ಮನೆ ಮನರಂಜನೆ ಧ್ರುವ್‌ ವಿಕ್ರಮ್‌ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ರಿಲೀಸ್‌

ಧ್ರುವ್‌ ವಿಕ್ರಮ್‌ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ರಿಲೀಸ್‌

0

ಚೆನ್ನೈ: ಕಾಲಿವುಡ್‌ ನ ಖ್ಯಾತ ನಿರ್ದೇಶಕ ಮಾರಿ ಸೆಲ್ವರಾಜ್ ಸೋಮವಾರ(ಮೇ.6 ರಂದು) ತನ್ನ ಮುಂದಿನ ಸಿನಿಮಾದ ಟೈಟಲ್‌ ಹಾಗೂ ಫಸ್ಟ್‌ ಲುಕ್ ರಿಲೀಸ್‌ ಮಾಡಿದ್ದಾರೆ.

ನಟ ವಿಕ್ರಮ್‌ ಪುತ್ರ ಧ್ರುವ್‌ ವಿಕ್ರಮ್‌ ಅವರೊಂದಿಗೆ ಸೆಲ್ವರಾಜ್‌ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾಕ್ಕೆ ʼಬೈಸನ್‌ʼ ಎಂದು ಟೈಟಲ್‌ ಇಡಲಾಗಿದೆ. ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್ ಆಗಿದೆ.

ಸಿನಿಮಾದ ಮುಹೂರ್ತ ನೆರವೇರಿದ್ದು, ಚಿಯಾನ್‌ ವಿಕ್ರಮ್‌ ಮಗನ ಸಿನಿಮಾಕ್ಕೆ ಕ್ಲ್ಯಾಪ್‌ ಮಾಡಿ ಶುಭ ಹಾರೈಸಿದ್ದಾರೆ.

ಇದೊಂದು ಸ್ಪೋರ್ಟ್ಸ್‌ ಡ್ರಾಮಾ ಸಿನಿಮಾ ಎನ್ನಲಾಗುತ್ತಿದ್ದು, ಕಬ್ಬಡಿ ಹಿನ್ನಲೆಯಲ್ಲಿ ಮೂಡಿಬಂದಿರುವ ಚಿತ್ರವು ಹೆಸರಾಂತ ಕ್ರೀಡಾ ಪಟು ಮಾನತಿ ಗಣೇಶನ್ ಅವರ ಜೀವನಾಧಾರಿತದ ಕಥೆಯನ್ನೊಳಗೊಂಡಿದೆ ಎನ್ನಲಾಗಿದೆ.

ಸಿನಿಮಾದಲ್ಲಿ ಮಲಯಾಳಂ ನಟಿಯರಾದ ರಜಿಶಾ ವಿಜಯನ್ ಮತ್ತು ಅನುಪಮಾ ಪರಮೇಶ್ವರನ್ ನಾಯಕಿಯರಾಗಿ ನಟಿಸಲಿದ್ದಾರೆ.

ಸಿನಿಮಾವನ್ನು ಖ್ಯಾತ ನಿರ್ದೇಶಕ ಪಾ ರಂಜಿತ್ ಅವರ ಹೋಮ್ ಬ್ಯಾನರ್ ನೀಲಂ ಪ್ರೊಡಕ್ಷನ್ಸ್, ಅಪ್ಲಾಸ್ ಎಂಟರ್‌ಟೈನ್‌ಮೆಂಟ್ ಸಹಯೋಗದೊಂದಿಗೆ ನಿರ್ಮಾಣ ಮಾಡಲಿದೆ.

ಹಿಂದಿನ ಲೇಖನನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಕೊಲೆ ಆರೋಪ
ಮುಂದಿನ ಲೇಖನಸಿದ್ದರಾಮಯ್ಯ, ಸಿಂಧ್ಯಾ  ಸಂಸ್ಕಾರವನ್ನು ಕಲಿತಿದ್ದೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಂದ: ವಿ ಸೋಮಣ್ಣ