ಸಮಯವನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಳ್ಳುವುದಕ್ಕೆ ಪದ್ದತಿಯ ಜೊತೆಗೆ ಸೂಕ್ತ ಪ್ರಣಾಳಿಕೆ ಯೋಜನೆ ಬಹಳ ಅಗತ್ಯ ಸೂಕ್ತ ಪ್ರಣಾಳಿಕೆ ಹಂಚಿಕೊಳ್ಳದವರು ಬಹಳಷ್ಟು ನಷ್ಟಕ್ಕೊಳಗಾಗುತ್ತಿದ್ದಾರೆ. ಪದವಿಯಲ್ಲಿರಬೇಕಾದರೆ ಯಾವ್ಯಾವ ಕೆಲಸಗಳನ್ನು ಮಾಡಬೇಕೋ ಕೊನೆಯಲ್ಲಿ ಬಹಳಷ್ಟು ಪಶ್ಚಾತಾಪ ಪಡುತ್ತಾನೆ. ಕಾಲೇಜಿನಲ್ಲಿದ್ದಷ್ಟು ಕಾಲ ಸಿನಿಮಾ, ಕೊರ್ಟ್‌ಗಳಿಂದು ಸ್ನೇಹಿತರೊಂದಿಗೆ ಪಿಕ್‌ನಿಕ್ ಎಂದು ಸುತ್ತಾಡುತ್ತಾ ಪದವಿ ಪಡೆಯಲಾಗದೆ, ಕೊಡ್ಡವರಾದ ಮೇಲೆ ಸರಿಯಾದ ಉದ್ಯೋಗ ಸಿಗದೆ, ಮಾಡಿದ ತಪ್ಪನ್ನು ತಿಳಿದುಕೊಂಡು ಮಾನಸಿಕವಾಗಿ ಕುಗ್ಗಿ ಹೋಗುತ್ತಿರುವ ಯುವತಿ/ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಉದ್ಯೋಗಕ್ಕೆ ಸೇರಿದ ನಂತರ ಮಾಡಬೇಕಾದ ಒಳ್ಳೆಯ ಕೆಲಸಗಳನ್ನು ಮಾಡದೆ. ಯದ್ವಾತದ್ವಾ ಸಂಪಾದನೆ ಮಾಡಿ, ಕೊನೆಗೆ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಾಗ ಪಶ್ಚಾತ್ತಾಪದಿಂದ ತನ್ನ ಜೀವನವನ್ನು ಇನ್ನು ಮುಂದೆ ಸೇವೆಗೆ ಮುಡುಪಾಗಿಡುತ್ತೇನೆ ಎನ್ನುವ ವೃದನಾರ ಪತಿವ್ರತೆ’ಯಂತಹವರೂ ಇದ್ದಾರೆ.
ಮನೆಯ ಕೆಲಸಗಳು, ಅಡುಗೆ ಕೆಲಸಗಳು, ಸ್ವಂತ ಕೆಲಸಗಳು ಹಾಗೂ ತಮಾಷೆಯ ಕೆಲಸಗಳಿಗೆ ಸೂಕ್ತ ರೀತಿಯಲ್ಲಿ ಸಮಯವನ್ನು ಮೀಸಲಿಡದ ಮಹಿಳೆಯರು, ಕೊನೆಗೆ ಒತ್ತಡಕ್ಕೊಳಗಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದುಕೊಳ್ಳುತ್ತಿದ್ದಾರೆ. ಅಂತಹವರಿಗೆ ಎಬಿಸಿ ಟೆಕ್ನಿಕ್ ಚೆನ್ನಾಗಿ ಕೆಲಸ ಮಾಡುತ್ತದೆ.
ಎಬಿಸಿ ಟೆಕ್ನಿಕ್
ಟೈಮ್ ಮ್ಯಾನೇಜ್ ಮೆಂಟ್‌ಗೆ ಕೆಲವೊಂದು ಒಳ್ಳೆಯ ಪದತಿಗಳಿವೆ ಅವುಗಳ ಪೈಕಿ ಆಚರಣೆಗೆ ಯೋಗ್ಯವಾದ ಒಂದು ಒಳ್ಳೆಯ ಪದತಿಯೆಂದರೆ ಎಬಿಸಿ ಟೆಕ್ನಿಕ್ ಇದನ್ನು ಆಚರಿಸಲು ಅಷ್ಟೇನೂ ನೈಪುಣ್ಯತೆಯ ಅಗತ್ಯವಿಲ್ಲ. ಒಂದು ಬಿಳಿ ಕಾಗದದ ಮೇಲೆ ಎ.ಬಿ.ಸಿ. ಎಂದು ದೂರ ದೂರವಾಗಿ ಬರೆಯಬೇಕು. ಮಧ್ಯೆಯಲ್ಲಿ ಗೆರೆ ಹಾಕಿದರೆ ಒಳ್ಳೆಯದು. ಅಂದರೆ ಈಗ ಪೇಪರ್ ಮೇಲೆ ಎ.ಬಿ.ಸಿ. ಎಂಬ ಮೂರು ಭಾಗಗಳಿವೆ. ‘ಎ’ ಭಾಗದಲ್ಲಿ ಅತಿ ಮುಖ್ಯವಾದ ಕೆಲಸಗಳು, ‘ಬಿ’ ಭಾಗದಲ್ಲಿ ಮುಖ್ಯವಾದ ಕೆಲಸಗಳು, ಹಾಗೂ ‘ಸಿ’ ಭಾಗದಲ್ಲಿ ಸಾಮಾನ್ಯ ಕೆಲಸಗಳನ್ನು ಬರೆದುಕೊಳ್ಳಬೇಕು.
ಎ.ಬಿ.ಸಿ. ಕೆಲಸಗಳಲ್ಲಿ ಮತ್ತೆ ಪ್ರಾಮುಖ್ಯತೆಗಳಿರುತ್ತವೆ. ಅವುಗಳನ್ನು ಕೂಡಾ ಕ್ರಮಬದತಿಯಲ್ಲಿ ಬರೆಯಬೇಕು. ಬರೆಯುವಾಗ ಅತಿ ಮುಖ್ಯವಾದ ಕೆಲಸವನ್ನು ‘ಎ’ ನಂತರ ಎ।, ಎ2, ಎ3, ಎ4 ಈ ರೀತಿಯಾಗಿ ಬರೆಯುತ್ತಾ ಹೋಗಬೇಕು. ಅದೇ ರೀತಿಯಲ್ಲಿ ಬಿ. ಸಿ.ಗಳಲ್ಲೂ ಅದೇ ಕ್ರಮ ಅನುಸರಿಸಬೇಕು.
ಉದಾಹರಣೆಗೆ ಒಬ್ಬ ಗೃಹಿಣಿಗೆ ಈ ಕೆಳಕಂಡ ಕೆಲಸಗಳಿವೆಯೆಂದುಕೊಳ್ಳಿ :
★ ಅಡುಗೆ ಮಾಡಬೇಕು
★ ಮಕ್ಕಳನ್ನು ಓದಿಸಬೇಕು
★ಗಂಡನ ಬನಿಯನ್ ಗಳೆಲ್ಲಾ ಮಾಸಿಹೋಗಿವೆ. ಒಗೆಸಬೇಕು.
★ ಕಿಟ್ಟಿ ಪಾರ್ಟಿಯವರ ಮೀಟಿಂಗ್ ಇದೆ.
★ಇನ್‌ಸ್ಟಾಲ್‌ಮೆಂಟ್‌ನಲ್ಲಿ ಕೊಡುವ ಬೆಳ್ಳಿ ಸಾಮಾನುಗಳ ಬಗ್ಗೆ ತಿಳಿದುಕೊಳ್ಳಬೇಕು
★ ಟಿ.ವಿ.ಯಲ್ಲಿ ಬರುವ ಧಾರಾವಾಹಿಗಳನ್ನು ನೋಡಬೇಕು
★ ಪತ್ರಿಕೆಯ ಪದಬಂಧ ಪೂರ್ಣಗೊಳಿಸಬೇಕು.
★ ಸೋಫಾಕವರ್‌ಗಳು ಮಾಸಿಹೋಗಿವೆ ಅವುಗಳನ್ನು ಬದಲಾಯಿಸಬೇಕು.
★ ಅತ್ತೆಯವರಿಗೆ ಹುಷಾರಿಲ್ಲವಂತೆ ಹೋಗಿ ನೋಡಿಕೊಂಡು ಬರಬೇಕು.
★ ಇತ್ತೀಚೆಗೆ ಏಕೋ ಏನೋ ಮೊಣಕಾಲು ನೋವು ಹೆಚ್ಚಾಗುತ್ತಿವೆ ವೈದ್ಯರ ಬಳಿ ಹೋಗಬೇಕು.
★ ನನ್ನ ಹಳೇ ಗೆಳತಿ ಗಂಡನ ಮನೆಯಿಂದ ತವರಿಗೆ ಬಂದಿದ್ದಾಳಂತೆ. ಹೋಗಿ ಮಾತನಾಡಿಸಿಕೊಂಡು ಬರಬೇಕು.
★ ಕಸದ ರಾಶಿಯಂತಾಗಿರುವ ನ್ಯೂಸ್ ಪೇಪರ್ ಗಳನ್ನು ಮಾರಬೇಕು.
★ ಮನೆಯಲ್ಲಿ ಧೂಳು ಕೊಡವಿಸ್ವಚ್ಛಗೊಳಿಸಬೇಕು.
★ ಮಕ್ಕಳ ಕೋಣೆಯನ್ನು ಅಚ್ಚುಕಟ್ಟಾಗಿಡಬೇಕು.
★ ಹೊಸದಾಗಿ ಶಾಪಿಂಗ್ ಸೆಂಟರ್ ಪ್ರಾರಂಭವಾಗಿದೆಯಂತೆ ಹೋಗಿ ನೋಡಿಕೊಂಡು ಬರಬೇಕು.
ಇವುಗಳನ್ನು ಪ್ರಾಮುಖ್ಯತೆಗನುಸಾರವಾಗಿ ಎ.ಬಿ.ಸಿ ಗಳಾಗಿ ವಿಭಜಿಸಿಕೊಳ್ಳಬೇಕು.
ಎನ್ನುತ್ತಾರೆ
ಸರಿಯಾದ ಭಾಷೆಯನ್ನು ಕಲಿಸಿ :
ಈ ಕಾಲದ ಮಕ್ಕಳು ಒಂದು ವಿಚಿತ್ರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಇತ್ತ ತಮ್ಮ ಮಾತೃಭಾಷೆಯನ್ನು ಮಾತನಾಡಲು ವಿಫಲರಾಗುತ್ತ ಅತ್ತ ಅಮ್ಮ-ಅಪ್ಪಂದಿರು ಮಾತನಾಡುವ ಇಂಗ್ಲಿಷ್ ನಲ್ಲಿ ಮಾತನಾಡಲಾಗದೆ ಒದ್ದಾಡುತ್ತಿದ್ದಾರೆ. ಇನ್ನು ತಾಯಿ ತಂದೆಯರದ್ದು ಬೇರೆ ಬೇರೆ ಭಾಷೆಗಳಾದರೆ, ಇರುವ ಪ್ರಾಂತ್ಯದಲ್ಲಿ ಜನರು ಬೇರೊಂದು ಭಾಷೆಯನ್ನು ಮಾತನಾಡುತ್ತಿದ್ದರೆ. ಕೊನೆಗೆ ಮಕ್ಕಳು ಮಿಶ್ರತಳಿ ಭಾಷೆ ಕಲಿತುಕೊಂಡು, ಕಮ್ಯೂನಿಕೇಷನ್ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅಂತಹ ವಾತಾವರಣದಲ್ಲಿ ಬೆಳೆದ ಮಕ್ಕಳಿಗೆ ಐದು ವರ್ಷಗಳವರೆಗೆ ಸರಿಯಾಗಿ ಮಾತುಗಳೇ ಬರುವುದಿಲ್ಲ. ಆದ್ದರಿಂದ ತಾಯಿ-ತಂದೆಯರಿಬ್ಬರೂ ಒಂದು ಒಮ್ಮತಕ್ಕೆ ಬಂದು ಒಂದೇ ಭಾಷೆಯಲ್ಲಿ ಮಾತನಾಡಿಕೊಳ್ಳಬೇಕು. ಮಕ್ಕಳೊಂದಿಗೂ ಸಹ ಅದೇ ಭಾಷೆಯಲ್ಲಿ ಮಾತನಾಡಬೇಕು.
ನಮ್ಮ ಕನ್ನಡಿಗರು ನೂರಾರು ವರ್ಷಗಳ ಹಿಂದೆಯೇ ದಕ್ಷಿಣ ಆಫ್ರಿಕಾ ಮಲೇಷಿಯಾ ದೇಶಗಳಿಗೆ ಹೋಗಿ ನೆಲೆಗೊಂಡಿದ್ದರೂ, ಉತ್ತರ ಭಾರತದ ಸೋಲಾಪೂರ್, ಖರ್ಗ್ ಪೂರ್. ಜಂಪಡ್ ಪೂರ್ ಗಳಲ್ಲಿ ವಾಸಿಸುತ್ತಿದ್ದರೂ, ಮನೆಯಲ್ಲಿ ಕನ್ನಡವನ್ನೇ ಮಾತನಾಡುತ್ತಾರೆ. ಆದರೆ ಬೆಂಗಳೂರು, ಮೈಸೂರು, ತುಮಕೂರು ಹಾಸನ ಜಿಲ್ಲೆಗಳಲ್ಲಿ ಜನರು ಕನ್ನಡಕ್ಕೇ ತಿಲಾಂಜಲಿ ಬಿಡುತ್ತಿದ್ದಾರೆ. ಹೋಗಲಿ ಆ ಹೆತ್ತವರಾದರೂ ಸ್ಪಷ್ಟವಾದ ಇಂಗ್ಲಿಷ್ ಮಾತನಾಡುತ್ತಿದ್ದಾರಾ ಎಂದರೆ ಅದೂ ಇಲ್ಲ. ಇದರಿಂದಾಗಿ ಈ ಕಾಲದ ಮಕ್ಕಳು ಭಾಷಾ ವಿಷಯದಲ್ಲಿ ಗೊಂದಲಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ ಅವರು ಯಾವ ಭಾಷೆಯಲ್ಲಿ ಯೋಚಿಸಿಕೊಳ್ಳುತ್ತಿದ್ದಾರೋ ಕೂಡಾ ಅವರಿಗೇ ಗೊತ್ತಾಗುತ್ತಿಲ್ಲ
ನಿಮ್ಮ ಮಕ್ಕಳಿಗೆ ನಿಮ್ಮ ಮಾತೃಭಾಷೆಯನ್ನು ಚೆನ್ನಾಗಿ ಕಲಿಸಿ. ಇಂಗ್ಲಿಷ್ ಅಗತ್ಯವಿದೆ ನಿಜ. ಆದರೆ ಸಂಪೂರ್ಣವಾಗಿ ಆ ಮೋಜಿಗೆ ಬೀಳಬೇಡಿ. ಒಬ್ಬ ಕನ್ನಡದ ಬಾಲಕ ”ಇಬ್ಬರು ಹಸುಗಳು, ಮೂವರು ಲಾರಿಗಳು ” ಎಂದು ಮುದ್ದುಮುದ್ದಾಗಿ ಅಂದಾಕ್ಷಣ ಆ ತಾಯಿ ಆನಂದದಿಂದ ತಬ್ಬಿಕೊಳ್ಳಬಹುದು. ಆದರೆ ಮುಂದೆ ನಾಚಿಕೆಯಿಂದ ತಲೆ ತಗ್ಗಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಇಂಗ್ಲಿಷ್ ಅಗತ್ಯವೇ ಆದರೂ ಮಾತೃಭಾಷೆ ಅದಕ್ಕಿಂತ ಅತ್ಯಗತ್ಯವೆಂಬುದನ್ನು ಗುರುತಿಸಬೇಕು.
ಸಮಯ ಹಣಕ್ಕಿಂತ ಮೌಲ್ಯವಾದದ್ದೆಂದು ಹೇಳಿ :
ಹಣ ಬಹಳ ಮೌಲ್ಯಯುತವಾದುದು ಎಂದು ನಿಮ್ಮ ಮಕ್ಕಳಿಗೆ ತಿಳಿಸಿ. ಅದರ ಮೌಲ್ಯ ಅವರಿಗೆ ಗೊತ್ತಾಗಬೇಕಾದರೆ, ಅವರ ಜೇಬುಗಳನ್ನು ಹಣದಿಂದ ತುಂಬಿಸಬೇಡಿ. ಕೇಳಿದ್ದನ್ನೆಲ್ಲಾ ಖರೀದಿಸಿ ತಂದುಕೊಡಬೇಡಿ. ಒಂದು ರೂಪಾಯಿ ಸಂಪಾದನೆ ಮಾಡಬೇಕೆಂದರೆ ಎಷ್ಟು ಕಷ್ಟ ಪಡಬೇಕಾಗುತ್ತದೆ ಎಂಬುದನ್ನು ತಿಳಿಸಿ. ಅಷ್ಟು ಮೌಲ್ಯಯುತವಾದ ಹಣಕ್ಕಿಂತ ಸಮಯ ವೆಂಬುದು ಮತ್ತಷ್ಟು ಮೌಲ್ಯಯುತವಾದದ್ದೆಂದು ಅವರಿಗೆ ಮನವರಿಕೆ ಮಾಡಿಕೊಡಿ. ಕಳೆದುಕೊಂಡ ಹಣವನ್ನು ಸಂಪಾದಿಸಬಹುದು ಆದರೆ ವ್ಯರ್ಥವಾಗಿ ಕಳೆದ ಸಮಯವನ್ನು ಮತ್ತೆ ಪಡೆಯಲಾಗದೆಂಬ ಸತ್ಯವನ್ನು ಅವರಿಗೆ ತಿಳಿಯುವಂತೆ ಹೇಳಿ ಸಮಯದ ಮೌಲ್ಯವನ್ನು ತಿಳಿದುಕೊಂಡವರು, ತಮ್ಮ ಕೆಲಸಗಳನ್ನು ಒಂದು ಪದತಿ ಪ್ರಕಾರ ಮಾಡಿಕೊಳ್ಳುತ್ತಾರೆ. ಯಾವ್ಯಾವ ಕೆಲಸಗಳನ್ನು ಯಾವಾಗ ಮಾಡಬೇಕೆಂಬ ವಿಷಯವನ್ನು ತಾರ್ಕಿಕವಾಗಿ ಯೋಚಿಸುತ್ತಾರೆ.
ಮಕ್ಕಳು ಮಾಡಬಹುದಾದ ಕೆಲಸಗಳನ್ನು ಮಾಡಲು ಬಿಡಿ :
ಒಬ್ಬ ಸ್ವಾಮೀಜಿ ಬಳಿಗೆ ಶಿಷ್ಯನು ಹೋಗಿ ಪಾದಗಳಿಗೆ ಎರಗಿ ”ಸ್ವಾಮಿ! ನೀವು ಅತ್ಯಂತ ಶಕ್ತಿ, ಮಹಿಮೆಯುಳ್ಳವರೆಂದು ಕೇಳಿದ್ದೇನೆ. ನಿಮ್ಮನ್ನು ನೋಡುವ ಸಲುವಾಗಿಯೇ ಬಂದೆ. ಆದರೆ, ನನ್ನ ಕುದುರೆಯನ್ನು ಹೊರಗಡೆ ಕಟ್ಟಿ ಹಾಕದೆ ಬಂದುಬಿಟ್ಟೆ ಅದನ್ನು ಯಾರೂ ತೆಗೆದುಕೊಂಡುಹೋಗದ ಹಾಗೆ ನೋಡಿ” ಎಂದ. ಅದನ್ನು ಕೇಳಿ ಸ್ವಾಮೀಜಿ, ಎಲೈ ದುರುಳ ಬಾಲಕನೇ! ನೀನು ಮಾಡಬಹುದಾಗಿರುವ ಕೆಲಸವನ್ನು ಕೂಡಾ ಮಾಡದೆ, ಆ ಭಾರವನ್ನೂ ನನ್ನ ಮೇಲೆ ಹೊರಿಸಿದರೆ ಹೇಗೆ? ಮೊದಲು ಹೋಗಿ ಅದನ್ನು ಕಟ್ಟಿಹಾಕಿ ಬಾ, ಅನಂತರ ನನ್ನ ಮಾತುಗಳನ್ನು ಕೇಳುವಿಯಂತೆ” ಎಂದರಂತೆ.
ಈ ಕಾಲದಲ್ಲಿ ಕೆಲವು ತಾಯಿ-ತಂದೆಯರ ಪರಿಸ್ಥಿತಿ ಕೂಡಾ ಹಾಗೆಯೇ ಇದೆ ಮಕ್ಕಳು ಮಾಡಿಕೊಳ್ಳಬಹುದಾದ ಎಲ್ಲಾ ಕೆಲಸಗಳನ್ನು ತಾಯಿಯೇ ಮಾಡಿ ಮುಗಿಸುತ್ತಾರೆ. ಅವರು ಸುತ್ತಾಡಬೇಕಾದ ಸ್ಥಳಗಳೆಲ್ಲವನ್ನು ತಂದೆ ಸುತ್ತಾಡಿಸುತ್ತಾನೆ. ಇದರಿಂದಾಗಿ ಮಕ್ಕಳಿಗೆ ಪ್ರಪಂಚ ಜ್ಞಾನ ಹೇಗೆ ಬಂದೀತು? ಕೊನೆಗೆ ದೊಡ್ಡವರಾದ ಮೇಲೆ ಅಂಚೆ ಪತ್ರವನ್ನು ಎಲ್ಲಿ ಖರೀದಿಸಬೇಕೋ, ಪತ್ರಗಳನ್ನು ಎಲ್ಲಿ ಹಾಕಬೇಕೆಂಬುದು ಕೂಡಾ ಗೊತ್ತಾಗುವುದಿಲ್ಲ. ಈ ಹಿಂದೆ ಒಬ್ಬ ಹಿರಿಯರು ಇಂತಹ ಹುಡುಗನೊಬ್ಬನ ಕೈಗೆ ಪೋಸ್ಟ್ ಕಾರ್ಡ್ ಕೊಟ್ಟು ಅಂಚೆಪೆಟ್ಟಿಗೆಯಲ್ಲಿ ಹಾಕಿ ಬಾ ಎಂದರಂತೆ. ಆ ಹುಡುಗ ಬೆಳಗ್ಗೆಯಿಂದ ಸಂಜೆಯವರೆಗೆ ಸುತ್ತಾಡಿ ಸುತ್ತಾಡಿ ವಾಪಸ್ ಬಂದು. ”ತಾತಾ! ಬಹಳ ಅಂಚೆಪೆಟ್ಟಿಗೆಗಳನ್ನು ನೋಡಿದೆ. ಆದರೆ ಎಲ್ಲದಕ್ಕೂ ಬೀಗ ಹಾಕಿವೆ ಅದಕ್ಕೆ ಎಲ್ಲೂ ಹಾಕಲಾಗಲಿಲ್ಲ. ತಗೋ ನಿನ್ನ ಕಾರ್ಡ್ ನಿನ್ನ ಹತ್ರ ಇಟ್ಕೂ ” ಎಂದು ಹೇಳಿ ಓಡಿ ಹೋದನಂತೆ. ಆದ್ದರಿಂದ ಮಕ್ಕಳಿಗೆ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನವೂ ಬೆಳೆಯುವ ಹಾಗೆ ಮಾಡಬೇಕು ಇಲ್ಲದಿದ್ದರೆ ಅವರು ತಮ್ಮೆಲ್ಲ ಕೆಲಸಗಳ ಭಾರವನ್ನು ದೇವರ ಮೇಲೆ ಹಾಕಿಬಿಡುತ್ತಾರೆ.
ಈ ಕಾಲದ ಮಕ್ಕಳು ಹೊರಗೆ ಮಾತನಾಡುವ ಭಾಷೆಯಲ್ಲೂ ಕೂಡಾ ವಿಚಿತ್ರ ಧೋರಣೆಗಳು ಕಂಡುಬರುತ್ತಿವೆ. ಫಾಲ್ಸ್ ಪ್ರಿಸ್ಟೆಜ್ ಇರಬಹುದು, ಚುರುಕಿನ ಮನುಷ್ಯ ಎಂದು ಹೇಳುವುದಕ್ಕೂ ಇರಬಹುದು. ಅವರು ಇತ್ತ ಸರಿಯಾಗಿ ಕನ್ನಡವನ್ನು ಮಾತನಾಡಲಾಗುತ್ತಿಲ್ಲ, ಅತ್ತ ಇಂಗ್ಲೀಷ್ ಹೋಗಲಿ ಹಿಂದಿ ಕೂಡಾ ಮಾತಾಡಲಾಗದೆ, ಎಫ್‌ಎಂ ರೇಡಿಯೋ ಜಾಕಿಗಳ ಹಾಗೆ “ಕಂಗ್ಲೀಷ್” ಮಾತನಾಡುತ್ತಿದ್ದಾರೆ. ಅಂದರೆ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳ ಮಿಶ್ರಣದೊಂದಿಗೆ “ಹಲೋ ಬ್ರದರ್, ಇಷ್ಟು ದಿನ ಕಹಾಂ ಗಯಾ…” ಎಂಬ ಮಿಶ್ರ ಭಾಷೆಯನ್ನು ಮಾತನಾಡುತ್ತಿದ್ದಾರೆ. ಇದೇ ಅಭ್ಯಾಸವಾದರೆ ನಾಳೆ ಉದ್ಯೋಗವೆಂಬುದು ಗಗನ ಕುಸುಮವಾಗಬಹುದು.
ಸಹಜವಾಗಿ ಈ ಸಮಸ್ಯೆ ಪಿ.ಯು.ಸಿ. ನಂತರದ ವ್ಯಾಸಂಗದಲ್ಲಿ ಅಧಿಕವಾಗಿದೆ. ಅದಕ್ಕೆ ಕಾರಣ ಇಂಟರ್, ಡಿಗ್ರಿ ಸ್ಪೂಡೆಂಟ್ಸ್‌ಗೆ ಪಾಠ ಹೇಳುವ ಟೀಚರ್‌ಗಳಿಗೆ ಯಾವುದೇ ರೀತಿಯ ನಿರ್ದಿಷ್ಟ ತರಬೇತಿಗಳಿಲ್ಲ. ಓದು ಮುಗಿದಾಕ್ಷಣ ಲೆಕ್ಚರರ್ ಆಗಿಬಿಡುತ್ತಿದ್ದಾರೆ. ಬಿ.ಇಡಿ. ಕೋರ್ಸ್ ಗಳನ್ನು ಎಲ್ಲರೂ ಮಾಡದಿರಬಹುದು. ಅಂತಹವರಿಗೆ ಮುಕ್ತ ಯೂನಿವರ್ಸಿಟಿಗಳು ಹೈಯ್ಯರ್ ಎಜುಕೇಷನ್ ಡಿಪ್ಲೋಮೊಗಳನ್ನು ಪ್ರಾರಂಭಿಸಿವೆ. ಅವು ಓದಿದರೆ ಯುವಜನತೆಗೆ ಹೇಗೆ ಪಾಠ ಮಾಡಬೇಕೆಂಬ ವಿಷಯಕ್ಕಿಂತ ಹೇಗೆ ಸರಿ ರೂಪಿಸಬೇಕೆಂಬುದು ಗೊತ್ತಾಗುತ್ತದೆ. ಇಂತಹ ಕೋರ್ಸ್‌ಗಳು ತಾಯಿ-ತಂದೆಯರಿಗೂ (ಈ ಕಾಲಕ್ಕೆ ತಕ್ಕಹಾಗೆ) ಕೂಡಾ ಬಹಳ ಅಗತ್ಯವಿದೆ.