ಮನೆ ಅಪರಾಧ ಕುಣಿಗಲ್: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

ಕುಣಿಗಲ್: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

0

ಕುಣಿಗಲ್: ಕಳೆದ ಒಂದೇ ರಾತ್ರಿಯಲ್ಲಿ (ನ.12) ಸರಣಿ ಕಳ್ಳತನವಾಗಿರುವುದು ತಾಲೂಕಿನ ಹುತ್ರಿದುರ್ಗ ಹೋಬಳಿ ಕೆಂಪನಹಳ್ಳಿ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

Join Our Whatsapp Group

ತಾಲೂಕಿನ ಹುತ್ರಿದುರ್ಗ ಹೋಬಳಿ ಕೆಂಪನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಹಾಗೂ ಗ್ರಾಮ ಪಂಚಾಯತ್‌ ನ ಬಾಗಿಲು ಹಾಗೂ ಕಿಟಕಿ ಸರಳುಗಳನ್ನು ಮುರಿದು ಲಕ್ಷಾಂತರ ರೂ. ಬೆಲೆ ಬಾಳುವ ಎಲೆಕ್ಟ್ರಾನಿಕ್ ಯಂತ್ರಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ನ.12ರ ಮಂಗಳವಾರ ತರಗತಿ ಮುಗಿದ ಬಳಿಕ ಎಂದಿನಂತೆ ಶಿಕ್ಷಕರು ಶಾಲೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಶಾಲೆಯ ಗಣಕಯಂತ್ರದ ಕೊಠಡಿಯ ಬಾಗಿಲ ಬೀಗ ಮುರಿದ ಕಳ್ಳರು ಒಳನುಗ್ಗಿ ಎರಡು ಯುಪಿಎಸ್ ಬ್ಯಾಟರಿ ಕಳವು ಮಾಡಿದ್ದಾರೆ.

ಬಳಿಕ ಶಾಲೆಯ ಸಮೀಪದಲ್ಲಿದ್ದ ಗ್ರಾಮ ಪಂಚಾಯತ್ ಹಿಂಬದಿಯಿಂದ ಕಿಟಕಿ ಸರಳುಗಳನ್ನು ಕತ್ತಿರಿಸಿ ಒಳ ನುಗ್ಗಿದ ಕಳ್ಳರು ಯುಪಿಎಸ್ ಬ್ಯಾಟರಿ, ಎಲ್ ಇಡಿ ಟೀವಿ, ಡಿವಿಆರ್ ದೋಚಿಕೊಂಡು ಪರಾರಿಯಾಗಿದ್ದಾರೆ. ‌

ಪಂಚಾಯತ್ ಪಿಡಿಓ, ಶಾಲೆಯ ಮುಖ್ಯ ಶಿಕ್ಷಕ ನೀಡಿದ ದೂರಿನನ್ವಯ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.