ನಾಟಿ ಮಾಡುವುದು :
ನವೆಂಬರ್ ತಿಂಗಳಲ್ಲಿ ಭೂಮಿಯನ್ನು ಆಳವಾಗಿ ಅಗೆದು ಸಮ ಮಾಡಬೇಕು.0.5 ಘನ ಮೀಟರ್ ಗುಣಿಯನ್ನು 1 ಮೀ. X 1ಮಿ. ಅಂತರದಲ್ಲಿ ತೆಗೆಯಬೇಕು.ಈ ಗುಂಡಿಯನ್ನು 3-5 ಕೆ.ಜಿ ಕೊಟ್ಟಿಗೆ ಗೊಬ್ಬರ ಹಾಗೂ ಮಣ್ಣು ಮಿಶ್ರಣ ಮಾಡಿ ನಾಟಿ ಮಾಡುವ ಮೊದಲು ತುಂಬಬೇಕು.
ಸವರುವಿಕೆಯು ಉತ್ತಮವಾದ ಹೂವಿನ ಇಳುವರಿ ಪಡೆಯಲು ಅವಶ್ಯಕವಾದ ಕೆಲಸ. ಎರಡು ವರ್ಷಗಳ ನಂತರ 1.5 ಮೀ ಎತ್ತರದಲ್ಲಿ ಕಾಂಡ ಹಾಗೂ 8-10 ಪ್ರಾಥಮಿಕ ಕೊಂಬೆಗಳನ್ನು ಒಟ್ಟು ವೃತ್ತಾಕಾರದಲ್ಲಿ ಮೊದಲನೆಯ ಬಾರಿ ಕತ್ತರಿಸಬೇಕು. ನೀರು ಕಂದುಗಳನ್ನು ಸಹ ತೆಗೆದು ಹಾಕಬೇಕು.ಸವರುವುದನ್ನು ನವೆಂಬರ್ ಮೊದಲ ವಾರದಿಂದ ಡಿಸೆಂಬರ್ ತಿಂಗಳವರೆಗೆ ಶೀತ ವಲಯದಲ್ಲಿ ಮಾಡಬಹುದು. ಆದರೆ ಸಮಶೀತೋಷ್ಣ ವಲಯದಲ್ಲಿ ಗಿಡಗಳನ್ನು 30-45cm ಎತ್ತರದಲ್ಲಿ ಡಿಸೆಂಬರ್ ನಿಂದ ಜನವರಿಗಳಲ್ಲಿ ಕತ್ತರಿಸಬಹುದು.
ಕಾಳೆ ಹತೋಟಿ :
ಕಾಳೆಗಳನ್ನು ಹತೋಟಿ ಮಾಡುವುದು ಗಿಡದ ಉತ್ತಮ ಬೆಳವಣಿಗೆಗೆ ಒಳ್ಳೆಯದು. ಗುಲಾಬಿಯೊಂದಿಗೇ ಒಂದಲಗ, ಬ್ರಹ್ಮಿ ಬೆಳೆಗಳನ್ನು ಬೆಳೆಯಬಹುದು. ಹೀಗೆ ಮಾಡುವುದರಿಂದ ಗುಲಾಬಿ ಗಿಡಗಳ ಬುಡವನ್ನು ಕಳೆ ರಹಿತವಾಗಿಡಬಹುದು.
ನೀರಾವರಿ :
ಪ್ರತಿ 6-10 ದಿನಗಳಿಗೊಮ್ಮೆ ಮಣ್ಣು ಮತ್ತು ಹವಾಗುಣವನ್ನನು ಸರಿಸಿ ನೀರು ಒದಗಿಸಬೇಕು.
ಸಸ್ಯ ಸಂರಕ್ಷಣೆ :
ಗೆದ್ದಲು, ಹೂ ತಿನ್ನುವ ದುಂಬಿ, ಕೆಂಪು ನುಶಿ, ಹೇನು ಹಾಗೂ ಜೇಡ ನುಶಿಗಳು ಹಾನಿಮಾಡುವ ಕೀಟಗಳು. ಟೊಂಗೆ ಒಣಗು ರೋಗ, ಬೂದಿ ರೋಗ ಹಾಗೂ ಕಪ್ಪು ಚುಕ್ಕೆ ರೋಗಗಳು ಈ ಗಿಡಕ್ಕೆ ಬಾಧಿಸುವ ಮುಖ್ಯವಾದ ರೋಗಗಳು. ಸೂಕ್ತ ನಿರ್ವಹಣೆ ಮಾಡಿದಲ್ಲಿ ಯಾವ ರಾಸಾಯನಿಕಗಳ ಅವಶ್ಯಕತೆಯೂ ಇಲ್ಲ.ಬೇವಿನಎಣ್ಣೆ, ಬೇವಿನಹಿಂಡಿ, ಬೇವಿನ ಎಲೆಗಳಿಂದ ಅಥವಾ ಚೆಂಡು ಗಿಡಗಳನ್ನು ಪಕ್ಕದಲ್ಲಿ ನೆಡುವುದರಿಂದ ರೋಗ ಹಾಗೂ ಕೀಟಬಾಧೆಗಳಿಂದ ಗುಲಾಬಿ ಬೆಳೆಯನ್ನು ರಕ್ಷಿಸಬಹುದು.
ಕೊಯ್ಲು ಮತ್ತು ಇಳುವರಿ :
ಗಿಡಗಳನ್ನು ಸವರಿದ 45 – 60 ದಿನಗಳಲ್ಲಿ ಹೂಗಳು ಕೊಯ್ಲಿಗೆ ಸಿದ್ಧವಾಗುತ್ತವೆ.
ಉಪಯುಕ್ತ ಭಾಗಗಳು :
ಹೂ,ಮೊಗ್ಗು, ದಳಗಳು ಮತ್ತು ಕೇಸರ.
ರಾಸಾಯನಿಕ ಘಟಕಗಳು :
ಚುಂಚಲ ತೈಲ ರಿಸಿನ್ ಜಿರೇನಿಯಾಲ್, ಸಿಟ್ರಾಲ್, ಕೊಬ್ಬು, ಮ್ಯಾಲಿಕ್ ಟಾರ್ಟಾರಿಕ್ ಮತ್ತು ಟ್ಯಾನಿಕ್ ಆಮ್ಲಗಳು.
ಔಷಧೀಯ ಗುಣಗಳು :
1. ಮಲಬದ್ಧತೆಯಿಂದ ಬಳಲುವವರು ಎರಡು ಚಮಚೆ ಗುಲಾಬಿ ಹೂವಿನ ರಸಕ್ಕೆ ಒಂದು ಚಮಚೆ ತುಪ್ಪ ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿಯಬೇಕು.2. ರಕ್ತಭೇದಿಯಾಗುತ್ತಿದ್ದಲ್ಲಿ 10 ಗ್ರಾಂ ಗುಲಾಬಿ ಹೂ ದಳಗಳನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ನಂತರ ನುಣ್ಣಗೆ ಅರೆದು ಅದಕ್ಕೆ ಕಲ್ಲು ಸಕ್ಕರೆ ಪುಡಿ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.
3. ಕಣ್ಣುರಿ ಮತ್ತು ಕಣ್ಣು ಕೆಂಪಗಾಗಿದ್ದಲ್ಲಿ ಗುಲಾಬಿ ಜಲ ಇಲ್ಲವೇ ಗುಲಾಬಿಯ ಕಷಾಯದಿಂದ ಕಣ್ಣನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
4. ನೆಗಡಿಯಾಗಿರುವಾಗ ಗುಲಾಬಿ ಚಹ ಕುಡಿಯಬೇಕು. ಗುಲಾಬಿಯ ದಳಗಳನ್ನು 10 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ.ಶೋಧಿಸಿ ಕುಡಿಯಬೇಕು. ಒಂದು ಲೋಟ ನೀರಿಗೆ ದೊಡ್ಡ ಗುಲಾಬಿ ಆದಲ್ಲಿ ಒಂದು ಚಿಕ್ಕ ಗುಲಾಬಿಯಾದಲ್ಲಿ ಒಂದು ಚಿಕ್ಕ ಗುಲಾಬಿಯಾದಲ್ಲಿ ಎರಡು ಹೂಗಳ ದಳಗಳನ್ನು ಹಾಕಬೇಕು. ಗುಲಾಬಿ ಚಹಾ ಮೂತ್ರವರ್ಧಕವೂ ಹೌದು.
5. ಬಾಯಿಯ ದುರ್ಗಂಧದ ಸಮಸ್ಯೆ ಇರುವವರು ಗುಲಾಬಿ ಹೂವಿನ ದಳ 10 ಗ್ರಾಂ, ಕಲ್ಲು ಸಕ್ಕರೆ 5 ಗ್ರಾಂ, ಪಚ್ಚಕರ್ಪೂರ ಸ್ವಲ್ಪ ಬೆರೆಸಿ ಎಲ್ಲವನ್ನೂ ನುಣ್ಣಗೆ ಅರೆದು ಮಾತ್ರೆ ಪಾತ್ರೆ ತಯಾರಿಸಿಟ್ಟುಕೊಳ್ಳಬೇಕು ಆಗಾಗ ಈ ಮಾತ್ರೆಯನ್ನು ಬಾಯಿಗೆ ಹಾಕಿ ಚಪ್ಪಲಿಸುತ್ತಿದ್ದರೆ ದುರ್ಗನದ ದೂರವಾಗುತ್ತದೆ. ಈ ಮಾತ್ರೆಯನ್ನು ಕಿಮ್ಮಿನಿಂದ ಬಳಲುವವರೂ ಉಪಯೋಗಿಸಬಹುದು.
6. ನಿದ್ರಾ ಹೀನತೆ, ನಿದ್ರೆ ಸರಿಯಾಗಿ ಬರದಿದ್ದಲ್ಲಿ ಮಲಗುವ ಮುನ್ನ ದಿಂಬಿನ ಮೇಲೆ ಗುಲಾಬಿ ದಳಗಳನ್ನು ಹರಡಿಕೊಳ್ಳುವುದರಿಂದ ಇಲ್ಲವೇ ಗುಲಾಬಿ ಎಣ್ಣೆಯ ಕೆಲ ಹನಿಗಳನ್ನು ಸಿಂಪಡಿಸಿಕೊಳ್ಳುವುದರಿಂದ ಮನಸ್ಸು ಉಲ್ಲಾಸಿತವಾಗಿ ನಿದ್ರೆ ತನ್ನಿಂದ ತಾನೇ ಬರುತ್ತದೆ.
7. ರಕ್ತ ಮೂಲವ್ಯಾಧಿ, ದಾಹ,ಉರಿಮೂತ್ರ, ಗಂಟಲು ನೋವು ಅಧಿಕ, ರಕ್ತಸ್ರಾವ ಬಾಯಿ ಹುಣ್ಣು ಮುಂತಾದ ತೊಂದರೆಗಳಲ್ಲಿ ಗುಲಾಬಿ ಹೂವಿನ ಗುಲ್ಕಂದವು ಅತ್ಯಂತ ಉಪಯುಕ್ತ.ಒಂದು ಚಮಚೆ ಗುಲ್ಕಂದವನ್ನು ಹಾಲಿನೊಡನೆ ದಿನಕ್ಕೆರಡು ಬಾರಿ ಸೇವನೆ ಮಾಡಬೇಕು.ಡಮಸ್ಕ್ ಮತ್ತು ಬಾರ್ಬೆರಿಯನ್ ಜಾತಿಯ ಗುಲಾಬಿಯಿಂದ ಸಕ್ಕರೆ, ಜೇನು, ಬೆರೆಸಿ ಗುಲ್ಕಂದ ತಯಾರಿಸಿಕೊಳ್ಳಬಹುದು. ಈ ಗುಲ್ಕಂದ ಶಕ್ತಿವರ್ಧಕ ಲಘುವಿರೇಚಕ ಆಗಿರುತ್ತೆದೆ
ಸೌಂದರ್ಯವರ್ಧಕ :
ಅಭ್ಯಂಗ : ವಾರಕ್ಕೊಮ್ಮೆ ಇಲ್ಲವೇ ಎರಡು ಬಾರಿ ಗುಲಾಬಿ ಎಳ್ಳೆಣ್ಣೆಯೊಂದಿಗೆ ಬೆರೆಸಿ ಮೈಗೆ ಹಚ್ಚಿ ಮಸಾಜ್ ಮಾಡಿಕೊಂಡು ಒಂದು ಗಂಟೆ ಕಾಲ ಬಿಟ್ಟು ಸ್ನಾನ ಮಾಡಿದಲ್ಲಿ ಚರ್ಮವು ಮೃದುವಾಗಿ ಕಾಂತಿ ಹೆಚ್ಚುತ್ತದೆ.
ಸ್ಥಾನ : ಗುಲಾಬಿ ಎಣ್ಣೆಯ ಕೆಳಹನಿಯನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಬೇಕು. ಇಲ್ಲವೇ ಗುಲಾಬಿ ದಳವನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ಆಯಾಸ ಪರಿಹಾರವಾಗುವುದಲ್ಲದೆ ಒಳ್ಳೆಯ ಪರಿಮಳವೂ ಇರುತ್ತದೆ.
ಕಣ್ಣಿನ ಸುತ್ತಲೂ ಉಂಟಾದ ಕಪ್ಪು ನಿರ್ವಹಣೆಗೆ :ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತಲೂ ಗುಲಾಬಿ ಜಲ ಇಲ್ಲವೇ ಗುಲಾಬಿ ಎಣ್ಣೆಯನ್ನು ಲೇಪಿಸಿಕೊಳ್ಳಬೇಕು. ಕಣ್ಣುರಿ ಇದ್ದಲ್ಲಿ ಗುಲಾಬಿ ಜಲದಲ್ಲಿ ಹತ್ತಿಯನ್ನದ್ದಿ ಕಣ್ಣಿನ ಮೇಲೆ ಇರಿಸಿಕೊಳ್ಳಬೇಕು.
ಮುಖಲೇಪನ : ಗುಲಾಬಿ ದಳಗಳನ್ನು ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಲೇಪಿಸಿಕೊಂಡು ಒಂದು ಗಂಟೆಯ ನಂತರ ಮುಖ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಇದನ್ನು ವಾರಕ್ಕೊಮ್ಮೆ ಇಲ್ಲವೇ ಹತ್ತು ದಿನಗಳಿಗೊಮ್ಮೆ ಮಾಡಬಹುದು.