ಮನೆ ಸಾಹಿತ್ಯ ಪ್ರತಿಕೂಲ ಪರಿಸ್ಥಿತಿಗಳನ್ನು ವ್ಯಕ್ತಿತ್ವವನ್ನು ಬೆಳೆಯಿರಿಸುತ್ತವೆ

ಪ್ರತಿಕೂಲ ಪರಿಸ್ಥಿತಿಗಳನ್ನು ವ್ಯಕ್ತಿತ್ವವನ್ನು ಬೆಳೆಯಿರಿಸುತ್ತವೆ

0

        ಇಂಗ್ಲಿಷ್ ಭಾಷೆಯಲ್ಲಿ “ಎ ಗ್ರೇಟ್ ಹ್ಯೂಮನ್ ಈಸ್ ನಾಟ್ ಬಾರ್ನಾ. ಬಟ್ ಬಾರ್ನಾ ಔಟ್ ಆಫ್ ಸಿಚ್ಯೂವೇಷನ್ಸ್” ಎಂಬ ಮಾತಿದೆ. ಅಂದರೆ ಯಾವ ಮಹಾ ವ್ಯಕ್ತಿಗಳನ್ನು ಹುಟ್ಟಿನಿಂದ ಮಹಾವ್ಯಕ್ತಿಯಾಗುವುದಿಲ್ಲ. ಬದಲು ಸನ್ನಿವೇಶಗಳನ್ನು ಮಹಾ ವ್ಯಕ್ತಿಗಳನ್ನು ಹುಟ್ಟಿಸುತ್ತವೆ ಎಂದು ಈ ಮಾತಿನ ಅರ್ಥ.ಯಾವ ಮಹಾವ್ಯಕ್ತಿಗಳ ಬದುಕನ್ನು ನೋಡಿದರೂ ಈ ಮಾತು  ಸತ್ಯವೆಂದು ಅರ್ಥವಾಗುತ್ತದೆ.ಮೋಹನ ದಾಸ್ ಗಾಂಧಿ ಎಂಬ ಭಾರತೀಯ ವಕೀಲನನ್ನು ಕರಿಯನೆಂಬ ಕಾರಣಕ್ಕೆ ರೈಲು ಡಬ್ಬಿಯಿಂದ ಹೊರಕ್ಕೆ ತಳ್ಳಿ ಹಾಕಿ ಮೇಲೆಯೇ ಮಹಾತ್ಮ ಗಾಂಧಿ ರೂಪುಗೊಂಡಿದ್ದು ಅಸ್ಪೃಶ್ಯನೆಂಬ ಕಾರಣಕ್ಕೆಎತ್ತಿನ ಗಾಡಿಯಿಂದ ಟೊಮೆಟೊ ಬುಟ್ಟಿ ಉರುಳಿಸಿದಂತೆ ಭೀಮ್ ಜಿ ಯನ್ನು ಉರುಳಿಸಿದ ಮೇಲೆಯೇ ಅಂಬೇಡ್ಕರ್ ರೂಪುಗೊಂಡಿದ್ದು.

Join Our Whatsapp Group

     ಇಂತಹ ಕೆಲವು ಘಟನೆಗಳು ಮಹಾವ್ಯಕ್ತಿಗಳು ರೂಪಿಸಿವೆ. ಅಂದ ಮಾತ್ರಕ್ಕೆ ಕೇವಲ ಒಂದು ಘಟನೆಯಿಂದಾಗಿ ಮಹಾವ್ಯಕ್ತಿಗಳು ರೂಪಗೊಳ್ಳುತ್ತಾರೆ ಎಂದು ಅರ್ಥವಲ್ಲ. ಕರಿಯನೆಂಬ ಕಾರಣಕ್ಕೆ ಅದೆಷ್ಟೋ ವಕೀಲರುಗಳನ್ನು ರೈಲು ಡಬ್ಬಿಯಿಂದ ತಳ್ಳಿ ಹಾಕಿರುತ್ತಾರೆ. ಆದರೆ ಅವರೆಲ್ಲರೂ ಮಹಾತ್ಮ ಗಾಂಧಿ ಆಗಲಿಲ್ಲ. ಅವೆಂಬಸ್ಪೃಶ್ಯರೆಂಬ ಕಾರಣಕ್ಕೆ ಲಕ್ಷಾಂತರ ಜನರು ಸೋಲು ಮತ್ತು ಅವಮಾನಗಳನ್ನು ಅನುಭವಿಸಿರುತ್ತಾರೆ. ಆದರೆ ಅವರು ಯಾರೂ ಅಂಬೇಡ್ಕರ್ ಆಗಲಿಲ್ಲ. ಅಂದರೆ ಅದಾಗಲೇ ಆಗಿರುವ ಮಾನಸಿಕ ಸಿದ್ಧತೆಯು ಪ್ರಕಟಗೊಳ್ಳಲು ಒಂದು ನಿರ್ದಿಷ್ಟ ಘಟನೆಯು ಕಾರಣವಾಗಿದೆಯೇ ಹೊರತು ಒಂದೇ ಒಂದು ನಿರ್ದಿಷ್ಟ ಘಟನೆಯಿಂದ ಯಾರು ಮಹಾ ವ್ಯಕ್ತಿಗಳಾಗುವುದಿಲ್ಲ. ಹಾಗಿದ್ದರೆ ಮಾನಸಿಕ ಸಿದ್ಧತೆಯು  ಹೇಗೆ ಉಂಟಾಗುತ್ತದೆ ಜೀವನದ ಅನೇಕ ಘಟನೆಗಳ ಅನುಭವಗಳಿಂದ, ಅಧ್ಯಯನವು ಬೆಳೆಯಿಸಿದ ಚಿಂತನೆಗಳಿಂದ ಮಾನಸಿಕ ಸಿದ್ಧತೆಯು ಉಂಟಾಗುತ್ತದೆ.ಜೀವನದ ಘಟನಾವಳಿಗಳ ಈ ಎಲ್ಲ ಸರಣಿಗಳೂ ಮಹಾ ವ್ಯಕ್ತಿಗಳನ್ನು ರೂಪಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತವೆ.ರಮ ನಿರ್ದಿಷ್ಟ ಘಟನೆಯೊಂದು ಅದು  ಪ್ರಕಟವಾಗುವ ಕಾರಣವಾಗುತ್ತದೆ.

        ನಾವು ಮಹಾವ್ಯಕ್ತಿಯಾಗಲು ಸಾಧ್ಯವಾಗದೆ ಇರಬಹುದು. ಆದರೆ ಯೋಗ್ಯ ವ್ಯಕ್ತಿಯಾಗಲು ಸಾಧ್ಯವಿದೆ.ನಮ್ಮ ಸಮಸ್ಯೆ ಏನಿರುತ್ತದೆ ಎಂದರೆ ನಮ್ಮ ಜೀವನದಲ್ಲಿ ಆಗುವ ಘಟನೆಗಳು ಕೆಲವೇ ದಿನಗಳಲ್ಲಿ ನಾವು ನಮ್ಮ ಅನುಭವಗಳಿಂದ ಹೊರಗೆ ತಳ್ಳಿಬಿಡುತ್ತೇವೆ. ಆದ್ದರಿಂದಾಗಿ ನಮ್ಮಲ್ಲಿ ಮಾನಸಿಕ ಸಿದ್ಧತೆ ಆಗುವುದಿಲ್ಲ.ಅಲ್ಲದೆ ನಾವು ರಿಸ್ಕ್ ತೆಗೆದುಕೊಳ್ಳಲು ಮುಂದಾಗುವುದಿಲ್ಲ.  ರಿಸ್ಕ್ ತೆಗೆದುಕೊಳ್ಳಲು ಸಿದ್ದರಿಲ್ಲದವರ ವ್ಯಕ್ತಿತ್ವವು ಬೆಳೆಯಲು ಸಾಧ್ಯವಾಗುವುದಿಲ್ಲ.