ಬಿದಿಗೆ ಮಂಗಳವಾರ ಪ್ರಯಾಣ ಮಾಡಿ ಹರಿಶ್ಚಂದ್ರ ನಳ ಮಹಾರಾಜರು ಕಷ್ಟಪಟ್ಟರು. ತದಿಗೆ ಶುಕ್ರವಾರ ಪ್ರಯಣ ಮಾಡಿ ಅಂಧ ಕಾಸುರನು ಪರಮೇಶ್ವರನಿಂದ ಕೊಲ್ಲಲ್ಪಟ್ಟನು ಚೌತಿ ನಾಕು ಮಂಗಳವಾರ ಪ್ರಯಾಣ ಮಾಡಿ ಶ್ರೀರಾಮಚಂದ್ರನು ಅರಣ್ಯದಲ್ಲಿ ಸೀತೆಯನ್ನು ಕಳೆದುಕೊಂಡು ದುಃಖಕ್ಕೆ ಗುರಿಯಾದನು. ಪಂಚಮಿ ಗುರುವಾರ ಪ್ರಯಾಣ ಮಾಡಿ ಅರ್ಜನನು ಕಷ್ಟಪಟ್ಟುನು. ಷಷ್ಟಿ ಶನಿವಾರ ಪ್ರಯಾಣ ಮಾಡಿ ರಾವಣಾಸುರನ್ನು ಯುದ್ಧದಲ್ಲಿ ಮರಣ ಹೊಂದಿದನು. ಸಪ್ತಮಿ ಸೋಮವಾರ ಪ್ರಯಣ ಮಾಡಿ ಪರಶುರಾಮನು ಅಪಜಯ ಹೊಂದಿದನು.ಅಷ್ಟಮಿ ಶುಕ್ರವಾರ ಪ್ರಯಾಣ ಮಾಡಿ ಧರ್ಮರಾಜನು ವನವಾಸದಲ್ಲಿ ಪರಿಪರಿಯಾಗಿ ದುಃಖಪಟ್ಟನು. ನವಮಿ ತಿಥಿ ದಿವಸ ಪಯಣ ಮಾಡಿ ಬಾಣಸುರನು ಪ್ರಾಣವನ್ನು ಬಿಟ್ಟನು.
ಪ್ರಯಾಣ ನವಮಿ ಪ್ರವೇಶ ನವಮಿ ವಿಚಾರ :
ಯಾರೇ ಆಗಲಿ ನವಮಿ ತಿಥಿ ದಿನ ಪ್ರಯಾಣ ಮಾಡಿದರೆ ಆ ಪ್ರಯಾಣದಲ್ಲಿ ಅನಂತ ರೀತಿ ಕಷ್ಟ ನಷ್ಟಗಳು ಉಂಟಾಗುತ್ತವೆ. ಇದು ಪ್ರಯಾಣ ನವಮಿ ಎಂದು ತಿಳಿಯಬೇಕು.ಯಾಣಪ್ರ ಮಾಡಿದ ದಿನದಿಂದ 9 ನೇ ದಿನಕ್ಕೆ ತಿರುಗಿ ಊರಿಗೆ ಬಂದರೆ ಅದು ಪ್ರವೇಶ ನವಮಿ ಎನಿಸುವುದರಿಂದ ಆಗಬಾರದು ರಾತ್ರಿ ನಕ್ಷತ್ರ ನೋಡಿ ಮನೆಗೆ ಹೋದರಾಯಿತು ಎಂದು ಕೆಲವರು ತಿಳಿಯುತ್ತಾರೆ.ಹಾಗೆ ತಿಳಿದು ಹೋಗಬಾರದು.
ಮುಹೂರ್ತ ರಾಜವೆಂಬ ಶಿವ ಲಿಖಿತ ಚಕ್ರ :
ಶ್ಲೋಕ :
ನ ತಿಥಿರ್ನಂಚ ನಕ್ಷತ್ರಂನ ಯೋಗೇ ನ ಕರುಣೇ ತಥಾ
ನಹೋರಾ ಯೋಗಿನೀ ಚಕ್ರ ನಲಗ್ನಂ ನ ತಮೋಗುಣ
ವ್ಯತಿಪಾತೇಛ ಸಂಕ್ರಾಂತೌ ಭದ್ರಯಾಮ ಶುಭೇದಿನ
ಶಿವಚಕ್ರ, ಸಮಾಲೋಕ್ಯ ಸರ್ವತ್ರ ವಿಜಯೂ ಭವೇತಊ.