ಚರಣ ಸ್ವಾಮಿ ಫಲ :
★ಪ್ರಥಮ ಚರಣದ ಸ್ವಾಮೀ ಚಂದ್ರ ಮಂಗಳ ಜಾತಕನನ್ನು ಹಠಮಾರಿ ಮತ್ತು ಕ್ರೋಧಿ ಯನ್ನಗಿಸುವರು.
★ದ್ವಿತೀಯ ಚರಣದ ಸ್ವಾಮಿ ಚಂದ್ರ ಶುಕ್ರ ಕಲೆಗಳಲ್ಲಿ ಅಭಿರುಚಿಯನ್ನು ವೃದ್ಧಿಸುವವರು.
★ತೃತಿಯ ಚರಣದಲ್ಲಿ ಸ್ವಾಮೀ ಚಂದ್ರ ಬುಧ ಕಲ್ಪನಾ ಶಕ್ತಿಯನ್ನು ತೀವ್ರಗೊಳಿಸುವವರು.
★ಚತುರ್ಥ ಚರಣದ ಸ್ವಾಮಿ ಬಾವುಕಾ ಬಾವನೆಯನ್ನು ಉದಯವಾಗುವಂತೆ ಮಾಡುವವರು.
ಹಾಸ್ತ ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಅಂಶಗಳು :
ಇವರಲ್ಲಿ ರೋಗ ಉಂಟಾದರೆ ಶೀಘ್ರ ಗುಣವಾಗುತ್ತದೆ ಚಿಕಿತ್ಸೆಗೆ ಉತ್ತಮ ನಕ್ಷತ್ರ. ಮಂತ್ರಜಪ ಸಿದ್ಧಿಸುತ್ತದೆ.ಶುಭ ಕಾರ್ಯಗಳಿಗೆಲ್ಲಲ್ಲಕ್ಕೂ ಉತ್ತಮವಾದದು. ಅಕ್ಷರಾಭ್ಯಾಸ ಜ್ಞಾನವೃದ್ಧಿಕರವಾದುದು. ಇದರಲ್ಲಿ ಜನನ, ಋತುಮತಿಯಾಗುವುದು ಶುಭ, ಐದು ಗಂಡಗಳು ಕಳೆದರೆ, ಪೂರ್ಣಾಯಸ್ಸು 88 ವರ್ಷಗಳು.
ಹಸ್ತಾ ನಕ್ಷತ್ರದ ಜಾತಕರ ವಿವಾಹಕ್ಕೆ ಹೊಂದುವ ನಕ್ಷತ್ರಗಳು,:
ಹಸ್ತಾ ನಕ್ಷತ್ರದಲ್ಲಿ ಕನ್ಯಗೆ :
ಭರಣಿ,ಕೃತಿಕಾ,1,2,4,ನೇ ಚರಣ ರೋಹಿಣಿ,ಮೃಗಶಿರಾ ಆರ್ದ್ರಾ,ಪುನರ್ವಸು, 1,2,3,ನೇ ಚರಣ, ಪುಷ್ಯ, ಆಶ್ಲೇಷಾ, ಮಘಾ, ಪೂರ್ವಾಪಾಲ್ಗುಣಿ, ಉತ್ತರಾ, ಚಿತ್ರಾ, 3,4,ನೇ ಚರಣ, ಸ್ವಾತಿ, ವಿಶಾಖಾ 1,2,3, ನೇ ಚರಣ, ಅನುರಾಧ,ಪೂರ್ವಾಷಾಢಾ, ಉತ್ತರಾಷಾಢಾ ಶ್ರವಣ, ಧನಿಷ್ಠಾ, ಪೂರ್ವ ಭಾದ್ರಪದಾ 1,2,3 ನೇ ಚರಣ,ರೇವತಿ.
ಹಸ್ತಾ ನಕ್ಷತ್ರದ ವರನಿಗೆ :
ಭರಣಿ,ಕೃತಿಕಾ, ರೋಹಿಣಿ, ಮೃಗಶಿರಾ, ಆರ್ದ್ರಾ,ಪುನರ್ವಸು,ಒಂದು 1,2,3,ನೇ ಚರಣ ಪುಷ್ಯ ಮಘಾ, ಪೂರ್ವಾ ಪಾಲ್ಗುಣಿ ಸ್ವಾತಿ, ವಿಶಾಖಾ, 1,2,3,4 ನೇ ಚರಣ, ಅನುರಾಧಾ, ಉತ್ತರಾಷಾಢಾ, ಶ್ರಾವಣ, ಉತ್ತರಾಭಾದ್ರಪದಾ, ರೇವತಿ.
ಹಸ್ತಾ ನಕ್ಷತ್ರದವರ ಜನನಕ್ಕೆ ಶಾಂತಿ :
ವಿಭ್ಬ್ರಾಡ್ ಬಹತ್ಪಿವತು ಸೋಮ್ಯ ಮಧ್ವಾಯುರ್ದಧ ದ್ಯಜ್ಞಪತಾನ ವಿದ್ರುತಂ |
ವಾತಜೂತೋಯೋ ಅಭಿರಕ್ಷಿತಿತ್ಮನಾ ಪ್ರಜಾಃಪುಪೋಷ ಪುರುಧಾ ವಿರಾಜತಿ ||
ಈ ನಕ್ಷತ್ರದಲ್ಲಿ ಸಂತಾನದ ಜನವಾದರೆ ತಾಯಿ ತಂದೆಯರು ಈ ಮೇಲಿನ ಮಂತ್ರವನ್ನು ಒಂದು ಮಾಲೆಯಷ್ಟು ಜಪಮಾಡಿ.ಯಥಾ ಶಕ್ತಿ ಹೆಸರುಕಾಳು, ಅಕ್ಕಿ ಬೆಲ್ಲವನ್ನು ದಾನ ನೀಡಬೇಕು. ಇದರಿಂದ ನಕ್ಷತ್ರದೋಗಳು ಶಾಂತವಾಗುತ್ತವೆ.
ಯಂತ್ರ :
ಹ್ರೀಂ ಓಂ ಹಂ ಸವಿತಾಯ ನಮಃ
ಉದತ್ಯಂ ಜಾತವೇದಸಂ ಏವಂ ವಹಂತಿ ಕೇತವಃ |
ದೃಶೇ ವಿಶ್ವಾ ಸೂರ್ಯಂ |
ಈ ಯತ್ರವನ್ನು ಸುವರ್ಣ ಪತ್ರದ ಮೇಲೆ ಉತ್ಕೀರ್ಣಗೊಳಿಸಿ, ಈ ಮೇಲಿನ ಮಂತ್ರವನ್ನು ಒಂದು ಸಹಸ್ರ ಸಂಖ್ಯೆಯಲ್ಲಿ ಜಪಮಾಡಿ, ರಾಜಿಕ, ಗಂಧದ ಪುಡಿ, ಗುಗ್ಗುಳದ ಧೂಪವನ್ನು ನೀಡಬೇಕು. ಪಾಯಸ ನೈವೇದ್ಯ ಮಾಡಿ, ಅದರಲ್ಲಿ ಎಕ್ಕದ ಕಾಷ್ಟದಿಂದ ಹೋಮಮಾಡಿ ತಿಲಹೋಮ, ಅನ್ನಹೋಮ, ದೂರ್ವಾಹೋಮ ಮಾಡಿ, ಬೆಲ್ಲ ಸಕ್ಕರೆ ಜೇನುತುಪ್ಪ ಮಿಶ್ರಿತ ಅನ್ನದ ಬಲಿ ನೀಡಬೇಕು. ನಂತರ ಯಂತ್ರವನ್ನು ಧಾರಣ ಮಾಡಬೇಕು. ಇದರಿಂದ ಹಸ್ತಾ ನಕ್ಷತ್ರದ ಸಮಸ್ತ ದೋಷಗಳು ಶಾಂತಿವಾಗುತ್ತವೆ.