1. ಹಸಿವು, ಆಹಾರ ಸೇವನೆ ಹಸಿವು ಕಡಿಮೆಯಾಗುತ್ತದೆ. ಬಾಯಿ ರುಚಿ ತಗುತ್ತದೆ.ಆಹಾರ ಸೇವನೆ ಮಾಡಲು ಇಷ್ಟವಾಗುವುದಿಲ್ಲ.ಕೆಲವು ಸಲ ಹಸಿವು ಹೆಚ್ಚಾಗುತ್ತದೆ. ಪದೇಪದೇ ಏನನ್ನಾದರೂ ತಿನ್ನಬೇಕೆನಿಸುತ್ತದೆ.ಕುರುಕು ತಿಂಡಿಗಳು ಇಷ್ಟವಾಗುತ್ತದೆ.
2. ನಿದ್ರೆ : ಎಷ್ಟೋ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ನಿದ್ರೆ ಹೆಚ್ಚಾಗುತ್ತದೆ.ಓದಲು ಕುಳಿತರೆ ಪುಸ್ತಕ ತೆರೆದರೆ ನಿದ್ರೆ ಬರುತ್ತದೆ ಎಂದು ದೂರುತ್ತಾರೆ. ಕೆಲವು ಸಲ ಆತಂಕ ಭಯದಿಂದ ನಿದ್ರೆ ಬರುವುದಿಲ್ಲ ನಿದ್ರೆ ಬಂದು ಮಧ್ಯೆ ಎಚ್ಚರವಾಗಿ ಬಿಡುತ್ತದೆ ರಾತ್ರಿ ನಿದ್ರೆ ಮಾಡಿದರೂ ಬೆಳಿಗ್ಗೆ ಲವಲವಿಕೆ ಇರುವುದಿಲ್ಲ ಹೀಗಾಗಿ ಸಾಕಷ್ಟು ವಿದ್ಯಾರ್ಥಿಗಳು ನಿದ್ರೆಯನ್ನು ಕಡಿಮೆ ಮಾಡಲು ಡೆಕ್ಸಿಡ್ರಿನ್ ನಂತರ ಮಾತ್ರೆಗಳು ಕಾಫಿ, ಟೀ ನಂತಹ ಪೇಯಗಳ ಮೊರೆ ಹೋಗುತ್ತಾರೆ ನಿದ್ರೆ ಬರದಿದ್ದಾಗ, ನಿದ್ರಾ ಮಾತ್ರೆಗಳನ್ನು ಸೇವಿಸುತ್ತಾರೆ.
ಪರೀಕ್ಷಾ ಸಮಯದಲ್ಲಿ ಕಂಡುಬರುವ ರೋಗಲಕ್ಷಣಗಳು :
ಪರೀಕ್ಷಾ ಭಯ, ಒತ್ತಡದ ಕಾರಣದಿಂದ ಶರೀರದ ಒಳ ಅಂಗಾಂಗಗಳ ಕಾರ್ಯನಿರ್ವಹಣೆ ಅಸ್ತವ್ಯಸ್ತಗೊಳ್ಳುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಹೀಗಾಗಿ ಶರೀರದೊಳಕ್ಕೆ ಬರಲು ಯತ್ನಿಸುವ ರೋಗಾಣುಗಳ ಕೈ ಮೇಲಾಗಿ ವ್ಯಕ್ತಿ ಅನೇಕ ಬಗೆಯ ಸೋಂಕು ರೋಗಿಗಳಿಗೆ ತುತ್ತಾಗಬಹುದು.ಪರೀಕ್ಷಾ ಸಮಯದಲ್ಲಿ ಅನೇಕ ವಿದ್ಯಾರ್ಥಿಗಳು ರೋಗ ಪೀಡಿತರಾಗುತ್ತಾರೆ.ಪರೀಕ್ಷೆ ಇನ್ನೂ ಒಂದೆರಡು ದಿನಗಳಿವೆ ಎಂದಾಗ ಈ ರೀತಿಯ ಕಾಯಿಲೆ ಬಂದು ವಿದ್ಯಾರ್ಥಿಯ ಸ್ಥಿತಿ ಶೋಚನೀಯವಾಗುತ್ತದೆ. ಪರೀಕ್ಷೆಗೆ ಹೋಗಲಾರದೇ ಹೋದರೂ ಸರಿಯಾಗಿ ಬರೆಯಲಾಗದೆ ಅವರ ಶ್ರಮವೆಲ್ಲ ವ್ಯರ್ಥವಾಗುತ್ತದೇ ಪರೀಕ್ಷಾ ಸಮಯದಲ್ಲಿ ಕಂಡುಬರುವ ಸಾಮಾನ್ಯ ರೋಗಲಕ್ಷಣಗಳಿವು :
1. ಜೀರ್ಣಾಂಗಗಳಿಗೆ ಸಂಬಂಧಿಸಿದ ಲಕ್ಷಣಗಳು : ವಾಪರಿಕೆ, ವಾಂತಿ. ಪದೇ ಪದೇ ಮಲ ವಿಸರ್ಜನೆಯ ಸೂಚನೆ, ಭೇದಿ, ಅಜೀರ್ಣ ಒಟ್ಟೆ ಉರಿ, ಹೊಟ್ಟೆ ಉಬ್ಬರ,ಹೊಟ್ಟೆ ನೋವು ಇತ್ಯಾದಿ.
2. ಸೋಂಕು ರೋಗಗಳು : ಲೈಟಿಸ್ ಮುಖದ ಮೂಳೆಯ ಕುಳಿಗಳ ಉರಿತ ಚರ್ಮದಲ್ಲಿ ಹುಣ್ಣು ಕೀವು ಗಂಟು,, ಟೈಫಾಯಿಡ್, ನ್ಯುಮೋನಿಯಾ, ಅಪೆಂಡಿಸೈಟಿಸ್,ಆಮಶಂಕೆ ಭೇದಿ,ಮೂತ್ರದ ಸೋಂಕು.
3. ನೋವು ಒತ್ತಡದ ತಲೆನೋವು ತಲೆನೋವು, ಎದೆನೋವು, ಬೆನ್ನು ನೋವು.
4. ಅನುವಂಶಿಕವಾಗಿ ಬರಬಹುದಾದ ಸಿಹಿಮೂತ್ರ ರೋಗ, ಅಧಿಕ ರಕ್ತದ ಒತ್ತಡ ಈ ಸಮಯದಲ್ಲಿ ತಾತ್ಕಾಲಿಕವಾಗಿ ಕಾಣಿಸಿಕೊಳ್ಳಬಹುದು.
ಪರೀಕ್ಷಾ ಕೊಠಡಿಯಲ್ಲಿ :
ಪರೀಕ್ಷೆಯ ದಿನ, ಪರೀಕ್ಷಾ ಭಯ ವಿಪರೀತವಾದಾಗ ವಿದ್ಯಾರ್ಥಿ ಪರೀಕ್ಷಾ ಕೊಠಡಿಯೊಳಕ್ಕೆ ಹೋಗಲು ನಿರಾಕರಿಸಬಹುದು ನನ್ನಿಂದಾಗುವುದಿಲ್ಲ ಎಂದು ಮನೆಗೆ ವಾಪಸ್ ಹೋಗಬಹುದು.
ಪರೀಕ್ಷಾ ಕೊಠಡಿಯಲ್ಲಿ ಕುಳಿತು ವಿದ್ಯಾರ್ಥಿ ಗರಬಡಿದವನಂತೆ ಆಡಬಹುದು ಬಿಳಿಚಿಕೊಂಡು ಮುಖ, ಬೆವರಿಳಿಯುವ ಶರೀರ, ನಡುಗುವ ಕೈಗಳು ಒಣಗಿ ಹೋದ ಬಾಯಿ, ಮತ್ತು ಹೊರಡದಂತಹ ಸ್ಥಿತಿಯನ್ನು ಕಾಣಬಹುದು. ಕೆಲವರು ಈ ಸ್ಥಿತಿಯಲ್ಲಿ ಮರೆತಕ್ಕೆ ಒಳಗಾಗುತ್ತಾರೆ.
ಕೆಲವರಿಗೆ ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕಿದಾಗ ಅದನ್ನು ಓದಲಾರರು.ಓದಿದರೂ ಅರ್ಥಮಾಡಿಕೊಳ್ಳಲಾರರು ಯಾವ ಪ್ರಶ್ನೆಗೂ ಏನು ಉತ್ತರ ಬರೆಯಬೇಕೆಂದು ತಿಳಿಯದೆ ಸ್ವಲ್ಪ ಹೊತ್ತು ಸುಮ್ಮನೆ ಕೂರಬಹುದು ಏನೂ ಬರೆಯಲಾಗದೇ ಖಾಲಿ ಉತ್ತರ ಪತ್ರಿಕೆಯನ್ನು ಕೊಟ್ಟು ಅವರ ಬರಬಹುದು.
ಕೆಲವರು ಧನ್ಯತೆಯಿಂದ ಸಹಾಯಕ್ಕಾಗಿ ಮೇಲ್ವಿಚಾರಕರ ಮೊರೆ ಹೋಗಬಹುದು. ಉತ್ತರ ಹೇಳಿ ಎಂದೋ ಅಥವಾ ಪಕ್ಕದ ಅಭ್ಯರ್ಥಿಯ ನೆರವು ಕೊಡಿಸಿ ಎಂದು ಬೇಡಿಕೊಳ್ಳಬಹುದು.
ಯಾರು ತೀವ್ರ ಪರೀಕ್ಷಾ ಭಯಕ್ಕೆ ಒಳಗಾಗುತ್ತಾರೆ ?
ಸಹಜವಾಗಿ ಎಲ್ಲರಲ್ಲಿ ಅಲ್ಪ ಪ್ರಮಾಣದಲ್ಲಿ ಕಂಡುಬರುವ ಪರೀಕ್ಷಾ ಭಯ ಯಾರಲ್ಲಿ ಮತ್ತು ಯಾವ ಕಾರಣಗಳಿಂದಾಗಿ ತೀವ್ರ ಭಯವಾಗಿ ಮಾರ್ಪಾಡು ಹೊಂದುತ್ತದೆ.
1. ಟೈಪ್ ಏ ವ್ಯಕ್ತಿತ್ವದವರಲ್ಲಿ ತಮ್ಮ ಯೋಗ್ಯತೆಯನ್ನು ಮೀರಿದ ಮಹಾತಾಕಾಂಕ್ಷೆ.ಎಲ್ಲರಿಗಿಂತ ತಾನು ಮುಂದಿರಬೇಕು ಹಿಂದೆ ಬಿದ್ದರೆ ತನ್ನ ವ್ಯಕ್ತಿತ್ವಕ್ಕೆ ಅವಮಾನ ಎಂದು ತಿಳಿಯುವುದು. ಗಡಿಬಿಡಿ ಎಲ್ಲವನ್ನೂ ಅಚ್ಚುಗಟ್ಟಾಗಿ ಪರಿಪೂರ್ಣವಾಗಿ ಮಾಡಬೇಕೆಂಬ ಹಂಬಲ, ಇತರರನ್ನು ನಂಬದಿರುವುದು, ಟೀಕಿಸುವ ಪ್ರವೃತ್ತಿ ಇಲ್ಲವೇ ಟೈಪ್ ಎ ವ್ಯಕ್ತಿತ್ವದ ಲಕ್ಷಣಗಳು ಇವರಲ್ಲಿ ಪರೀಕ್ಷಾ ಭಯ ಹೆಚ್ಚು.
2. ಆಯಾ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಕ್ರಮವಾಗಿ ಓದದೇ ಪರೀಕ್ಷೆಗೆ ಕಡೇ ಹಂತದಲ್ಲಿ ಓದಿನ ಸಿದ್ಧತೆಯನ್ನು ಮಾಡುವವರಲ್ಲಿ ಪರೀಕ್ಷಾ ಭಯ ಹೆಚ್ಚು.
3. ತಾನು ಆಯ್ದುಕೊಂಡ ಕೋರ್ಸ್ ಅಥವಾ ವಿಷಯಗಳ ಬಗ್ಗೆ ಯಾವ ವಿದ್ಯಾರ್ಥಿಗೆ ಆಸಕ್ತಿ ಇಲ್ಲ ಅಥವಾ ಅದು ಕಷ್ಟಕರವಾಗಿ ತೋರುತ್ತದೆ ಆತನಿಗೆ ಭಯ ಹೆಚ್ಚಿರುತ್ತದೆ.
4. ಯಾವ ವಿದ್ಯಾರ್ಥಿ ಎಲ್ಲ ಆಧ್ಯಾಯಗಳನ್ನು ಓದಿ ಅಥವಾ ಒಂದಿಷ್ಟು ಪ್ರಶ್ನೆಗಳನ್ನು ಆಯ್ದು ಅದಕ್ಕೆ ಉತ್ತರಿಸಲು ಸಿದ್ಧತೆ ಮಾಡುತ್ತಾನೋ ಅವನಿಗೆ ಈ ಆಧ್ಯಾಯಗಳು ಅಥವಾ ಪ್ರಶ್ನೆಗಳು ಬಿಟ್ಟು ಬೇರೆ ಪ್ರಶ್ನೆಗಳು ಬಂದರೆ ಎಂಬ ಆಲೋಚನೆಯಿಂದ ಭಯ ಹೆಚ್ಚಿರುತ್ತದೆ.ನಾನು ಎಲ್ಲವನ್ನು ಓದಿದವನಲ್ಲ ಎಂಬ ತಪ್ಪಿತಸ್ಥ ಭಾವನೆಯೂ ಭಯಂಕರವಾಗುತ್ತದೆ.
5. ಯಾವ ವಿದ್ಯಾರ್ಥಿ, ತನ್ನನ್ನು ಇತರ ಸಹಪಾಠಿಗಳೊಂದಿಗೆ ಹೋಲಿಸಿ ಕೊಂಡು ತಾನು ಆವರಷ್ಟು ಓದಿಲ್ಲ ಎಂದು ತೀರ್ಮಾನಕ್ಕೆ ಬರುತ್ತಾನೋ ಅವನಿಗೆ ಭಯ ಹೆಚ್ಚು.
6. ದೈಹಿಕ ಆರೋಗ್ಯ ಸರಿಯಿಲ್ಲದೆ ಆಗಿಂದಾಗ್ಯೆ ಕಾಯಿಲೆ ಬೀಳುವವರಲ್ಲಿ ಅಥವಾ ದೀರ್ಘ ಕಾಲದ ಅನಾರೋಗ್ಯವಿರುವ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ತೀವ್ರವಾಗಿರಬಹುದು.
7. ಈ ಹಿಂದೆ ಪರೀಕ್ಷೆಗಳಲ್ಲಿ ಫೇಲಾಗದಿದ್ದರೆ ಅಥವಾ ಪ್ರಯತ್ನ ಪಟ್ಟರೂ ನಿರೀಕ್ಷಿತ ಮಟ್ಟವನ್ನು ಮುಟ್ಟಲಾಗಲಿಲ್ಲವಾದರೆ ಅಂಥವರಲ್ಲಿ ಭಯ ಹೆಚ್ಚು.
8. ಆತಂಕ, ಖಿನ್ನತೆಯಂತಹ ಮಾನಸಿಕ ರೋಗಗಳಿದ್ದರೆ ಅವು ಪರೀಕ್ಷಾ ಭಯವನ್ನು ವೃದ್ಧಿಸುತ್ತವೆ.
9. ಜೀವನದ ತಿರುವಿನಲ್ಲಿರುವವರು ಉದಾ, ಪರೀಕ್ಷೆ ಮುಗಿದ ತಕ್ಷಣ ಅದರ ಫಲಿತಾಂಶದ ಆಧಾರದ ಮೇಲೆ ಮದುವೆಯಾಗಬೇಕೇ ಓದನ್ನು ನಿಲ್ಲಿಸಿ ವೃತ್ತಿ ಹಿಡಿಯಬೇಕೇ, ತಂದೆ ತಾಯಿಗಳಿಂದ ದೂರವಿದ್ದು ಸ್ವಾವಲಂಬಿಯಾಗಬೇಕೇ ಎಂದು ನಿರ್ಧಾರಕ್ಕೆ ಬರಬೇಕಾದ ವರಿಗೆ ಆತಂಕ ಹೆಚ್ಚು.
ತಮಗಿರುವ ಸಮಯ, ಸವಲತ್ತುಗಳು, ಇತರೆ ಅನುಕೂಲಗಳನ್ನು ವಿಚಕ್ಷಣೆಯಿಂದ ಬಳಸಲು ಕಲಿಯುವವರಲ್ಲಿ. ಶಿಸ್ತಿನ ಜೀವನವನ್ನು ನಡೆಸಲು ಅಗದವರಲ್ಲಿ ಕೇಳಿರಿಮೆಯಿಂದ ಬಳಲುವರಲ್ಲಿ ಪರೀಕ್ಷಾ ಭಯ ಹೆಚ್ಚು.