ಮನೆ ಸಾಹಿತ್ಯ ನಿರ್ವಹಣಾ ಆತಂಕ

ನಿರ್ವಹಣಾ ಆತಂಕ

0

           ಹೀಗೆ ವೇದಿಕೆ ಭಯ ಸಾರ್ವತ್ರಿಕ ಹಾಗೂ ಸರ್ವಕಾಲಿಕವಾದ ಸಮಸ್ಯೆ ಮನಶಾಸ್ತ್ರದಲ್ಲಿ ಇದನ್ನು ನಿರ್ವಹಣಾ ಆತಂಕ ಅಥವಾ ಪರ್ ಫಾರ್ ಮೇನ್ಸ್ ಆಂಕ್ಸೈಟಿ ಎಂದು ಕರೆಯುತ್ತಾರೆ. ಸ್ವಲ್ಪಮಟ್ಟಿನ ಈ ಆತಂಕ ಲಾಭಕಾರಿ. ಅದು ವ್ಯಕ್ತಿಯ ನಿರ್ವಹಣೆಯನ್ನು ಉತ್ತಮಪಡಿಸುತ್ತದೆ. ವ್ಯಕ್ತಿ ಮನಸಿಟ್ಟು ಉತ್ತಮವಾಗಿ ನಡೆದುಕೊಳ್ಳಲು  ಪ್ರೇರೇಪಣೆ ನೀಡುತ್ತದೆ. ಆದರೆ ಹೆಚ್ಚಿನ ಆತಂಕ ತೊಂದರೆ ದಾಯಕ. ಇದನ್ನು ನಿವಾರಿಸುವುದು ಹೇಗೆ?

Join Our Whatsapp Group

          ಒಳ್ಳೆಯ ಸಿದ್ಧತೆ ಮಾಡಿಕೊಳ್ಳಿ. ನಿಮಗಿರುವ ಕಾಲಾವಕಾಶದಲ್ಲಿ ಎಷ್ಟು ಮತ್ತು ಹೇಗೆ ಮಾತನಾಡಬೇಕು. ಹಾಡಬೇಕು ಅಭಿನಯಿಸಬೇಕು ಎಂದು ಯೋಚಿಸಿ.ಇತರರ ಸಲಹೆ ಮತ್ತು ನೆರವಿನಿಂದ ಸಿದ್ಧತೆ ಮಾಡಿಕೊಳ್ಳಿ.

 ಆತಂಕ ಭಯ ನಿವಾರಣೆ ಹೇಗೆ? :

 ತಾಲೀಮು ರಿಹರ್ಸಲ್   :  ಕನ್ನಡಿಯ ಮುಂದೆ ಅಥವಾ ಪರಿಚಯದ ಮನೆಯವರು ಗೆಳೆಯರ ಮುಂದೆ ರಿಹರ್ಸಲ್ ಮಾಡಿ.ಎಷ್ಟು ಸಲ ನೀವು ರಿಹರ್ಸಲ್  ಮಾಡುತ್ತಿರೋ ಅಷ್ಟು ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.ನಿರ್ವಹಣೆ ಉತ್ತಮವಾಗುತ್ತದೆ. ಮನೆಯವರು ಗೆಳೆಯರ ವಿಮರ್ಶೆನೆಯನ್ನು ಅರ್ಥ ಮಾಡಿಕೊಂಡು ನಿಮ್ಮ ನಿರ್ವಹಣೆಯನ್ನು ಸುಧಾರಿಸಿಕೊಳ್ಳಿ.

 ಆಶಾವಾದ  :

           ಸ್ಪರ್ಧೆ ಅತಿಯಾಗಿದ್ದರೆ, ನಿಮ್ಮ ಸಹ ಸ್ಪರ್ಧಿಗಳು ನಿಮಗಿಂತ ಜೋರಾಗಿದ್ದರೆ ನಿಪುಣರಾಗಿದ್ದರೆ. ಅದರ ಬಗ್ಗೆ ಆಲೋಚಿಸಬೇಡಿ.‘ನಾನು ನನ್ನ ಪ್ರಯತ್ನ ಮಾಡುತ್ತೇನೆ.ನನ್ನ ಗರಿಷ್ಠ ಮಟ್ಟವನ್ನು ಪ್ರದರ್ಶಿಸುತ್ತೇನೆ.ಫಲಿತಾಂಶ ಚೆನ್ನಾಗಿಯೇ ಇರುತ್ತದೆ’ ಎಂದು ಹೇಳಿಕೊಳ್ಳಿ.

          ವೇದಿಕೆ ಏರುವ ಮುನ್ನ 5 10 ನಿಮಿಷಗಳ ಅವಧಿಯಲ್ಲಿ ನೀವು ಕುಳಿತಿರುವ ಎಡೆಯಲ್ಲೇ ವಿರಮಿಸಿ,ದೀರ್ಘವಾಗಿ ಮತ್ತು ಆಳವಾಗಿ ಉಸಿರಾಡಿ ಶರೀರದ ಎಲ್ಲಾ ಭಾಗಗಳನ್ನು ಸಡಿಲವಾಗಿಡಿ. ಕಣ್ಣು ಮುಚ್ಚಿ ಒಂದು ಹೂವನ್ನೋ ದೀಪವನ್ನೋ ನಿಮ್ಮ ಮನೆದೇವರನ್ನೋ ಕಲ್ಪಿಸಿಕೊಳ್ಳಿ ವೇದಿಕೆಯ ಮೇಲೆ ಇರುವಾಗ,ಸಭಿಕರಲ್ಲಿ ಕೆಲವರನ್ನು ಆಯ್ದು ಅಥವಾ ಮೊದಲೇ ನಿಮ್ಮ ಪರಿಚಿತರಲ್ಲೂ ಸಭಿಕರನ್ನಾಗಿ ಕೂರಿಸಿ ಅವರನ್ನು ನೋಡುತ್ತಾ ಮಾತನಾಡಲು ಹಾಡಲು ಶುರು ಮಾಡಿ ಆಕಸ್ಮಾತ್ ತಪ್ಪಾದರೆ, ಗಂಭೀರವಾಗಿ ತೆಗೆದುಕೊಳ್ಳಬೇಡಿ. ಸಹಜವಾಗಿ ವರ್ತಿಸಿ ತಪ್ಪನ್ನು ನೆನಪಿನಲ್ಲಿಟ್ಟುಕೊಂಡು ಮುಂದಿನ ಸಲ ಸರಿಪಡಿಸಿಕೊಳ್ಳಿ ಹಲವಾರು ಸಲ,ಪ್ರಾಕ್ಟೀಸ್ ಆದ ಮೇಲೆ, ವೇದಿಕೆ ಭಯ ಮರೆಯಾಗುತ್ತದೆ.

 ಪರೀಕ್ಷೆ ಎಂದರೆ ಭಯ  :

         ಪರೀಕ್ಷೆ ಎಂದ ತಕ್ಷಣ ಯಾವುದೇ ವಿದ್ಯಾರ್ಥಿಯ ಎದೆ ಢವಗುಟ್ಟುತ್ತದೆ. ಹೃದಯಬಡಿತ ತೀವ್ರವಾಗುತ್ತದೆ. ಆತಂಕ ಮತ್ತು ಭಯ ಮನಸ್ಸನ್ನು ಆವರಿಸುತ್ತದೆ.

      ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ಪರೀಕ್ಷೆ ಎನ್ನುವುದು ಇಲ್ಲದಿದ್ದರೆ ಎಷ್ಟು ಚೆನ್ನಾಗಿತ್ತು ಎದ್ದು ಹಲವು ವಿದ್ಯಾರ್ಥಿಗಳು ತಮ್ಮ ತಮ್ಮಲ್ಲೇ ಹೇಳಿಕೊಳ್ಳುತ್ತಾರೆ ಆದರೆ ಪರೀಕ್ಷೆಗಳು ಅನಿವಾರ್ಯ.

          ಕೆಲವು ಪರೀಕ್ಷೆಗಳು ವ್ಯಕ್ತಿಯ ಬದುಕು, ಭವಿಷ್ಯವನ್ನೇ ನಿರ್ಧರಿಸುತ್ತವೆ. ಉದಾಹರಣೆ ಎಸ್ ಎಸ್ ಎಲ್ ಸಿ ಎರಡನೆಯ ಪಿ.ಯು. ಪರೀಕ್ಷೆ. ಯಾವುದೇ ಪದವಿ ಕೋರ್ಸಿನ ಅಂತಿಮ ಪರೀಕ್ಷೆಗಳು.

           ಈ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು, ಫಸ್ಟ್ ಕ್ಲಾಸ್, ರಾಂಕ್ ಬಂದರೆ  ಒಳ್ಳೆಯ ಉದ್ಯೋಗ, ಸ್ಥಾನಮಾನ.ಇಲ್ಲದಿದ್ದರೆ ಅವಮಾನ, ಕಷ್ಟ ಸಮಸ್ಯೆಗಳ ಬದುಕು ಅವರಿಗೆ ಎದುರಾಗಬಹುದು. ಪರೀಕ್ಷೆಯಲ್ಲಿ ಉತ್ತಮ ನಿರ್ವಹಣೆಗಾಗಿ ವಿದ್ಯಾರ್ಥಿಗಳ ಮೇಲೆ ಮನೆಯವರು ಶಿಕ್ಷಕರು, ಸಹಪಾಠಿಗಳು, ನೆಂಟರಿಷ್ಟರು ಒತ್ತಾಯ ತರುತ್ತಾರೆ. ಉತ್ತಮ ನಿರ್ವಹಣೆಗೆ ಬಹುಮಾನಗಳನ್ನು ಘೋಷಿಸುತ್ತಾರೆ. ನೀನು ಫಸ್ಟ್ ಕ್ಲಾಸ್ ಬಂದರೆ, ಸೈಕಲ್, ವಾಚ್,ಸ್ಕೂಟರ್ ಕೊಡಿಸುತ್ತೇವೆ ಎನ್ನುತ್ತಾರೆ. ರ್‍ಯಾಂಕ್ ಬಂದರೆ ನೀನು ಕೇಳಿದ್ದನ್ನು ಕೊಡಿಸುತ್ತೇವೆ ಎನ್ನುತ್ತಾರೆ.

       ಕಳಪೆ ನಿರ್ವಹಣೆಗೆ ಶಿಕ್ಷೆಯನ್ನು ಘೋಷಿಸುತ್ತಾರೆ. ‘ಕಡಿಮೆ ಅಂಕಗಳನ್ನು ತೆಗೆದೆಯೋ, ಸ್ಕೂಲು ಕಾಲೇಜನ್ನು ಬಿಡಿಸಿ,ಕೆಲಸಕ್ಕೆ ಹಾಕುತ್ತೇವೆ’ ಹುಡುಗಿಗೆ ‘ನಿನಗೆ ಮದುವೆ ಮಾಡಿ, ಗಂಡನ ಮನೆಗೆ ಅಟ್ಟುತ್ತೇವೆ’ ಅಥವಾ ‘ಮನೆ ಕೆಲಸ ಕೆಲಸ ಮಾಡಿಕೊಂಡು, ಅಡುಗೆ ಮಾಡಿಕೊಂಡು ಮನೆಯೊಳಗೆ ಬಿದ್ದಿರಬೇಕು ಎನ್ನುತ್ತಾರೆ.

         ‘ನಿನ್ನ ಜೊತೆ ವಯಸ್ಕರೂ ಒಳ್ಳೆಯ ಅಂಕಗಳನ್ನು ಪಡೆದು ಮುಂದುವರೆಯುತ್ತಾರೆ. ಆಗ ನಿನಗೆಷ್ಟು ಅವಮಾನ.ಎಲ್ಲರೂ ನಿನ್ನನ್ನು ದಡ್ಡ ಅಸಮರ್ಥ ನಾಲಾಯಕ್ ಎಂದು ಹೀಗಳೆಯುತ್ತಾರೆ  ನಿನಗೆ ಯಾರು ಮರ್ಯಾದೆ ಗೌರವ ಕೊಡುವುದಿಲ’ ಎಂದು ಹೆದರಿಸುತ್ತಾರೆ.

       ಆದ್ದರಿಂದ ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಆತಂಕ, ಭಯ ಕ್ಕೀಡಾಗುವುದು ಒತ್ತಡಕ್ಕೆ ಈಡಾಗುವುದೂ ಸಹಜ ಸ್ವಾಭಾವಿಕ.

        ಸ್ವಲ್ಪಮಟ್ಟಿನ ಆತಂಕ, ಭಯ, ಒತ್ತಡ ಇರಬೇಕಾದದ್ದೇ. ಏಕೆಂದರೆ ಅವು ವಿದ್ಯಾರ್ಥಿಗಳನ್ನು ಎಚ್ಚರಿಸುತ್ತವೆ.ಪೂರ್ಣ ಪ್ರಯತ್ನ ಮಾಡು. ಕಷ್ಟಪಡು ಚೆನ್ನಾಗಿ ಮಾಡು ಬಹುಮಾನ ಸ್ಥಾನಮಾನಗಳನ್ನು ಗಿಟ್ಟಿಸಿಕೋ ಎಂದು ಉತ್ತಮ ನಿರ್ವಹಣೆಗಾಗಿ ಪ್ರಚೋದಿಸುತ್ತವೆ.ಆತಂಕ, ಭಯವೇ ಇಲ್ಲದೆ ವಿದ್ಯಾರ್ಥಿ ವಿಪರೀಕ್ಷೆಯನ್ನು ಲಘುವಾಗಿ ತೆಗೆದುಕೊಂಡು ಕಡಿಮೆ ಅಂಗಗಳನ್ನು ಪಡೆಯಬಹುದು ಅಥವಾ ಫೇಲ್ ಆಗಬಹುದು.

       ಆದರೆ ಸಾಕಷ್ಟು ವಿದ್ಯಾರ್ಥಿಗಳನ್ನು ಪರೀಕ್ಷೆ ಅತಿ ಭಯ ಹುಟ್ಟಿಸಿ ಕಾಡ ತೊಡಗುತ್ತದೆ. ಅತಿಭಯ ದೇಹದಲ್ಲಿ ಹೆಚ್ಚು ಆಡ್ರಿನಲಿನ್ ರಸದೂತವನ್ನು ಸ್ರವಿಸಿ ಅನೇಕ ಬಗೆಯ ದೈಹಿಕ ಹಾಗೂ ಮಾನಸಿಕ ಬದಲಾವಣೆ ತೊಂದರೆಗಳನ್ನುಂಟುಮಾಡುತ್ತದೆ.

 ಮಾನಸಿಕ ಬದಲಾವಣೆಗಳು :

1. ಏಕಾಗ್ರತೆಯ ಕೊರತೆ,ಅನ್ಯಮನಸ್ಕತೆ.

2. ಕಲಿಕೆ ನಿಧಾನವಾಗುವುದು, ಕಲಿಕೆ ಸ್ಪಷ್ಟವಾಗುವುದು.

3. ಮರೆವು ಅಥವಾ ಬೇಕಾದಾಗ, ಬೇಕಾದ ಮಾಹಿತಿಯನ್ನು ನೆನಪಿಸಿ ಕೊಳ್ಳಲು ಕಷ್ಟ.

4. ಏನೋ ಅಹಿತಕರ ಭಾವನೆ,ಚಟಪಡಿಕೆ ತಳಮಳದ ಅನುಭವ ನಿಮ್ಮದಿ ಇಲ್ಲದಿರುವುದು.

5. ಆತ್ಮವಿಶ್ವಾಸದ ಕೊರತೆ, ಕೀಳರಿಮೆ ‘ನನ್ನಿಂದಾಗದು ’ಎನಿಸುವುದು.

6. ನರಕಾತ್ಮಕ ಆಲೋಚನೆಗಳು, ನನಗೆ ಕಡಿಮೆ ಅಂಕಗಳು ಬರುತ್ತವೆ.ನಾನು ಫೇಲಾಗುತ್ತೇನೆ.ನನ್ನಂಥವರಿಗೆ ಒಳ್ಳೆಯ ಅಂಕಗಳು ಬರುವುದಿಲ್ಲ ನನ್ನಂಥವರಿಗೆ ಯಶಸ್ಸು ಸಿಗುವುದಿಲ್ಲ ನಾನು ದುರದೃಷ್ಟವಂತ ‘ಇತ್ಯಾದಿ.

7. ಸರಾಗವಾಗಿ ತರಕಾರಿ ಆಲೋಚನೆ ಮಾಡಲು ಆಗದಿರಲುವುದು ಸುಲಲಿತಾ ಈ ಹಾಲು ಜನಿ ಚಿಂತನೆ ವಿಶ್ಲೇಷಣೆ ಸಾಧ್ಯವಾಗದೆ ಹೋಗುವುದು ಸದಾ ಕಾಲ ಬಾಧಕಗಳನ್ನು ತುಲನೆ ಮಾಡಲಾಗುವುದಿಲ್ಲ.

8. ಗೊಂದಲವಾಗುವುದು ಸ್ಪಷ್ಟತೆಗೆ ನಿಖರತೆಗೆ ಇಲ್ಲದಿರುವುದು ತಲೆ ಖಾಲಿ ಅನಿಸುವುದು.

9. ಭಾವನೆಗಳ ಹೇರು ಪೇರು ಬೇಸರ ದುಃಖ ನಿರಾಶಕ್ತಿ ನಿರುತ್ಸಾಹ ಕೋಪ ಸಿಡುಕು ಮುನಿಸು ಕಾಣಿಸಿಕೊಳ್ಳುವುದು.

10. ಸಂವೇದನೆಯ ಏರುಪೇರು ಕಣ್ಣು ಕಿವಿ ಮೂಗು ಚರ್ಮದ ಮೂಲಕ ಒಳ ಬಂದ ಸಂವೇಧನೆಯನ್ನು ನಿಖರವಾಗಿ ಅರ್ಥೈಸಲು ಆಗದಿರುವುದು.

11. ಬೇಗ ಮನಸ್ಸಿನಿಂದ ಮಾನಸಿಕ ದಣಿವು ಹಯಾಸ ಉಂಟಾಗುವುದು.