ಮನೆ ರಾಜಕೀಯ ಮಂಡ್ಯ : ರಸ್ತೆ ಕಾಮಗಾರಿಗೆ ಶಾಸಕ ಪಿ. ರವಿಕುಮಾರ್ ಗೌಡ ಚಾಲನೆ

ಮಂಡ್ಯ : ರಸ್ತೆ ಕಾಮಗಾರಿಗೆ ಶಾಸಕ ಪಿ. ರವಿಕುಮಾರ್ ಗೌಡ ಚಾಲನೆ

0

ಮಂಡ್ಯ : ಮಂಡ್ಯ ತಾಲೂಕಿನ ಕಟ್ಟಿದೊಡ್ಡಿ ಮಲ್ಲಯ್ಯನ ದೊಡ್ಡಿ ಮುಖ್ಯ ರಸ್ತೆಯ 3.50 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಶಾಸಕ ಪಿ. ರವಿಕುಮಾರ್ ಗೌಡ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಗ್ರಾಮಸ್ಥರ ಬೇಡಿಕೆಯಂತೆ ಮಲ್ಲಯ್ಯನ ದೊಡ್ಡಿ ಇಂದ ಎನ್ ಹೆಚ್ 275 ಮಾರ್ಗವಾಗಿ ಕಟ್ಟೇದೊಡ್ಡಿಗೆ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು ಸೋಮವಾರದಿಂದಲೇ ರಸ್ತೆ ಕಾಮಗಾರಿ ಶುರು ಮಾಡಲಿದ್ದು ಶೀಘ್ರದಲ್ಲೇ ಕಾಮಗಾರಿ ಮುಗಿಸಿ ಗ್ರಾಮದ ಜನರಿಗೆ ಅನುಕೂಲವಾಗಲಿದೆ.

ನಾಲೆಯ ಅಭಿವೃದ್ಧಿಗೆ 5 ಕೋಟಿ ಬಿಡುಗಡೆಗೆ ಟೆಂಡರ್ ಕರೆದಿದ್ದು ಮುಂದಿನ ದಿನಗಳಲ್ಲಿ ನಾಲೆಯ ಕಾಮಗಾರಿಗೆ ಚಾಲನೆ ನೀಡಲಾಗುವುದು ಇದರಿಂದ ರೈತರ ಬೆಳೆಗಳಿಗೆ ಸರಾಗವಾಗಿ ನೀರು ಹರಿಯಲಿದೆ .
ಮುಂದಿನ ಮೂರು ವರ್ಷಗಳಲ್ಲಿ ಗ್ರಾಮದ ಬೀದಿಗಳಿಗೆ ಸಿಮೆಂಟ್ ರಸ್ತೆಯನ್ನಾಗಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ ಕಟ್ಟೇದೊಡ್ಡಿ ಗ್ರಾಮ ಪಂಚಾಯತಿ ಸದಸ್ಯ ಕೆ ಎನ್ ಸಿದ್ದೇಗೌಡ ಮುಖಂಡರಾದ ಚಂದ್ರಶೇಖರ್ ಪುಟ್ಟಸ್ವಾಮಿ ಶಿವರಾಂ ಮಂಜು ಗುತ್ತಿಗೆದಾರ ಕರೀಗೌಡ ಭಾಗವಹಿಸಿದ್ದರು.