ಮನೆ ಯೋಗ ಮಕ್ಕಳು ಯಾವ ವಯಸ್ಸಿನಲ್ಲಿ ಯೋಗಾಸನ ಆರಂಭಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ಮಕ್ಕಳು ಯಾವ ವಯಸ್ಸಿನಲ್ಲಿ ಯೋಗಾಸನ ಆರಂಭಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

0

ಯೋಗಾಸನ ಅಭ್ಯಾಸ ಎಲ್ಲರಿಗೂ ಉತ್ತಮ ಆರೋಗ್ಯವನ್ನು ನೀಡುತ್ತದೆ. ಎಲ್ಲಾ ವಯಸ್ಸಿನವರು ಕೂಡ ಯೋಗಾಸನಗಳನ್ನು ಮಾಡಬಹುದಾಗಿದೆ. ಮಕ್ಕಳು ಯೋಗಾಸನ ಆರಂಭಿಸಲು ಸರಿಯಾದ ವಯಸ್ಸು ಯಾವುದು, ಆರಂಭದಲ್ಲಿ ಯಾವೆಲ್ಲಾ ಯೋಗಾಸನಗಳನ್ನು ಮಾಡಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

8 ವರ್ಷದವರೆಗೆ ಮೂಳೆ ಮತ್ತು ಸ್ನಾಯುಗಳು ಇನ್ನು ಬೆಳವಣಿಗೆ ಹಂತದಲ್ಲಿರುವ ಕಾರಣ ಅವುಗಳ ಮೇಲೆ ಒತ್ತಡ ಹಾಕುವುದು, ಹಿಮ್ಮುಖವಾಗಿ ದೇಹವನ್ನು ಬಗ್ಗಿಸುವುದು ಒಳ್ಳೆಯದಲ್ಲ. 8 ವರ್ಷದವರೆಗೆ ಸಹಜ ವ್ಯಾಯಾಮಗಳನ್ನು ಮಾಡುವುದು ಉತ್ತಮ. 8 ವರ್ಷದ ಬಳಿಕ ಯೋಗ, ಆಸನಗಳನ್ನು ಮಾಡಬಹುದಾಗಿದೆ. ಜೊತೆಗೆ ಮಕ್ಕಳು ಯೋಗಾಸನವನ್ನು ಅಭ್ಯಾಸ ಮಾಡುವ ಮೊದಲು ಸರಿಯಾದ ತರಬೇತುದಾರರ ಬಳಿ ಹೇಳಿಸಿಕೊಳ್ಳುವುದು ಒಳ್ಳೆಯದು.

ಸುಖಾಸನ

ಮಕ್ಕಳು ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಕಾರಣ ಭಾರೀ ಪ್ರಮಾಣದ ಯೋಗಾಸನಗಳನ್ನು ಮಾಡುವುದು ಒಳ್ಳೆಯದಲ್ಲ. ಹೀಗಾಗಿ ಸುಖಾಸನ ಉತ್ತಮ ಆಸನವಾಗಿದೆ. ಪ್ರತಿ ದಿನ 10 ನಿಮಿಷ ಸುಖಾಸನವನ್ನು ಮಾಡುವುದರಿಂದ ಇಡೀ ದೇಹದ ರಿಲಾಕ್ಸ್‌ ಆಗುತ್ತದೆ. ಮಾಂಸಖಂಡಗಳನ್ನು ಬಲಗೊಳಿಸುವುದಲ್ಲದೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ವೃಕ್ಷಾಸನ

ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡಲು, ಮಕ್ಕಳಲ್ಲಿ ಏಕಾಗೃತೆಯನ್ನು ಹೆಚ್ಚಿಸಲು ವೃಕ್ಷಾಸನ ಉತ್ತಮವಾಗಿದೆ. ಈ ಆಸನ ಕಾಲು, ಸೊಂಟ, ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ. ದೇಹದ ಬಾಲೆನ್ಸ್‌ನ್ನು ಸರಿದೂಗಿಸಲು ಸಹಾಯ ಮಾಡುತ್ತದೆ.

​ಭುಜಂಗಾಸನ

ಭುಜಂಗಾಸನ ಒತ್ತಡವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಒಟ್ಟಾರೆ ಧನಾತ್ಮಕತೆಯನ್ನು ಸುಧಾರಿಸುತ್ತದೆ. ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಕರುಳು ಮತ್ತು ಶ್ವಾಸಕೋಶವನ್ನು ಆರೋಗ್ಯವಾಗಿರಿಸುತ್ತದೆ. ಎದೆ, ತೋಳುಗಳು ಮತ್ತು ಬೆನ್ನು ಮತ್ತು ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ.

ಬದ್ಧಕೋನಾಸನ

ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಬದ್ಧಕೋನಾಸನದಿಂದ ಕಾಲುಗಳು ಮತ್ತು ಹೊಟ್ಟೆಯ ಸ್ನಾಯುಗಳನ್ನು ಬಲಗೊಳ್ಳುತ್ತವೆ. ಈ ಆಸನ ಜೀರ್ಣಕ್ರಿಯೆಗೆ ಒಳ್ಳೆಯದು. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಗ್ಯಾಸ್ಟ್ರಿಕ್‌, ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಆತಂಕವನ್ನು ಕಡಿಮೆ ಮಾಡುವ ಮೂಲಕ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ತಲೆನೋವು ಮತ್ತು ಆಯಾಸದಿಂದ ಪರಿಹಾರವನ್ನು ನೀಡುತ್ತದೆ.

ಹಿಂದಿನ ಲೇಖನರಾಜ್ಯದಲ್ಲಿ 1,053 ಕೋವಿಡ್‌ ಪ್ರಕರಣಗಳು ದೃಢ: 6,454 ಕ್ಕೇರಿದ ಸಕ್ರಿಯ ಪ್ರಕರಣ
ಮುಂದಿನ ಲೇಖನನಕಲಿ ಟಿಕೆಟ್‌ ಪರೀಕ್ಷಕ ಪೊಲೀಸರ ವಶಕ್ಕೆ