 10 ವಿದೇಶಿ ಪ್ರಜೆಗಳು ಸೇರಿ 64 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಾಹಿತಿ ನೀಡಿದರು.
ಬೆಂಗಳೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಂಧಿತ ಆರೋಪಿಗಳಿಂದ 140 ಕೆಜಿ ಗಾಂಜಾ, 1 ಕೆಜಿ ಗಾಂಜಾ ಆಯಿಲ್, 609 ಗ್ರಾಂ ಆಫೀಮು, 770 ಗ್ರಾಂ ಹೆರಾಯಿನ್, 2ಕೆಜಿ 436 ಗ್ರಾಂ ಚರಸ್, 509 ಗ್ರಾಂ ಕೊಕೇನ್, 5 ಕೆಜಿ 397 ಗ್ರಾಂ ಎಂಡಿಎಂಎ, 2569 LSD ಸ್ಟ್ರಿಪ್, 6 ಕೆಜಿ 725 ಗ್ರಾಂ ಅಂಫಟಮೈನ್, 11,908 ಎಕ್ಸ್ ಟೆಸಿ ಮಾತ್ರೆ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಸಿಸಿಬಿ ಅಧಿಕಾರಿಗಳ ವಿರುದ್ಧ ಕೇಳಿ ಬಂದಿರುವ ಆರೋಪ ವಿಚಾರವಾಗಿ ಮಾತನಾಡಿದ ಅವರು, ರೇವ್ ಪಾರ್ಟಿ ಕೇಸ್ ನಲ್ಲಿ ತನಿಖೆ ನಡೆಸಿರುವ ಸಿಸಿಬಿ, ನ್ಯಾಯಾಲಯಕ್ಕೆ ಚಾರ್ಶಿಟ್ ಸಲ್ಲಿಕೆ ಮಾಡಿದೆ. ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧ ಆರೋಪಿಸಿ ದೂರುಗಳನ್ನು ನೀಡಿದ್ದಾರೆ. ಬಂದ ದೂರುಗಳ ತನಿಖೆಯನ್ನು ಬೇರೆ ಬೇರೆ ಸಂಸ್ಥೆಗಳು ನಡೆಸುತ್ತಿವೆ. ಆರೋಪಿಗಳು ತನಿಖೆಯ ದಿಕ್ಕು ತಪ್ಪಿಸಲು ಈ ರೀತಿ ಮಾಡಿದ್ದಾರೆ ಎಂದರು.
ಮನೆಗಳ್ಳತನ ಮಾಡುತ್ತಿದ್ದ ನಿವೃತ್ತ ಸರ್ಕಾರಿ ಉದ್ಯೋಗಿಯ ಬಂಧನ
ಮನೆಗಳತನ ಮಾಡುತ್ತಿದ್ದ ನಿವೃತ್ತ ಸರ್ಕಾರಿ ಉದ್ಯೋಗಿಯನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ನಾಗರಾಜು ಅಲಿಯಾಸ್ ಫರೇಸ್ಟ್ ನಾಗ (60) ಬಂಧಿತ ಆರೋಪಿ. ಆರೋಪಿಯಿಂದ 208 ಗ್ರಾಂ ಚಿನ್ನಾಭರಣ, 1.1 ಕೆಜಿ ಬೆಳ್ಳಿ, 2.5 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಕೋಲಾರ ಜಿಲ್ಲೆ ಕಾಮಸಮುದ್ರ ನಿವಾಸಿಯಾಗಿರುವ ನಾಗರಾಜು ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದನು. ಕೋಲಾರ, ರಾಮನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದನು.
ನಿವೃತ್ತಿ ಬಳಿಕ ಕಳ್ಳತನ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದನು. ಈತನ ವಿರುದ್ಧ ಆಂಧ್ರ, ತಮಿಳುನಾಡು ಮತ್ತು ಬೆಂಗಳೂರಿನಲ್ಲಿ 30 ಪ್ರಕರಣ ದಾಖಲಾಗಿವೆ. ಆರೋಪಿ ಬಸ್ನಲ್ಲಿ ಬಂದು ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದನು. ಇದೀಗ, ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ, ಚಿನ್ನದ ಅಂಗಡಿಯಲ್ಲಿನ ಚಿನ್ನವನ್ನು ಕದ್ದು ಮಾರಾಟ ಮಾಡುತ್ತಿದ್ದ ಮಾರುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಲಖಿತ್ (23) ಬಂಧಿತ ಆರೋಪಿ. ಆರೋಪಿ ಲಖಿತ್ ಚಿನ್ನಾಭರಣ ಅಂಗಡಿಯಲ್ಲಿ 126 ಗ್ರಾಂ ಚಿನ್ನವನ್ನು ಕದ್ದಿದ್ದನು. ಕದ್ದ ಚಿನ್ನವನ್ನು ಮಾರುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಲಿಖಿತ್ನಿಂದ 126 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಲಖಿತ್ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಆರೋಪಿ ಲಖಿತ್ ಈ ಹಿಂದೆ ಔಷಧಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ 23 ಲಕ್ಷ ರೂ. ವಂಚಿಸಿ ಪರಾರಿಯಾಗಿದ್ದನು. ಕದ್ದ ಹಣವನ್ನು ತೀರಿಸಲು ಆರೋಪಿ ಲಿಖಿತ್ ಕಳ್ಳತನಕ್ಕೆ ಇಳಿದಿದ್ದನು. ಒಟ್ಟಿನಲ್ಲಿ ಎರಡು ಪತ್ಯೇಕ ಪ್ರಕರಣ ಭೇದಿಸಿದ ಪೊಲೀಸರು 340 ಗ್ರಾಂ ಚಿನ್ನಭರಣ, 1.1 ಕೆಜಿ ಬೆಳ್ಳಿ 2.5 ನಗದು ವಶಕ್ಕೆ ಪಡೆದಿದ್ದಾರೆ.