ಮನೆ ಯೋಗಾಸನ ಏಕಪಾದ ರಾಜಕಪೋತಾಸನ

ಏಕಪಾದ ರಾಜಕಪೋತಾಸನ

0

 ಅಭ್ಯಾಸ ಕ್ರಮ :

1. ಮೊದಲು ನೆಲದ ಮೇಲೆ ಮಂಡಿಯೂರಿ ಕುಳಿತು ದೇಹದ ಇಬ್ಬದಿಗಳಲ್ಲಿಯೂ ಆಯಾ ಅಂಗೈಗಳನ್ನು ಊರಿಡಬೇಕು. ಬಳಿಕ ಮಂಡಿಗಳನ್ನು ಮೇಲೆತ್ತಿ ಬಲಗಾಲನ್ನು ಮುಂಗಡೆಗೂ ಎಡಗಾಲನ್ನು ಹಿಂಗಡೆಗೂ ಚಾಚಿ ಉಸಿರನ್ನು ಹೊರ ಹೋಗಿಸುತ್ತ. ಅವನ್ನು ವಿರುದ್ಧ ದಿಕ್ಕುಗಳಲ್ಲಿ ಹೊರಬದಿಯೂ ನೆಲವನ್ನು ಉದ್ದಕ್ಕೂ ತಾಗುವಂತಿರಬೇಕು. ಈಗ ಕಾಲುಗಳ ಬಂಗಿಯೂ ‘ಹನೂಮಾನಾಸನ’ವಾಗುತ್ತದೆ ಹಿಂದೆ ವಿವರಿಸಿದಂತೆ, ಇದು ಪಾಶ್ಚಾತ್ಯ ದೇಶದ ನೃತ್ಯ ನಾಟಕದಲ್ಲಿ ಕಿಸುಗಾಲ ಭಂಗಿಯನ್ನು ಹೋಲುತ್ತದೆ.

Join Our Whatsapp Group

2. ಆಮೇಲೆ,ಎದೆಯನ್ನು ಮುಂದೂಡಿ ಕತ್ತನ್ನು ಹಿಗ್ಗಿಸಿ, ತಲೆಯನ್ನು ಸಾಧ್ಯವಾದಷ್ಟೂ ಹಿಂದಕ್ಕೆ ಬಿಸಿಡಬೇಕು. ಬಳಿಕ ಎಡ ಮಂಡಿಯನ್ನು ಭಾಗಿಸಿ ಎಡಪಾದವನ್ನು ತಲೆಯ ಬಳಿ ತಂದು. ಎಡಗಾಲ ಮಂಡಿಯಿಂದ ಕಾಲ್ಗಿ ಣ್ಣಿನವರೆಗೂ ಇರುವ ಕಣಕಾಲಿನ ಭಾಗವನ್ನು ನೆಲಕ್ಕೆ ಲಂಬವಾಗಿರುವಂತೆ ಇರಿಸಬೇಕು.

3. ಇದಾದಮೇಲೆ,ಮತ್ತೆ ಉಸಿರನ್ನು ಹೊರ ಹೋಗಿ ಹೋಗಿತ್ತ, ಎಡತೋಳನ್ನು  ತಲೆಯ ಮೇಲ್ಗಡೆಗೆ ತಂದು ಎಡಪಾದವನ್ನು ಎಡಗೈಯಿಂದ ಬಿಗಿಯಾಗಿ ಹಿಡಿದುಕೊಳ್ಳಬೇಕು. ಕೆಲವು ಸಲ ಉಸಿರಾಟ ನಡೆಸಿದ ಮೇಲೆ ಮತ್ತೆ ಉಸಿರನ್ನು ಹೊರದೂಡಿ,ಬಲ ತೋಳನ್ನು ತಲೆಯ ಮೇಲ್ಗಡೆಗೆ ತಂದು,ಎಡಪಾದವನ್ನು ಬಲಗೈಯಿಂದ ಹಿಡಿದುಕೊಳ್ಳಬೇಕು. ಆ ಬಳಿಕ ತಲೆಯನ್ನು ಅಂಗಾಲಿಗೆ ಒರಗಿಸಬೇಕು.

4. ಈ ಭಂಗಿಯಲ್ಲಿ ಸುಮಾರು 10 ಸೆಕೆಂಡುಗಳ ಕಾಲ ನೆಲೆಸಿ, ಬಳಿಕ ಎಡಗಾಲ ಮೇಲಣ ಬಿಗಿತವನ್ನು ಸಡಿಲಿಸಿ ಮತ್ತೆ ‘ಹನೂಮಾನಾಸನ’ಕ್ಕೆ ಬರಬೇಕು.ಆಮೇಲೆ ಅಂಗೈಗಳನ್ನು ನೆಲದ ಮೇಲೂರಿ ಟೊಂಕಗಳನ್ನು ನೆಲದಿಂದ ಮೇಲೆತ್ತಬೇಕು.

5. ಈಗ ಮತ್ತೆ ‘ಹನೂಮಾಸನ’ಕ್ಕೆ ಹಿಂದಿರುಗಬೇಕು. ಇದರಲ್ಲಿ ಎಡಗಾಲನ್ನು ಮುಂಗಡೆಗೆ ನೆಟ್ಟಗೆ ಚಾಚಿತ್ತು ಹಿಂದಿಟ್ಟು ಬಲಗಾಲ ಮಂಡಿಯನ್ನು ಬಾಗಿಸಿ,ಬಲಗಾನ್ನೆತಿ  ತಲೆಯ ಬಳಿ ತರಬೇಕು.

6. ಈಗ ಬಲಪಾದವನ್ನು ಎರಡು ಕೈಗಳಿಂದ ಬಿಗಿಸಿ, ತಲೆಯನ್ನು ಬಲದಂಗಾಲಿನ ಮೇಲೆ ಒರಗಿಸುವುದರ ಮೂಲಕ ಈ ಭಂಗಿಯನ್ನು ಪುನರಾವರ್ತಿಸಬೇಕು.ಭಂಗಿಯಲ್ಲಿ ನೆಲೆಸುವ ಕಾಲ ಎರಡೂ ಕಡೆ ಸಮನಾಗಿರಬೇಕು.

 ‘ ಏಕಪಾದ ರಾಜಕಪೋತಾಸನ ಚಕ್ರ’ದ ಭಂಗಿಗಳಿಂದ ಆಗುವ ಪರಿಣಾಮಗಳು

       ಈ ಆಸನದ ಭಂಗಿಗಳು ಟೋಂಕದ ಮತ್ತು ಬೆನ್ನೆಲುಬಿನ ಕೆಳಭಾಗಗಳಿಗೆ ನವ ಚೈತನ್ಯವನ್ನೊ ದಗಿಸುತ್ತವೆ. ಇದರಲ್ಲಿ ಕತ್ತು ಮತ್ತು ಹೆಗಲುಗಳ ಮಾಂಸ ಖಂಡಗಳಿಗೆ ಉತ್ತಮ. ರೀತಿಯಲ್ಲಿ ವ್ಯಾಯಾಮ ದೊರಕುತ್ತದೆ.ಈ ಭಂಗಿಗಳ ವಿವಿಧ ಕಾಲಿನ ಚಾಲನೆಗಳು ತೊಡೆಗಳಿಗೂ ಮತ್ತು ಕಾಲ್ಗಿಣ್ಣುಗಳಿಗೂ ಶಕ್ತಿಯನ್ನು ಕೊಡುತ್ತದೆ.ಅಲ್ಲದೆ ಕಂಠಮಣಿಯ ಗಳುಗ್ರಂಥಿ ಇದಕ್ಕೆ ಸಂಬಂಧಿಸಿ ಇತರ ಗ್ರಂಥಿಗಳು ಮೂತ್ರಪಿಂಡದ ಮೇಲಿನ ನಿರ್ನಾಳಗ್ರಂಥಿಗಳು ಮತ್ತು ಅಂಡರೇತಗ್ರಂಥಿಗಳು ಇವೆಲ್ಲಕ್ಕೂ ಹೆಚ್ಚು ಪ್ರಮಾಣದ ತರಕ್ತವೂ ಒದಗಿ ಆ ಮೂಲಕ ತಮ್ಮ ತಮ್ಮ ಕಾರ್ಯಗಳನ್ನು ಸರಿಯಾಗಿ ನಡೆಸಿಕೊಂಡು ಹೋಗಲು ಅನುಕೂಲವಾಗುತ್ತದೆ.ಇದರಿಂದ ದೇಹಕ್ಕೆ ನಾವಚೈತನ್ಯವೊದಗುತ್ತದೆ. ಈ ಭಂಗಿಯಲ್ಲಿ ಗುಹ್ಯಪ್ರದೇಶ ಸುತ್ತ ರಕ್ತ ಪರಿಚಲನೆಯು ಚೆನ್ನಾಗಿ ನಡೆದು ಅದರಿಂದ ಅದು ಹೆಚ್ಚು ಆರೋಗ್ಯಸ್ಥಿತಿಯನ್ನು ಗಳಿಸುತ್ತದೆ ಒಟ್ಟಿನಲ್ಲಿ ಮೂತ್ರ ಜನಾಂಗಗಳಲ್ಲಿಯ ಶೂನ್ಯತೆಯನ್ನು ಕಳೆಯಲು, ಮೈಥುನದ ಬಯಕೆಯನ್ನು ತಗ್ಗಿಸಲು ಅಂದರೆ ಇಂದ್ರೀಯ ನಿಗ್ರಹವನ್ನು ಸಾಧಿಸಲು, ಈ ಆಸನಗಳ ಅಭ್ಯಾಸವನ್ನು ಸಲಹೆ ಮಾಡಲಾಗಿದೆ.