ಮನೆ ಜ್ಯೋತಿಷ್ಯ ಚರ್ಮ

ಚರ್ಮ

0

ನಮ್ಮ ದೇಹದ ಬಹಳ ಅಗಲವಾದ ಅಂಗ ಚರ್ಮ, ಇದು ನಮ್ಮ ಇಡೀ ದೇಹದ ಅಂಗಾಂಗಗಳನ್ನು ರಕ್ಷಣಾ ಕವಚವಾಗಿ ರಕ್ಷಿಸುತ್ತದೆ. ಇದರ ವಿಸ್ತೀರ್ಣ ಸುಮಾರು 3 ಸಾವಿರ ಚದರ ಅಂಗುಲ ಅಥವಾ 19. 355 ಚದರ ಸೆಂಟಿಮೀಟರ್ ಗಳು. ಈ ಚರ್ಮದ ಜೊತೆ ಅನೇಕ ಅಂಗಗಳು ಉತ್ಪತ್ತಿಯಾಗುತ್ತದೆ ಅದು ಉಗುರು, ಕೂದಲು, ಬೆವರು ಗ್ರಂಥಿ ಮತ್ತು ಕೊಬ್ಬಿನ ಗ್ರಂಥಿಗಳಿಂದ ಈ ಚರ್ಮ ನಮ್ಮ ದೇಹದ ಹೊದ್ದಿಕೆಯಾಗಿ ರಚನೆಯಾಗಿದೆ.

Join Our Whatsapp Group

ಈ ಚರ್ಮ ನಮ್ಮ ದೇಹಕ್ಕೆ ರಕ್ಷಣಾ ಕಾರ್ಯವನ್ನು ನಿರ್ವಹಿಸುವು ದಷ್ಟೇ ಅಲ್ಲದೆ, ಅನೇಕ ಇತರ ಉಪಯುಕ್ತಕಾರ್ಯಗಳನ್ನೂ ಮಾಡುತ್ತದೆ. ಅವು ನಮ್ಮ ದೇಹದ ಉಷ್ಣಾಂಶ ವನ್ನು ಸಮ ಪ್ರಮಾಣದಲ್ಲಿಡುತ್ತದೆ. ಹೊರ ಜಗತ್ತಿನ ಜೊತೆ ನಮ್ಮ ದೇಹದ ಅಂಗಾಂಗಗಳಿಗೆ ನೇರ ಸಂಪರ್ಕವನ್ನು ಏರ್ಪಡಿಸುತ್ತದೆ. ಮೂತ್ರ ಮತ್ತು ಜನನೇಂದ್ರೀಯ ಕಾರ್ಯ, ಶ್ವಾಚೋಶ್ವಾಸ ಕ್ರಿಯೆ (ಉಸಿರಾಟ), ಇಂದ್ರಿಯಗಳು ಹೊರಸೂಸುವ ಮಲ (ಕೊಳಕು) ವನ್ನು ಹೊರಹಾಕುವುದು, ಮುಟ್ಟಿದರೆ ಗ್ರಹಿಸಿ ಅದರ ಅರಿವನ್ನು ಮಿದುಳಿಗೆ ರವಾನಿಸುವುದು, ಶೀತ, ಉಷ್ಣ ಮತ್ತು ನೋವನ್ನು ತಿಳಿಯುವ ನರಮಂಡಲದ ಕೊನೆಯಭಾಗವನ್ನು ಹೊಂದಿದೆ. ಚರ್ಮದ ಒಳಪದರಗಳು ದೇಹದಲ್ಲಿ ಉಂಟಾಗುವ ಹೆಚ್ಚಿನ ಕೊಬ್ಬನ್ನು ಸಂಗ್ರಹಿಸಿ, ಆದನ್ನು ಬೆವರಿನ ಮೂಲಕ ಹೊರಹಾಕುತ್ತದೆ. ಇದರ ಮೊದಲ ಕಾರ್ಯ ದೇಹದ ಅಂಗಗಳ ರಕ್ಷಣೆ ಒದಗಿಸುವುದು.

 ಚರ್ಮ ಮತ್ತು ಅದರ ರಚನೆ –

ಈ ಚರ್ಮವು ಮೂರು ಪದರಗಳಿಂದ (Layers) ಕೂಡಿದೆ. 1 ಹೊರಚರ್ಮ (Epidermis), war (Dermis) 5 ក (Subcutaneous)

 ಹೊರಚರ್ಮ – ಇದು ಬಹಳ ಮೇಲ್ಬಾಗದ ಚರ್ಮವಾಗಿದೆ. ಇದರಲ್ಲಿ ಪದರ ಪದರವಾಗಿ ಸಿಪ್ಪೆಯಾಕಾರದಲ್ಲಿ ಜೀವಕೋಶಗಳು (Epithelial cells) ವಿಶೇಷ ಗುಣ ಕೂಡಿದೆ. ಇದು 5 ಜೀವಕೋಶ ಪದರಗಳಿಂದ ರಚಿತವಾಗಿದೆ. ಇದನ್ನು ಎರಡು ವಿಧದಲ್ಲಿ ವಿಭಾಯಿಸಿದ್ದಾರೆ ಮೇಲಿನ ಚರ್ಮ ಮತ್ತು ಒಳ ತಜ್ಞೆಯಾದ ಚರ್ಮ ಈ ಮೇಲಿನ ಚರ್ಮವು ಮೂರು ಪದರಗಳು. ಅದರಲ್ಲಿ ಬಹಳ ಮೇಲ್ಭಾಗದಲ್ಲಿ ಗಟ್ಟಿಮುಟ್ಟಾದ ಪದರ ಅನಂತರ ಹರಳು ಹರಳಾಗಿರುವ ಪದರ ಅನಂತರ ತಳಭಾಗದ ಪದರ (Basal) ವಾಗಿದೆ. ಇದನ್ನು ಉತ್ಕೃಷ್ಟವಾದ ಪದರ ಎನ್ನುತ್ತಾರೆ .

ಮೇಲಿನದು 5 ಪದರಗಳಲ್ಲಿ ಅತ್ಯಂತ ಮೇಲಿನ ಪದರವು ಸಮತಟ್ಟವಾಗಿ ತೆಳುವಾದ ಮತ್ತು ನಾಶವಾದ ಜೀವಕೋಶಗಳು ಕ್ರೇಟಿನ್ (Keratin) ಎಂಬ ವಸ್ತುವಿನಿಂದ ಕೂಡಿದೆ. ಈ ಮತ್ತು ಸುಲಭ ವಾಗಿ ಕರಗದ ನಾರಿನಂತ ಸಾರಜನಕ ವಸ್ತುವಾಗಿದೆ. ಈ ಪದರವು ದೇಹವನ್ನು ಶಾಖ, ರಸಾಯನಿಕ ವಿಷ. ಬೆಳಕು ಮತ್ತು ಜೀವಾಣುಗಳಿಂದ ರಕ್ಷಿಸುತ್ತದೆ.

ಎರಡನೇ ಪದರವು ಸಮತಟ್ಟವಾದ ಜೀವಕೋಶಗಳಿಂದ ಕೂಡಿದೆ ಆದರೆ ಜೀವಕಣಗಳು ಇರುವುದಿಲ್ಲ, ಇದರಲ್ಲಿ ಬಣ್ಣರಹಿತ ಕ್ರೇಟಿನ್ ಇರುತ್ತದೆ.

ಮೂರನೇ ಪದರದಲ್ಲಿ ಇದು ತನ್ನದೇ ಆದ ಜೀವಕಣಗಳನ್ನು ಹೊಂದಿದೆ. ಇದು ಹರಳಾಗಿ ಸಮಚ ಜೀವಕೋಶಗಳನ್ನು ರಕ್ಷಿಸುತ್ತದೆ. ಇದು ಕೆರಟೋಪೈಲೀನ್ ಎಂಬ ವಸ್ತುವಿನಿಂದ ಕೂಡಿದೆ. ಇದು ಮುಂದೆ   ಕ್ರೇಟನ್ ಆಗುತ್ತದೆ. ನಾಲ್ಕನೇ ಹೊರಚರ್ಮವು ಇದು ಬಹಳ ವಿಶಾಲವಾದ ಜೀವಾಂಕುರವಾಗುವ ವಲಯ ಸಣ್ಣ ಮುಳ್ಳಿನ ರೀತಿ ಜೀವಕೋಶಗಳನ್ನು ಒಳಗೊಂಡಿರುತ್ತದೆ.

ಐದನೇ ಪದರ ಬಹಳ ಆಳದಲ್ಲಿರುವ ತಳಪದರ ಇದು. ನಿರಂತರವಾಗಿ ಹೊಸ ಜೀವಕೋಶ ಗಳನ್ನು ಉತ್ಪಾದನೆ ಮಾಡುತ್ತಿರುತದೆ.