ಮನೆ ಮನರಂಜನೆ ಪ್ರಜ್ವಲ್ ದೇವರಾಜ್ ನಟನೆಯ ಮೇ 6 ರಂದು  ‘ವೀರಂ’ ಚಿತ್ರ ತೆರೆಗೆ

ಪ್ರಜ್ವಲ್ ದೇವರಾಜ್ ನಟನೆಯ ಮೇ 6 ರಂದು  ‘ವೀರಂ’ ಚಿತ್ರ ತೆರೆಗೆ

0

ಬೆಂಗಳೂರು: ನಾಯಕ ನಟ ಪ್ರಜ್ವಲ್ ದೇವರಾಜ್ ಮತ್ತು ರಚಿತಾ ರಾಮ್ ಜೋಡಿ ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ‘ವೀರಂ’ ಚಿತ್ರ ಮೇ 6 ರಂದು ತೆರೆ ಕಾಣಲಿದೆ.

ವೀರಂ ಸಿನಿಮಾವನ್ನು ಕುಮಾರ್ ರಾಜ್ ನಿರ್ದಶಿಸಿದ್ದು, ಶಶಿಧರ್ ಸ್ಟುಡಿಯೋ ಈ ಸಿನಿಮಾ ನಿರ್ಮಾಣ ಮಾಡಿದೆ. ತಾರಾಗಣದಲ್ಲಿ ಶ್ರೀನಗರ ಕಿಟ್ಟಿ ನಟಿಸಿದ್ದಾರೆ. ಖಳನಟರಾಗಿ ಚಿರಾಗ್ ಜಾನಿ ನಟಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ಮತ್ತು ಲವಿತ್ ಅವರ ಸಿನಿಮೆಟೊಗ್ರಫಿ ವೀರಂ ಸಿನಿಮಾಗಿದೆ.

ವೀರಂ’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ ಅವರಿಗೆ ನಾಯಕಿಯಾಗಿ ಮೊದಲ ಬಾರಿಗೆ ನಾಯಕಿಯಾಗಿ ಡಿಂಪಲ್ ಕ್ಚೀನ್ ರಚಿತಾ ರಾಮ್‌ ನಟಿಸುತ್ತಿದ್ದು, ‘ಶಿಷ್ಯ’ ಚಿತ್ರದ ದೀಪಕ್‌  ಈ ಚಿತ್ರದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ ಈ ಪಾತ್ರಕ್ಕಾಗಿ ವಿಶೇಷವಾದ ಗೆಟಪ್‌ ಹಾಗೂ ಹೇರ್‌ ಸ್ಟೈಲ್‌ ಮಾಡಿಸಿಕೊಂಡಿದ್ದಾರೆ. ಹಿರಿಯ ಕಲಾವಿದೆ ಶ್ರುತಿ ಹಾಗೂ ಶ್ರೀನಗರ ಕಿಟ್ಟಿ ಅವರು ವಿಶೇಷವಾದ ಪಾತ್ರವೊಂದಕ್ಕೆ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಈ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದೆ.

ಲವಿತ್​ ಕ್ಯಾಮೆರಾ ಕೈಚಳಕ, ಅನೂಪ್​ ಸಿಳೀನ್​ ಸಂಗೀತ ಸಂಯೋಜನೆ, ರವಿಚಂದ್ರನ್​ ಸಂಕಲನ, ಡಿಫರೆಂಡ್​ ಡ್ಯಾನಿ ಸಾಹಸ ನಿರ್ದೇಶನ ‘ವೀರಂ’ ಚಿತ್ರಕ್ಕಿದೆ. ಈ ಹಿಂದೆ ‘ಡಾಟರ್​ ಆಫ್​ ಪಾರ್ವತಮ್ಮ’ ಚಿತ್ರವನ್ನು ನಿರ್ಮಾಣ ಮಾಡಿದ್ದ ಶಶಿಧರ್​ ಕೆ.ಎಂ. ಅವರು ‘ವೀರಂ’ ಚಿತ್ರವನ್ನು ಪಕ್ಕಾ ಮಾಸ್​ ಶೈಲಿಯಲ್ಲಿ ನಿರ್ಮಿಸುತ್ತಿದ್ದು, ಚಿತ್ರವನ್ನು ನೋಡಲು ಪ್ರಜ್ವಲ್​ ದೇವರಾಜ್​ ಅಭಿಮಾನಿಗಳು​ ಕಾಯುತ್ತಿದ್ದಾರೆ. ಮಾತ್ರವಲ್ಲದೇ ಈ ಚಿತ್ರವು 2022ರಲ್ಲಿ ಬಿಡುಗಡೆಯಾಗುತ್ತಿರುವ ಪ್ರಜ್ವಲ್ ಅಭಿನಯದ ಮೊದಲ ಚಿತ್ರವಾಗಿದೆ. ಇನ್ನು ಪ್ರಜ್ವಲ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು, ‘ಮಾಫಿಯಾ’  ‘ಗಣ’ , ಸೇರಿದಂತೆ ಪನ್ನಗಭರಣ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಹಿಂದಿನ ಲೇಖನಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಕಂಚು ಗೆದ್ದ ಭಾರತದ ಮಹಿಳಾ ತಂಡ
ಮುಂದಿನ ಲೇಖನನಾಯ್ಕರ ಸಾಧನೆ ದೇಶಕ್ಕೆ ಮಾತ್ರವಲ್ಲ; ಜಗತ್ತಿಗೇ ಸ್ಫೂರ್ತಿ: ಪೇಜಾವರ ಶ್ರೀ