ಮನೆ ಅಪರಾಧ ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ: ಕಾರು ಚಾಲಕ ಪರಾರಿ

ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ: ಕಾರು ಚಾಲಕ ಪರಾರಿ

0

ಉಡುಪಿ: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಾಯಗೊಂಡಿರುವ ಘಟನೆ ರಾ.ಹೆ. 66ರಲ್ಲಿ ಸಂತೆಕಟ್ಟೆ ಶ್ರೀವತ್ಸ ಜನರಲ್‌ ಸ್ಟೋರ್ ಎದುರು ನಡೆದಿದೆ.

Join Our Whatsapp Group

ಅಂಬಾಗಿಲು ಕಡೆಯಿಂದ ಸಂತೆಕಟ್ಟೆ ಕಡೆಗೆ ಚಲಿಸುತ್ತಿದ್ದ ಕಾರು ಎದುರಿನಿಂದ ಹೋಗುತಿದ್ದ ಸ್ಕೂಟರನ್ನು ಹಿಂದಿಕ್ಕುವ ಭರದಲ್ಲಿ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಪರಿಣಾಮ ಸ್ಕೂಟರ್ ಸವಾರ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.