ಹೆಚ್ಚು ಮಸಾಲೆಯುಕ್ತ ಆಹಾರ ಸೇವನೆ,ಹಸಿಮೆಣಸು, ಉಪ್ಪಿನಕಾಯಿ, ಅತಿಹುಳಿ, ಖಾರವನ್ನು ಹೆಚ್ಚು ಸೇವಿಸುವುದು, ಎಣ್ಣೆ ಖಾದ್ಯವಾದ ಆಹಾರ ಸೇವನೆ, ಮಧ್ಯಪಾನ,ಧೂಮಪಾನ, ಗುಟುಕ ತಂಬಾಕು, ಹೆಚ್ಚು ಚಹಾ,ಕಾಫಿ ಸೇವನೆ, ಸಮಯಕ್ಕೆ ತಕ್ಕಂತೆ ಆಹಾರ ಸೇವಿಸದೆ ಇರುವುದು, ಪೋಷಕಾಂಶಗಳ ಕೊರತೆ, ಹೆಲಿಕೊ, ಪೈಲೋರಿ ಎಂಬ ಬ್ಯಾಕ್ಟೀರಿಯಾ ಸೋಂಕು, ಕರುಳು ಮತ್ತು ಪಿತ್ತಜನಕಾಂಗ ಸೋಂಕು, ಆೄಸ್ಪಿರಿನ್ ಮತ್ತು ಇಂಡೋಮೆಥಸಿನ್ ನಂತಹ ಔಷಧಿಗಳ ಅಡ್ಡ ಪರಿಣಾಮ ಉದ್ವೇಗ, ಕೋಪ, ಚಿಂತೆ, ಆಲೋಚನೆ, ವ್ಯಾಕುಲತೆ ಪಡುವುದು, ವಿಷ ಆಹಾರಸೇವನೆ,ಆಹಾರ ಹೆಚ್ಚು ಸೇವಿಸಿ ತಕ್ಷಣ ಮಲಗುವುದು. ಜಠರದ ಒಳಭಾಗದಲ್ಲಿ ರಕ್ತದ ಹರಿವು ಕಡಿಮೆಯಾಗಿ ಅಲ್ಲಿ ಆಮ್ಲ ಉತ್ಪತ್ತಿ ಹೆಚ್ಚಾಗುವುದು. ಇದರಿಂದ ಹೊಟ್ಟೆಯ ಮೇಲ್ಭಾಗ, ಎದೆಯ ಭಾಗದಲ್ಲಿ ಉರಿಯಾಗುವುದು. ವಾಂತಿ, ನಾಲಿಗೆ ರುಚಿಯಲ್ಲಿದಿರುವುದು, ಊಟ ಸೇರದಿರುವುದು ಹುಳಿತೇಗು, ಹೊಟ್ಟೆ ಉಬ್ಬರ ಅಜೀರ್ಣ, ಆಸಕ್ತ ವಾಗುವುದು.
ಸೆಕೆಂಡರಿ ಇದರಲ್ಲಿ ಎರಡು ಬಗೆ :
- ರಿಪ್ಲೆಕ್ಸ್ ಇಸೋಫೆಜೈಟಿಸ್ : ಇದರಲ್ಲಿ ಹೊಟ್ಟೆಯಲ್ಲಿರುವ ಆಹಾರವು ಅನ್ನನಾಳದ ಮುಖಾಂತರ ಮೇಲೇರುವುದು,ಕೆಲವು ಸಲ ಬಾಯಿಗೆ ಬರುವುದು.ಇದು ಊಟದನಂತರ ಬಂದು ಎದೆಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಟೊಮೆಟೊ, ಕಿತ್ತಲೆ ಇತರ ಹುಳಿ ಆಹಾರ,ಮದ್ಯಪಾನೀಯ ಸೇವನೆಯಿಂದ ಇದು ಹೆಚ್ಚಾಗುತ್ತದೆ. ನುಂಗುವಾಗ ಗಂಟಲಿನಲ್ಲಿ ನೋವು, ಕಹಿ ತೇಗು, ವಾಕರಿಕೆ, ಗಂಟಲು ಉರಿ,ದ್ವನಿ ವ್ಯತ್ಯಾಸಗಳಾಗುವುದು.
- ಪೆಪ್ಟಿಕ್ ಅಲ್ಸರ್ : ಬಹಳ ದಿನಗಳಿಂದ ಇರುವ ಅಸಿಡಿಟಿಯನ್ನು ನಾವು ಗಣನೆಗೆ ತೆಗೆದುಕೊಳ್ಳದಿದ್ದರೆ,ಅನ್ನನಾಳದ ಕೆಳಭಾಗ, ಹೊಟ್ಟೆ ಮತ್ತು ಕರುಳಿನಲ್ಲಿ ಹುಣ್ಣಾಗುವುದು, ಇದನ್ನು ಅಲ್ಸರ್ ಎನ್ನುತ್ತೇವೆ ಹೆಲಿಕೊ ಬ್ಯಾಕ್ಟರ್ ಪೆಲೋರಿ ಸೋಂಕು, ಧೂಮಪಾನ,ಮದ್ಯಪಾನ, ನೋವು ನಿವಾರಕ ಔಷಧ ಸೇವನೆ,ನಿರಂತರ ಸ್ಟೆರಾಯ್ಡ್ ಸೇವನೆಯಿಂದ ಕಾಣಿಸಿಕೊಳ್ಳುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಹೊಟ್ಟೆಯಲ್ಲಿರುವ ಹುಣ್ಣು ಹೊಡೆದು ಛೇದ ಏಗುತ್ತದೆ ಇದು ಸಾಮಾನ್ಯವಾಗಿ ಓ ಗುಂಪಿನ ರಕ್ತದವರಿಗೆ ಹೆಚ್ಚಾಗೆ ಕಂಡು ಬರುತ್ತದೆ.
50 ವರ್ಷಕ್ಕಿಂತ ಮೇಲ್ಪಟ್ಟವರು ಅಗತ್ಯಕ್ಕಿಂತ ಹೆಚ್ಚು ತೂಕ ಇರುವವರು ಹೆಚ್ಚು ಹಸಿವೆಯಾಗದವರು, ವಾರಕ್ಕೆ ಎರಡು ಬಾರಿ ಅಸಿಡಿಟಿಯಿಂದ ಬಳಲುತ್ತಿರುವವರು, ಹೊಟ್ಟೆಯಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು ಇಂತಹವರು ಹೆಚ್ಚು ಎಚ್ಚರಿಕೆ ವಹಿಸಿಕೊಳ್ಳಬೇಕು.














