ಮನೆ ಸುದ್ದಿ ಜಾಲ ಬ್ರೈನ್ ಡೆಡ್ ಆಗಿ ಮಹಿಳೆ ಸಾವು: ಅಂಗಾಂಗ ದಾನ ಮಾಡಿದ ಕುಟುಂಬಸ್ಥರು

ಬ್ರೈನ್ ಡೆಡ್ ಆಗಿ ಮಹಿಳೆ ಸಾವು: ಅಂಗಾಂಗ ದಾನ ಮಾಡಿದ ಕುಟುಂಬಸ್ಥರು

0

ಮೈಸೂರು(Mysuru): ಬ್ರೈನ್ ಡೆಡ್ ಆಗಿ ಮೃತಪಟ್ಟ ಮಹಿಳೆಯ ಅಂಗಾಂಗ ದಾನಿ ಮಾಡಿರುವ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ.

ಯಾದವಗಿರಿ ನಿವಾಸಿ ಜಯಮ್ಮ(59) ಅವರು ಮೆದುಳು ನಿಷ್ಕ್ರಿಯಗೊಂಡು ಇಂದು ಬೆಳಿಗ್ಗೆ ಮೃತಪಟ್ಟಿದ್ದು, ಕುಟುಂಬಸ್ಥರು ಮೃತ ಜಯಮ್ಮ ಅವರ ಅಂಗಾಗ ದಾನ ಮಾಡಿದ್ದಾರೆ.

ರಕ್ತದೊತ್ತಡದಿಂದ ಅನಾರೋಗ್ಯಕ್ಕಿಡಾದ ಜಯಮ್ಮ ಅವರನ್ನ ಕಳೆದ ಗುರುವಾರ ಮೈಸೂರಿನ ಸಿಇಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಲ್ಲಿಂದ ಜಯಮ್ಮರನ್ನ  ಅಪೋಲೊ ಆಸ್ಪತ್ರೆಗೆ ರವಾನಿಸಲಾಗಿತ್ತು.

ಜಯಮ್ಮ ಅವರು ಒಬ್ಬರು ಪುತ್ರಿಯನ್ನ ಅಗಲಿದ್ದಾರೆ.

ಹಿಂದಿನ ಲೇಖನಮೋದಿ ಹಿಂದೂ ವಿರೋಧಿ: ಸುಬ್ರಮಣಿಯನ್‌ ಸ್ವಾಮಿ
ಮುಂದಿನ ಲೇಖನಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ನಟ ದಿಲೀಪ್ ಸ್ನೇಹಿತನ ಬಂಧನ