ಮನೆ ಸಾಹಿತ್ಯ ಸಂಬಂಧವನ್ನು ಹೇಗೆ ಬಲಗೊಳಿಸುವುದು

ಸಂಬಂಧವನ್ನು ಹೇಗೆ ಬಲಗೊಳಿಸುವುದು

0

ಒಬ್ಬ ಮನೋಶಾಸ್ತ್ರಜ್ಞರು ತಮ್ಮ ಪರಿಣಿತಿ ಆಳವಾದ ಜ್ಞಾನ ಹಾಗೂ ವ್ಯವಹಾರಿಕ ವಿವೇಚನೆಗೆ ಹೆಸರಾಗಿದ್ದರು. ಒಮ್ಮೆ ಅವರ ವಿದ್ಯಾರ್ಥಿಗಳ ನಡುವೆ ಜಗಳ ಉಂಟಾಯಿತು. ಅವರು ಪರಸ್ಪರ ಕಟುವಾಗಿ ವರ್ತಿಸಿ ಜಗಳ ಮಾಡಿದರು ಅವರ ನಡುವೆ ವೈಷಮ್ಯ ಹಾಗೂ ದ್ವೇಷ ಬಹಳ ಕಾಲ ಮುಂದುವರೆಯಿತು. ಕಾಲೇಜಿನಲ್ಲಿ ಶಾಂತಿಯ ಹಾಗೂ ನೆಮ್ಮದಿಯನ್ನು ಮತ್ತೆ ತರಬೇಕೆಂದು ಇತರೆ ವಿದ್ಯಾರ್ಥಿಗಳು ಆತಂಕದಲ್ಲಿದ್ದರು. ಕೆಲವರು ಪರಿಹಾರಕ್ಕಾಗಿ ಮನೋಶಾಸ್ತ್ರ ಪ್ರೊಫೆಸರ್ ರನ್ನು ಭೇಟಿ ಮಾಡಿದರು.ವಿದ್ಯಾರ್ಥಿಗಳ ನಡುವೆ ಸಾಮರಸ್ಯ ಹಾಗೂ ಪ್ರೇಮವನ್ನು ಅವರು ಮತ್ತೆ ತರುತ್ತಾರೆಂದು ಅವರಿಗೆ ನಂಬಿಕೆ ಯಿತ್ತು. ದ್ವೇಷ ಹಾಗೂ ಅಪನಂಬಿಕೆಯನ್ನು ಹೋಗಲಾಡಿಸಬೇಕೆಂದು ಅವರನ್ನು ಕೋರಿದರು. ಕೆಳಕಂಡ ಪರಿಹಾರವನ್ನು ಪ್ರೊಫೆಸರ್ ಹೇಳಿದರು.

Join Our Whatsapp Group

ಪ್ರಶ್ನೆಗಳು :

  1. ಪ್ರೊಫೆಸರ್ ಯಾವ ಪರಿಹಾರವನ್ನು ಹೇಳಿದರು?
  2. ಈ ಕಥೆಯ ನೀತಿ ಏನು.? ಉತ್ತರಗಳು :

1.“ನೀವು ಯಾರ ಜೊತೆಗಾದರೂ ಇದ್ದಾಗ ನಿಮ್ಮೊಳಗೆ ಹೇಗೆ ಅಂದುಕೊಳ್ಳಿ ‘ ನಾನು ಮತ್ತೆ ಆ ವ್ಯಕ್ತಿ ಸಾಯುತ್ತಿದ್ದೇವೆ’ ಈ ಶಬ್ದಗಳ ಸತ್ಯತೆಯನ್ನು ಮಾನಸಿಕವಾಗಿ ನೀವು ಅನುಭವಿಸಿ ಇದನ್ನು ಅಭ್ಯಾಸ ಮಾಡಲು ನೀವೆಲ್ಲಾ ಒಪ್ಪಿದರೆ ಯಾವ ಕಹಿ ಭಾವವೂ ಅಥವಾ ದ್ವೇಷವೂ ಇರುವುದಿಲ್ಲ. ಎಲ್ಲೆಡೆ ಸಾಮರಸ್ಯವಿರುತ್ತದೆ.

  1. ಯಾರು ತಾವು ಸಾಯುತ್ತೇವೆಂದು ತಮ್ಮ ಮನದಾಳದಲ್ಲಿ ಭಾವಿಸುವುದಿಲ್ಲ. ಅಂದರೆ ಎಲ್ಲರಿಗೂ ತಾವು ಸಾಯುತ್ತೇವೆಂದು ಗೊತ್ತು. ಆದರೆ ಸಾಯುತ್ತೇವೆಂಬ ಭಾವ ಅಥವಾ ನಂಬಿಕೆ ಇರುವುದಿಲ್ಲ.ಯಾರು ತಮ್ಮ ಸಾವಿನ ಬಗ್ಗೆ ಯೋಚಿಸುವುದಿಲ್ಲವೆಂಬ ಈ ಸರಳ ಸತ್ಯದಿಂದಲೇ ಈ ವಿಶ್ವದಲ್ಲಿ ಎಲ್ಲಾ ಸಮಸ್ಯೆಗಳು ಬಂದಿವೆ. ಆಗಾಗ್ಗೆ ತಮ್ಮ ಸಾವಿನ ಬಗ್ಗೆ ನೆನಪಿಸಿಕೊಂಡಾಗ ಇತರರೊಂದಿಗೆ ದ್ವೇಷ ಅಥವಾ ಶತ್ರುತ್ವ ಉಂಟಾಗುವುದಿಲ್ಲ. ನಾನು ಮತ್ತು ಆ ವ್ಯಕ್ತಿ ಸಾಯುತ್ತಿದ್ದೇವೆ ಎಂದು ಯೋಚಿಸಿದರೆ ಯಾರಾದರೂ ಉತ್ತಮ ವ್ಯಕ್ತಿಯಾಗಬಲ್ಲರು ಆಗಲೇ ನೈಜ ಪ್ರೇಮ ಮೈಲುಗೈ ಸಾಧಿಸುವುದು.