ಮನೆ ಯೋಗಾಸನ ಏಕಪದ ರಾಜಕಪೋತಾಸನ

ಏಕಪದ ರಾಜಕಪೋತಾಸನ

0

      ‘ಏಕಪಾದ ‘ಎಂದರೆ ಒಂದು ಪಾದ.  ‘ರಾಜಕಪೋತ’ವೆಂದರೆ ಪರಿವಾಳಗಳ ರಾಜ. ಈ ಆಸನದಲ್ಲಿ ಪಾರಿವಾಳದಂತೆ ಎದೆಯನ್ನು ಗುಬ್ಬಿಸಬೇಕಾಗಿರುವುದರಿಂದ ಆಸನಕ್ಕೆ ಈ ಹೆಸರು.

Join Our Whatsapp Group

 ಅಭ್ಯಾಸ ಕ್ರಮ:

1. ಮೊದಲು, ನೆಲದಮೇಲೆ ಕುಳಿತು ಕಾಲುಗಳನ್ನು ಮುಂಗಡಗೆ ನೇರವಾಗಿ ಚಾಚಬೇಕು.

2. ಬಳಿಕ, ಮಂಡಿಯನ್ನು ಭಾಗಿಸಿ ಬಲಪಾದವನ್ನು ನೆಲದ ಮೇಲಿಟ್ಟು, ಬಲ ಹಿಮ್ಮಡಿಯು ಎಡತೊಡೆಯ ಸಂದನ್ನು ಮುಟ್ಟುವಂತಿರಬೇಕು. ಆಮೇಲೆ ಬಲಮಂಡಿಯನ್ನು ನೆಲದ ಮೇಲೆ ಒರಗಿಸಬೇಕು.

3. ಅನಂತನ ಎಡಗಾಲನ್ನು ಹಿಂಬಾಗಕ್ಕೆ ತಂದು, ಅದನ್ನು ನೇರವಾಗಿಸಿ ನೆಲದುದ್ದಕ್ಕೂ ಪೂರಾ ತಾಗುವಂತಿಡಬೇಕು. ಆಗ ಎಡತೊಡೆಯ ಮುಂಭಾಗ, ಮಂಡಿ, ಕಣಕಾಲು ಮತ್ತು ಕಾಲ್ಬೆರಳುಗಳ ಮೇಲ್ಭಾಗಗಳು ನೆಲವನ್ನು ಮುಟ್ಟಿಕೊಂಡಿರುತ್ತವೆ.

4. ಆಮೇಲೆ ಅಂಗೈಗಳನ್ನು ಸೊಂಟದ ಮೇಲೆರಿಸಿ ಎದೆಯನ್ನು ಮುಂದೂಡಿ, ಕತ್ತನ್ನು ಹಿಗ್ಗಿಸಿ ತಲೆಯನ್ನು ಸಾಧ್ಯವಾದಷ್ಟು ಬಿಸಿ ಹಿಂದಕ್ಕೆ ತಳ್ಳಿ ಭಂಗಿಯ ಈ ಪ್ರಾರಂಭದ ಚಾಲನೆಯಲ್ಲಿ ಸ್ವಲ್ಪ ಹೊತ್ತು ಸಮತೋಲನ ಮಾಡಬೇಕು .

5. ಇದಾದಮೇಲೆ,ಕೈಗಳನ್ನು ನೆಲದಮೇಲೆ ಮುಂಗಡಗೆ ಉರಿಟ್ಟು ಎಡಮಂಡಿಯನ್ನು ಭಾಗಿಸಿ, ಎಡಪಾದವನ್ನು ತಲೆಯ ಬಳಿಗೆ ಬರುವಂತೆ ಮೇಲೆತ್ತಬೇಕು.ಬಳಿಕ ಎಡಗಾಲಿನ ಮಂಡಿಯಿಂದ ಗಿಣ್ಣಿನವರೆಗಿರುವ ಭಾಗವನ್ನು ನೆಲಕ್ಕೆ ಲಂಬವಾಗಿರಬೇಕು.ಈ ಸ್ಥಿತಿಯನ್ನು ಗಳಿಸಬೇಕಾದರೆ ಎಡತೊಡೆಯ ಮಾಂಸ ಖಂಡಗಳನ್ನು ಬಿಗಿಗೊಳಿಸಬೇಕು.

6. ತರುವಾಯು ಉಸಿರನ್ನು ಹೊರಕ್ಕೆಬಿಡುತ್ತ, ಬಲಗೈಯನ್ನು ತಲೆಯ ಮೇಲ್ಗಡೆಗೆ ತಂದು,ಅದರಿಂದ ಎಡಗಾಲನ್ನು ಹಿಡಿದುಕೊಳ್ಳಬೇಕು.ಬಳಿಕ ಕೆಲವು ಸಲ ಉಸಿರಾಟ ನಡೆಸಿ,ಆಮೇಲೆ ಉಸಿರನ್ನು ಹೊರಕ್ಕೆಬಿಟ್ಟು ಎಡಗೈಯಿಂದ ಎಡಗಾಲನ್ನು ಹಿಡಿದುಕೊಂಡು, ತಲೆಯನ್ನು ಎಡದಂಗಾಲಿಗೆ ಒರಗಿಸಬೇಕು.

7. ಆ ಬಳಿಕ ಎದೆಯನ್ನು ಮುಂದೂಡಿ ಕೈಗಳನ್ನು ಮತ್ತಷ್ಟು ಕೆಳಗೆ ಸರಿಸಿ ಕಾಲ್ಗಿಣ್ಣುಗಳನ್ನು ಬಿಗಿಯಾಗಿ ಹಿಡಿದು  ಮೇಲ್ದುಟಿಯನ್ನು ಎಡ ಹಿಮ್ಮಡಿಗೆ ಮುಟ್ಟಿಸಬೇಕು.ಈ ಭಂಗಿಯಲ್ಲಿ ಸುಮಾರು 10 ಸೆಕೆಂಡುಗಳ ಕಾಲ ನೆಲೆಸಬೇಕು ಈ ಅಭ್ಯಾಸದಲ್ಲಿ ಪೂರ್ಣವಾಗಿ ಹಿಗ್ಗಿ,ಕಿಬ್ಬೊಟ್ಟೆಯು ಕುಗ್ಗುವುದರಿಂದ ಉಸಿರಾಟವು ವೇಗವಾಗಿ ನಡೆಯುವಂತಾಗುತ್ತದೆ. ಆಗ ಸಾಮಾನ್ಯ ರೀತಿಯಿಂದ ಉಸಿರಾಟ ನಡೆಸಲು ಯತ್ನಿಸಬೇಕು.

8. ಅನಂತರ ಎಡಗಾಲಿನ ಮೇಲಿನ ಕೈಗಳ ಬಿಗಿತವನ್ನು ಒಂದೊಂದಾಗಿ ಸಡಿಲಿಸಿ, ಅಂಗೈಗಳನ್ನು ನೆಲದ ಮೇಲೂರಿ ಎಡಗಾಲನ್ನು ನೆರವಾಗಿಸಿ ಅದನ್ನು ಮುಂಗಡೆಗೆ ತಂದು, ಬಲಗಾಲನ್ನು ನೇರ ಗೊಳಿಸಬೇಕು.

9. ಈ ಭಂಗಿಯನ್ನು ಇನ್ನೊಂದು ಪಕ್ಕಕ್ಕೂ ನಡೆಸಿ, ಅದರಲ್ಲಿ ಅಷ್ಟೇ ಕಾಲ ನೆಲೆಸಬೇಕು. ಇದರಲ್ಲಿ ಎಡಪಾದವು ಬಲ ತೊಡೆಯ ಸಂದನ್ನು ಮುಟ್ಟುವಂತಿಟ್ಟು ಬಲಗಾಲನ್ನು ಹಿಂಗಡೆಗೆ ನೀಡಲವಾಗಿ ಚಾಚೀಟ್ಟು ಕೈತೋಳುಗಳನ್ನು ಒಂದಾದ ಮಲೆ ಒಂದರಂತೆ ತಲೆಯ ಮಲೋಂದರಂತೆ ತಲೆಯ ಮೇಲೆ ತಂದ ಬಳಿ ಇವುಗಳಿಂದ  ಬಲಪಾದವನ್ನು ಬಿಗಿಯಾಗಿ ಹಿಡಿದುಕೊಳ್ಳಬೇಕು.