ನಮ್ಮ ಶುದ್ಧ ರಕ್ತವು ಶುದ್ಧ ರಕ್ತನಾಳಗಳ ದಮನಿಗಳಲ್ಲಿ ಹರಿಯುವಾಗ,ರಕ್ತವು ರಕ್ತನಾಳಗಳ ರಬ್ಬರ್ ನಂತಹ ಗೋಡೆಗಳ ಮೂಲಕ ಒತ್ತಡದಿಂದ ಮುಂದೆ ಸಾಗುತ್ತದೆ.ಈ ರಕ್ತ ಒತ್ತಡ ಹೆಚ್ಚಿದಷ್ಟು ರಕ್ತನಾಳಗಳು ಹೆಚ್ಚು ವಿಕಾಸಗೊಳ್ಳುತ್ತಾ ಹೋಗುತ್ತದೆ.
ರಕ್ತದ ಒತ್ತಡ ಕಡಿಮೆಯಾದಷ್ಟು ರಕ್ತನಾಳಗಳ ವಿಕಾಸ ಕಡಿಮೆಯಾಗುತ್ತದೆ ಆದ್ದರಿಂದ ಹೃದಯದ ಒತ್ತಡಕ್ಕೂ ರಕ್ತನಾಳಗಳ ವಿಕಾಸ ಕಡಿಮೆಯಾಗುತ್ತದೆ. ಅದ್ದರಿಂದ ಹೃದಯದ ಒತ್ತಡಕ್ಕೂ ರಕ್ತನಾಳಗಳ ವಿಕಾಸಕ್ಕೆ ಸಮಾನಾಂತರ ಸಂಬಂಧವಿದೆ.ರಕ್ತದ ಒತ್ತಡ ಎರಡು ರೀತಿಯಲ್ಲಿ ಬದಲಾವಣೆಯಾಗುತ್ತದೆ. ಒಂದು ಸಲ ರಕ್ತದ ಒತ್ತಡ ಹೆಚ್ಚಾದರೆ ಮಿದುಳಿನಲ್ಲಿರುವ ವಾಸೋ ಮೀಟರ್ ಕೇಂದ್ರವು ರಕ್ತನಾಳಗಳಿಗೆ ವಿಕಾಸ ಗೊಳ್ಳುವಂತೆ ಸಂದೇಶ ಕಳುಹಿಸುತ್ತದೆ. ಆಗ ರಕ್ತನಾಳಗಳು ತನ್ನ ಪ್ರತಿರೋಧ ಕಡಿಮೆ ಮಾಡಿಕೊಂಡು ಸುಲಭವಾಗಿ ವಿಕಾಸಗೊಂಡು ರಕ್ತ ಹರಿಯುವಂತೆ ಮಾಡಿ ರಕ್ತದ ಒತ್ತಡವನ್ನು ಸಾಮಾನ್ಯ ಸ್ಥಿತಿಗೆ ತರುತ್ತದೆ.ಅದೇ ರೀತಿ ರಕ್ತನಾಳಗಳು ವಿಕಾಸಗೊಳ್ಳುತ್ತದೆ.ಪ್ರತಿರೋಧ ಹೆಚ್ಚಿದೆಷ್ಟು ಆಗ ‘ವಾಸೋಮೀಟರ್’ ಹೃದಯದ ಕ್ರಿಯೆ ಹೆಚ್ಚಾಗುವಂತೆ ಮಾಡಿ ರಕ್ತದ ಒತ್ತಡ ಹೆಚ್ಚಿನ ರಕ್ತನಾಳಗಳ ದಮನಿಗಳನ್ನು ವಿಕಾಸ ಗೊಳ್ಳುವಂತೆ ಮಾಡುತ್ತದೆ. ಆಗ ರಕ್ತ ಸುಲಭವಾಗಿ ಹರಿದು ರಕ್ತದ ಚಲನೆ ಸಾಮಾನ್ಯ ಸ್ಥಿತಿಗೆ ಬರುವಂತೆ ಮಾಡುತ್ತದೆ. ರಕ್ತನಾಳಗಳ ಪ್ರತಿರೋಧ ಹೆಚ್ಚಿದಷ್ಟು ಹೃದಯದ ಕ್ರಿಯೆಯು ಹೆಚ್ಚಾಗುತ್ತದೆ.
ಸಾಮಾನ್ಯ ರಕ್ತದೊತ್ತಡ :
ಸೈಸ್ಟ್ರೋಲ್ – ಹೃದಯವು ಕೆಳಗಿನ ಕೋಣೆಗಳಿಂದ ರಕ್ತನಾಡಿಗಳಿಗೆ ಹರಿಯುವಾಗ ರಕ್ತದ ಒತ್ತಡ ಪ್ರಮಾಣ.
ಡೈಸ್ಟೋಲ್ – ಹೃದಯವು ಮೇಲಿನ ಕೋಣೆಗಳಿಂದ ಕೆಳಗಿನ ಕೋಣೆಗಳಿಗೆ ಹರಿಯುವ ರಕ್ತದ ಒತ್ತಡ ಪ್ರಮಾಣ.
ಸಾಮಾನ್ಯವಾಗಿ ವಯಸ್ಕರ ಸೈಸ್ಟೋಲಿಕ್ ರಕ್ತದ ಒತ್ತಡವು 120 ರಿಂದ 140 ಎಂ.ಎಂ./ಎಚ್. ಜಿ.ಇರುತ್ತದೆ.
ಸಾಮಾನ್ಯವಾಗಿ ವಯಸ್ಕರ ಡಯೋಸ್ಟೋಲಿಂಗ್ ರಕ್ತದ ಒತ್ತಡ 80 ರಿಂದ 90 ಎಂ.ಎಂ./ಎಚ್. ಜಿ.ಇರುತ್ತದೆ.ಈ ರಕ್ತದೊತ್ತಡವನ್ನು ಸ್ಪೇಗ್ಮೋಮನೋಮೀಟರ್ / ನಿಂದ ಅಳೆಯುತ್ತಾರೆ.
ಸುಲಭವಾಗಿ ಅಳತೆ ಮಾಡುವ ವಿಧಾನ :
ಸೈಸ್ಟೋಲಿಕ್ ಒತ್ತಡ 20- 60 ವರ್ಷದವರೆಗೆ 120 +1/5 ಎಂ. ಎಂ./ಎಚ್. ಜಿ (ಅವರ ವಯಸ್ಸಿನ 1/ 5 ಭಾಗ) 60 ವರ್ಷಕ್ಕೂ ಹೆಚ್ಚಾದ ವಯಸ್ಕರಿಗೆ ಹೆಚ್ಚು 135 + ( 60 ವರ್ಷದ ನಂತರ ಪ್ರತಿ ವರ್ಷ 1 ನ್ನು ಸೇರಿಸಿ )
ಡಯೋಸ್ಟೋಲಿಕ್ ರಕ್ತದೊತ್ತಡ- 25ನೇ ವರ್ಷದಲ್ಲಿ 80 ಎಂ.ಎಂ./ ಎಚ್.ಜಿ. 25 ವರ್ಷದ ನಂತರ – 80+1 ( 25ರ ನಂತರ ಪ್ರತಿ 5 ವರ್ಷಕ್ಕೆ 1ನ್ನು ಸೇರಿಸಿ. )
ರಕ್ತದ ಒತ್ತಡ ದಿನಪೂರ್ತಿ ಒಂದೇ ಸಮಾನವಾಗಿರುವುದಿಲ್ಲ.ಸಾಮನ್ಯವಾಗಿ ಪ್ರಾತಃಕಾಲದಲ್ಲಿ ಕಡಿಮೆ. ಸಂಜೆಯ ನಂತರ ಹೆಚ್ಚಾಗುತ್ತದೆ.ಅಧಿಕ ನಿದ್ರೆ ಅಥವಾ ಅಧಿಕವಾಗಿ ವಿರಾಮಸಿದಾಗ ಕಡಿಮೆ ಆಗುತ್ತದೆ. ವ್ಯಾಯಾಮ ಉದ್ವೇಗಕ್ಕೆ ಒಳಗಾಗುವುದು ಅಥವಾ ದೈಹಿಕವಾದ ನೋವುಗಳಿಂದ ರಕ್ತದ ಒತ್ತಡ ತಾತ್ಕಾಲಿಕವಾಗಿ ಹೆಚ್ಚಾಗುತ್ತದೆ.ಚಳಿಗಾಲದಲ್ಲಿ ಹೆಚ್ಚಾಗಿ ಮತ್ತು ಬೇಸಿಗೆಯಲ್ಲಿ ಕಡಿಮೆಯಾಗುತ್ತದೆ.ಅಲ್ಲದೇ ಮಾನಸಿಕ ಒತ್ತಡ, ಮಲಮೂತ್ರ ವಿಸರ್ಜಿಸಿದಾಗ, ತಿಂದಾಗ, ಕಾಫಿ,ಟೀ, ಮಧ್ಯಪಾನ ಧೂಮಪಾನ ಮಾಡಿದಾಗಲು ಸಹ ಒತ್ತಡ ಹೆಚ್ಚುತ್ತದೆ.