ಚಿತ್ರದುರ್ಗ: ಅಡಿಕೆ ಖರೀದಿಸಿದ್ದ ಹಣ ಕೊಡದೆ ಉದ್ಯಮಿಯೊಬ್ಬರು ಸತಾಯಿಸಿ ಬೈದ ಹಿನ್ನೆಲೆಯಲ್ಲಿ ಮನನೊಂದ ವ್ಯಾಪಾರಿ ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಸಿದ್ದಾಪುರ ಗ್ರಾಮದ ಶೈಲೇಶ್ (42) ನೇಣಿಗೆ ಶರಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಅಡಿಕೆ ಗೋದಾಮಿನಲ್ಲಿ ನೇಣು ಬಿಗಿದುಕೊಂಡು ವ್ಯಾಪಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉದ್ಯಮಿ ಉದಯ್ ಶೆಟ್ಟಿ ಎಂಬವರಿಗೆ ಶೈಲೇಶ್ ಅಡಿಕೆ ಮಾರಿದ್ದರು. ಅಡಿಕೆ ಖರಿದೀಸಿದ್ದ ಉದಯ್ ಶೆಟ್ಟಿ 6 ಕೋಟಿ 60 ಲಕ್ಷ ಹಣ ಕೊಟ್ಟಿರಲಿಲ್ಲ. ಹಣ ಕೇಳಲು ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಂದು ಡೆತ್ ನೋಟ್ ನಲ್ಲಿ ಶೈಲೇಶ್ ಬರೆದಿದ್ದರು. ಅಲ್ಲದೆ ತಂದೆಗೆ ಕ್ಷಮೆ ಕೇಳಿ ನೋವು ತೋಡಿಕೊಂಡಿದ್ದಾರೆ.
ಉದ್ಯಮಿ ಉದಯ್ ಶೆಟ್ಟಿ ವಿರುದ್ದ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














