ದಾಸವಾಳ ಮೂಲತಃ ಚೀನಾ ದೇಶದ್ದು ವರ್ಷ ಹೂ ಬಿಡುವಂತಹ ಗಿಡವಾಗಿದ್ದು ಆಲಂಕಾರಿಕ ಗಿಡವಾಗಿ ಬೆಳೆಯಲಾಗುತ್ತಿದೆ. ಚೀನಾ ಮತ್ತು ಫಿಲಿಪ್ಪೆನ್ಸ್ ಗಳಲ್ಲಿ ಹೂಗಳನ್ನು ಆಹಾರದಲ್ಲಿ ಬಳಸ ಲಾಗುತ್ತದೆ. ದಾಸವಾಳದ ಹೂ ಗಳಿಂದ ಉಪ್ಪಿನಕಾಯಿಯನ್ನು ತಯಾರಿಸಲಾಗುತ್ತದೆ.
ದೇವಿ ಭಾಗವತದ ಒಂದು ಕತೆಯ ಪ್ರಕಾರ ಜಸುನ್ ದೇವಿಯ ಭಾವೋದ್ರಿಕ್ತ ಭಕ್ತ ಒಮ್ಮೆ ದೇವರು ಗಳೆಲ್ಲರೂ ಸೇರಿ ದೇವಿಯನ್ನು ದುಷ್ಟರ ಸದೆಬಡೆಯಲು ಕಾಳಿರೂಪವನ್ನು ತಾಳಲು ಕೋರಿದರು. ಆಗ ಜಸುನ್ ಕೆಂಪು ಬಣ್ಣದ ಹೂವನ್ನು ದೇವಿಗೆ ತನ್ನ ಸಿಟ್ಟು ತೋರ್ಪಡಿಸಲು ನೀಡಿದ ಆ ಕೆಂಬಣ್ಣವು ಕಾಳಿಯ ಕಣ್ಣಾಗಿ ಅವಳ ಕೋಪವನ್ನು ತೋರಲು ಸಹಕಾರಿಯಾಯಿತು. ಇದರಿಂದ ಪ್ರಸನ್ನಳಾದ ಕಾಳಿದೇವಿಯು ಜಸುನ್ ನನ್ನು ಯಾವುದಾದರೂ ಒಂದು ವರ ಕೇಳು ಎಂದಳು. ನಾನು ಯಾವಾಗಲೂ ನಿನ್ನ ಸೇವೆಯನ್ನೇ ಮಾಡುತ್ತೇನೆ’ ಎಂದು ಜಸುನ್ ಹೇಳಿದಾಗ ‘ನೀನು ನನ್ನ ಹೂವಾಗು’ ಎಂದು ವರ ಕೊಟ್ಟಳು. ಅಲ್ಲದೇ ‘ಇಂದಿನಿಂದ ನೀನು, ಜಾಧನ್, ದೇವಿ ಫೂಲ್, ಜಬಕುಸುಮ ಎಂದು ಕರೆಯಲ್ಪಡುವೆ ನಿನ್ನ ಹೂವುಗಳನ್ನು ಯಾರು ನನಗೆ ಅರ್ಪಿಸುವರೋ ಅವರೆಲ್ಲರೂ ನನ್ನಿಂದ ವರ ಪಡೆಯುತ್ತಾರೆ’ ಎಂದಳು. ಅಂದಿನಿಂದ ದಾಸವಾಳದ ಹೂವನ್ನು ಭಕ್ತಾದಿಗಳು ಕಾಳಿದೇವಿಗೆ ಅರ್ಪಿಸುತ್ತಾರೆ.
ವಾಮನ ಪುರಾಣದಲ್ಲಿ ಈ ಹೂವು ವಿಷ್ಣುವನ್ನು ಪೂಜಿಸಲು ಉಪಯೋಗಿಸುತ್ತಾರೆ ಎಂದು ಹೇಳುತ್ತದೆ. ಎಲೆ ಮತ್ತು ಹೂಗಳನ್ನು ಶಿವ ಮತ್ತು ಗೌರಿಯರಿಗೆ ನಿತ್ಯಸೋಮವಾರ ವ್ರತದಂದು ಭಕ್ತಾದಿಗಳು ನೀಡುತ್ತಾರೆ.
ಉಪಯುಕ್ತ ಭಾಗಗಳು
ಎಲೆ, ಬೇರು, ಹೂ, ಬೀಜಗಳು ಉಪಯುಕ್ತಗುಣ ಹೊಂದಿವೆ.
ರಾಸಾಯನಿಕ ಘಟಕಗಳು
ದಾಸವಾಳದ ಹೂಗಳಲ್ಲಿ ತೇವಾಂಶ, ನೈಟ್ರೋಜನ್, ಕೊಬ್ಬು, ನಾರಿನಂಶ, ಕ್ಯಾಲ್ಸಿಯಂ, ರಂಜಕ, ಕಬ್ಬಿಣಾಂಶ, ಥೈಯಮೈನ್, ರೈಬೊಫ್ಲಾಮಿನ್ ಮತ್ತು ಆಸ್ಕಾರ್ಬಿಕ್ ಆಮ್ಲಗಳು ಇರುತ್ತವೆ. ಔಷಧಿ ತಯಾರಿಕೆಯಲ್ಲಿ ಬಿಳಿ ದಾಸವಾಳ ಶ್ರೇಷ್ಠ
ಔಷಧೀಯ ಗುಣಗಳು
★ ಅಧಿಕ ರಕ್ತಸ್ರಾವದಿಂದ ಬಳಲುವ ಸ್ತ್ರೀಯರು ದಾಸವಾಳದ ಹೂವಿನ ರಸವನು ಹಾಲಿನೊಡನೆ ಸೇವಿಸುವುದರಿಂದ ಕಡಿಮೆಯಾಗುತ್ತದೆ.
★ ಅನಿಯಮಿತ ಮುಟ್ಟು ಕೆಲವು ಮಹಿಳೆಯರಲ್ಲಿ ಮುಟ್ಟು ತಿಂಗಳಿಗೊಮ್ಮ ನಿಯಮಿತವಾಗಿ
ಬಾರದೇ 40 ದಿನ, 2
ತಿಂಗಳಿಗೊಮ್ಮೆ ಇಲ್ಲವೇ ಮೂರು ತಿಂಗಳಿಗೊಮ್ಮೆ ಬರುತ್ತಿರುತ್ತದೆ
ಅಂತಹವರು ದಾಸವಾಳದ ಹೂವುಗಳನ್ನು ತುಪ್ಪದಲ್ಲಿ ಹುರಿದು ಅದಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಬೆರೆಸಿ
ದಿನಕ್ಕೆರಡು ಬಾರಿ ಸೇವಿಸಬೇಕು. *
★ ಬಿಳಿಸೆರಗಿನಿಂದ ಬಳಲುವ ಸ್ತ್ರೀಯರು ದಾಸವಾಳದ ಹೂವನ್ನು ಜೀರಿಗೆಯೊಡನೆ ನುಣ್ಣಗೆ ಅರೆದು ಅದಕ್ಕೆ ಮೊಸರು ಹಾಗೂ ಕಲ್ಲುಸಕ್ಕರೆ ಬೆರೆಸಿ ಸೇವಿಸಬೇಕು.
★ ಬಾಯಾರಿಕೆ, ದಣಿವಾದಾಗ ದಾಸವಾಳದ ಹೂವಿನ ರಸ ಅಥವಾ ಹೂವಿನಿಂದ ತಯಾರಿಸಿದ ಗುಲ್ಕಂದವನ್ನು ತಿನ್ನುವುದು ಒಳಿತು.
★ ಉರಿಮೂತ್ರ : ಬಳಿದಾಸವಾಳದ ಹೂವಿನ ರಸಕ್ಕೆ ಕಲ್ಲುಸಕ್ಕರೆ ಮತ್ತು ಹಾಲು ಬೆರೆಸಿ, ಕುಡಿಯಬೇಕು.
★ ಸುಟ್ಟಗಾಯ : ಬಿಳಿದಾಸವಾಳದ ಹೂ ಮತ್ತು ಗರಿಕೆ ಹುಲ್ಲಿನ ರಸವನ್ನು ಕೊಬ್ಬರಿ ಎಣ್ಣೆ ಇಲ್ಲವೇ ಎಳ್ಳೆಣ್ಣೆಯಲ್ಲಿ ಬೆರೆಸಿ ಕುದಿಸಿ, ಆರಿಸಿಟ್ಟುಕೊಂಡು ಸುಟ್ಟಗಾಯಗಳಿಗೆ ಲೇಪಿಸುವು ದರಿಂದ ಗಾಯ ಬೇಗನೆ ವಾಸಿಯಾಗುತ್ತದೆ.
★ ಆಮಭೇದಿ : ಆಮದಿಂದ ಕೂಡಿದ ಮಲವಿಸರ್ಜನೆಯಾಗುತ್ತಿದ್ದರೆ ದಾಸವಾಳದ ಹೂವನ್ನು ಮಜ್ಜಿಗೆಯಲ್ಲಿ ಅರೆದು ಉಪ್ಪು ಬೆರೆಸಿ ಕುಡಿಯಬೇಕು.
★ ಮಧುಮೇಹ ಮಧುಮೇಹದಿಂದ ಬಳಲುವವರು ಬಿಳಿದಾಸವಾಳದ ಬೇರನ್ನು ನೀರಿನಲ್ಲಿ ಅರೆದು ದಿನಕ್ಕೆರಡು ಬಾರಿ ಖಾಲಿಹೊಟ್ಟೆಯಲ್ಲಿ 4 ಚಮಚೆಯಷ್ಟನ್ನು ಸೇವಿಸಬೇಕು.
•★ ಚರ್ಮರೋಗಗಳು ಮತ್ತು ಮೊಡವೆಗಳಿಂದ ಬಳಲುವವರು ಬಿಳಿದಾಸವಾಳದ ಹೂವಿನ ರಸ ಸೇವನೆ ಮಾಡಬೇಕು.
★ ಮೂತ್ರನಾಳದಲ್ಲಿ ಕಲ್ಲು: ಬಿಳಿದಾಸವಾಳದ ಬೇರು ಮತ್ತು ಹೂವನ್ನು ಮಜ್ಜಿಗೆಯಲ್ಲಿ ಅರೆದು ಅದಕ್ಕೆ ಮತ್ತಷ್ಟು ಮಜ್ಜಿಗೆ ಸೇರಿಸಿ ಕುಡಿಯಬೇಕು.
* ★ಕೂದಲುದುರುವಿಕೆ ಒಂದು ಭಾಗ ಬಿಳಿದಾಸವಾಳ ಹೂವಿನ ರಸವನ್ನು, ಒಂದು ಭಾಗ ಎಳ್ಳೆಣ್ಣೆ ಇಲ್ಲವೆ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಕಾಯಿಸಿ ತೈಲ ತಯಾರಿಸಿಟ್ಟುಕೊಂಡು, ಪ್ರತಿದಿನ ತಲೆಕೂದಲಿಗೆ ಹಚ್ಚಿಕೊಳ್ಳುತ್ತಿದ್ದರೆ ಕೂದಲುದುರುವುದು ನಿಲ್ಲುವುದಲ್ಲದೇ ಕೂದಲು ಆರೋಗ್ಯಕರವಾಗಿ ಕಾಂತಿಯುಕ್ತವಾಗಿರುತ್ತದೆ.ವಾರಕ್ಕೊಮ್ಮೆ ಇಲ್ಲವೇ ಎರಡುಬಾರಿ ದಾಸವಾಳದ ಹೂ ಅಥವಾ ಎಲೆಯನ್ನು ಜಜ್ಜಿ ಆ ರಸವನ್ನು ಕೂದಲಿನ ಬುಡಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡುವುದರಿಂದಲೂ ಕೂದಲು ಉದುರುವುದು ನಿಂತು ಸೊಂಪಾಗಿ ಬೆಳೆಯುತ್ತದೆ.
ಬಿಳಿದಾಸವಾಳ ಸಿಗದಿರುವಾಗ ಕೆಂಪು ದಾಸವಾಳವನ್ನೂ ಬಳಸಬಹುದು.
★ಈ ಕೂದಲಿಗೆ ಬಣ್ಣ ಬರಿಸಲು : ಗೋರಂಟಿ ಎಲೆ, ನೆಲ್ಲಿಕಾಯಿ ರಸ ಅಥವಾ ಪುಡಿ, ದಾಸವಾಳದ ಎಲೆ, ನಿಂಬೆರಸ ಅಥವಾ ಸಿಪ್ಪೆ, ಭ್ರಂಗರಾಜ (ಗರುಗದ ಸೊಪ್ಪು)ಎಲ್ಲವನ್ನು ಸೇರಿಸಿ ನುಣ್ಣಗೆ ರುಬ್ಬಿ ತಲೆಗೆ ಹಚ್ಚಿಕೊಳ್ಳಬೇಕು. ಒಂದು ಗಂಟೆಯ ನಂತರ ತಲೆ ತೊಳೆದುಕೊಳ್ಳಬೇಕು. ಕೂದಲು ಕಾಂತಿಯುಕ್ತವಾಗುತ್ತದೆ ಮತ್ತು ಬಿಳಿಗೂದಲು ಕೆಂಚಗಾಗುತ್ತದೆ. ಇದನ್ನು ಹದಿನೈದು ದಿನಗಳಿಗೊಮ್ಮೆ ಮಾಡಬಹುದು.
★ತೈಲ : ಅಲ್ಲದೇ 20 ದಾಸವಾಳದ ಮೊಗ್ಗುಗಳು (ಬಿಳಿ), ಜೀರಿಗೆ ಅರ್ಧ ಚಮಚೆ, ಮಲ್ಲಿಗೆಯ ಎಲೆ 10 ಎಲ್ಲವನ್ನೂ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಾಯಿಸಬೇಕು. ದಾಸವಾಳದ ಮೊಗ್ಗು ಸಂಡಿಗೆಯಂತೆ ಗರಿಗರಿಯಾದಾಗ ಎಣ್ಣೆಯನ್ನು ಒಲೆಯ ಮೇಲಿಂದ ಇಳಿಸಿ, ಶೋಧಿಸಿ ತೆಗೆದಿಟ್ಟುಕೊಳ್ಳಬೇಕು. ಪ್ರತಿದಿನ ತಲೆಗೆ ಈ ಎಣ್ಣೆಹಚ್ಚಿಕೊಳ್ಳುತ್ತಿದ್ದರೆ ಕೂದಲಿನ ಕಾಂತಿ ಹೆಚ್ಚುತ್ತದೆಯಲ್ಲದೆ ಕಣ್ಣುರಿ, ತಲೆನೋವಿನ ಸಮಸ್ಯೆಯೂ ಕಾಡಲಾರವು.
★ಶಿಶುಗಳಿಗೆ : 6 ತಿಂಗಳೊಳಗಿನ ಶಿಶುಗಳಿಗೆ ಬಳಿದಾಸವಾಳದ ಮೊಗ್ಗುಗಳನ್ನು ಜೇನಿನಲ್ಲಿ ಅರೆದು ತಿನ್ನಿಸುವುದರಿಂದ ಅತಿಭೇದಿಯಾಗುವುದಾಗಲೀ, ಮಲಬದ್ಧತೆಯಾಗಲೀ ಆಗುವುದಿಲ್ಲ. ಜೀರ್ಣಕ್ರಿಯೆ ಸಲೀಸಾಗಿ ಆಗುತ್ತದೆ.
★ ಜ್ವರ : ಆಯಾಸ ಮತ್ತು ಉಷ್ಣದಿಂದ ಜ್ವರ ಬಂದಿದ್ದಲ್ಲಿ ತೊಳೆದು ಶುಚಿಗೊಳಿಸಿದ ಬಿಳಿ ದಾಸವಾಳದ ನಾಲ್ಕು ಹೂಗಳನ್ನು ಅರ್ಧ ಲೋಟ ನೀರಿನಲ್ಲಿ ನೆನೆಯಿಸಿಟ್ಟು ಸ್ವಲ್ಪ ಸಮಯದ ನಂತರ ಕುಡಿಯಬೇಕು. ಈ ರೀತಿ ದಿನಕ್ಕೆ ಮೂರು ಬಾರಿ ಕುಡಿಯಬೇಕು.
★ ಮಲೇಷಿಯಾದಲ್ಲಿ ಹೆರಿಗೆಯ ಸಮಯದಲ್ಲಿ ನೋವು ಬಾರದೇ ಹೆರಿಗೆ ಕಷ್ಟದಾಯಕ ವಾಗಿದ್ದಲ್ಲಿ ದಾಸವಾಳದ ಹೂವಿನ ರಸವನ್ನು ಇತರ ಗಿಡಮೂಲಿಕೆಯ ರಸದೊಂದಿಗೆ ಬೆರೆಸಿ ಕುಡಿಸುತ್ತಾರೆ. ಅಲ್ಲದೇ ಲೈಂಗಿಕ ರೋಗಗಳಿಗೂ ಔಷಧಿಯಾಗಿ ಬಳಸಲಾಗುತ್ತದೆ.
★ದಾಸವಾಳದ ಹೂಗಳಿಂದ ಗಾಢವಾದ ನೇರಳೆ ಬಣ್ಣದ ಡೈಯನ್ನು ತಯಾರಿಸಲಾಗುತ್ತದೆ ಚೀನಾ ಮತ್ತು ಇತರ ದೇಶಗಳಲ್ಲಿ ಈ ಡೈಯನ್ನು ಕೂದಲು ಕಪ್ಪಾಗಿಸಲು ಹಾಗೂ ಪಾನೀಯಗಳಲ್ಲಿ ಬಳಸಲಾಗುತ್ತದೆ.
ಅಡುಗೆ
ಪಲ್ಯ : ದಾಸವಾಳದ ಹೂವನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಸ್ವಲ್ಪ ಎಣ್ಣೆಯಲ್ಲಿ ಬಾಡಿಸಿ ಉಪ್ಪು, ಖಾರದ ಪುಡಿ ಬೆರೆಸಬಹುದು
ಎಲೆಯ ರಸದಿಂದ ಪಾನೀಯ : ದಾಸವಾಳದ ಎಲೆಯನ್ನು ರುಬ್ಬಿ ರಸ ತೆಗೆದು ಕೊಳ್ಳಬೇಕು. ನಂತರ ಅದಕ್ಕೆ ಬೆಲ್ಲ ಅಥವಾ ಸಕ್ಕರೆ ಮತ್ತು ನೀರು ಬೆರೆಸಿ ಪಾನೀಯ ತಯಾರಿಸಬಹುದು. ಬೇಸಿಗೆಯಲ್ಲಿ ಇದು ಸುಲಭವಾಗಿ ತಯಾರಿಸಬಲ್ಲ ತಂಪು ಪಾನೀಯ
*
★ ದಾಸವಾಳ ಹೂವಿನ ಶರಬತ್ : ದಾಸವಾಳ* ಹೂವನ್ನು ರುಬ್ಬಿ ರಸ ತೆಗೆದು ಅದಕ್ಕೆ ನೀರು, ಸಕ್ಕರೆ ಬೆರೆಸಿ ಕುಡಿಯಬೇಕು. ಇದು ಉತ್ತಮ ದಾಹಶಾಮಕವಾಗಿದೆ.
ಒಂದು ಲೋಟ ಸಕ್ಕರೆಗೆ ಸ್ವಲ್ಪ ನೀರು ಬೆರೆಸಿ ಸಕ್ಕರೆ ಪಾಕ ತಯಾರಿಸಿಟ್ಟುಕೊಳ್ಳಬೇಕು. ಅದಕ್ಕೆ ಒಂದು ಲೋಟ ದಾಸವಾಳದ ಹೂವಿನ ರಸ ಬೆರೆಸಿ ಒಲೆಯ ಮೇಲಿಟ್ಟು ನೀರಿನಂಶ ಇಂಗುವವರೆಗೆ ಕುದಿಸಬೇಕು. ನಂತರ ಇಳಿಸಿ. ಆರಿಸಿ, ಬಾಟಲಿಯಲ್ಲಿ ತುಂಬಿಟ್ಟುಕೊಳ್ಳಬೇಕು. ಬೇಕಾದಾಗ ಎರಡು ಚಮಚೆ ರಸಕ್ಕೆ ಒಂದು ಲೋಟ ನೀರು ಬೆರೆಸಿ ಕುಡಿಯಬೇಕು. ಚೀನಾ ಮತ್ತು ಜಪಾನ್ ದೇಶಗಳಲ್ಲಿ ಅತಿಥಿಗಳಿಗೆ ಸತ್ಕರಿಸಲು ಇದೇ ಜ್ಯೂಸ್ ನೀಡುತ್ತಾರೆ.
ತಂಬುಳಿ : ದಾಸವಾಳ ಹೂವನ್ನು ಸ್ವಲ್ಪ ಎಣ್ಣೆಯಲ್ಲಿ ಜೀರಿಗೆ ಕೊಬ್ಬರಿ ತುರಿ ಹಾಕಿ ಹುರಿದು ರುಬ್ಬಿಕೊಂಡು ಮೊಸರಿನಲ್ಲಿ ಇಲ್ಲವೇ ಮಜ್ಜಿಗೆಯಲ್ಲಿ ಬೆರೆಸಿ ರುಚಿಗೆ ಆಹಾರದೊಂದಿಗೆ ಬಳಸಬೇಕು. ತಕ್ಕಷ್ಟು ಉಪ್ಪು ಸೇರಿಸಿ
ರೊಟ್ಟಿ: ದಾಸವಾಳದ ಹೂಗಳನ್ನು ಹೆಚ್ಚಿಕೊಂಡು ಅಕ್ಕಿಹಿಟ್ಟು ಇಲ್ಲವೇ ಗೋಧಿಹಿಟ್ಟಿನಲ್ಲಿ ಬೆರೆಸಿ ರೊಟ್ಟಿ ತಟ್ಟಬಹುದು.
ರುಬ್ಬಿಕೊಂಡು ಮೊಸರಿನಲ್ಲಿ ಇಲ್ಲವೇ ಮಜ್ಜಿಗೆಯಲ್ಲಿ ಬೆರೆಸಿ ರುಚಿಗೆ ಆಹಾರದೊಂದಿಗೆ ಬಳಸಬೇಕು. ತಕ್ಕಷ್ಟು ಉಪ್ಪು ಸೇರಿಸಿ
ರೊಟ್ಟಿ: ದಾಸವಾಳದ ಹೂಗಳನ್ನು ಹೆಚ್ಚಿಕೊಂಡು ಅಕ್ಕಿಹಿಟ್ಟು ಇಲ್ಲವೇ ಗೋಧಿಹಿಟ್ಟಿನಲ್ಲಿ ಬೆರೆಸಿ ರೊಟ್ಟಿ ತಟ್ಟಬಹುದು.
ಇಡ್ಲಿ, ದೋಸೆ : ಇಡ್ಲಿ, ದೋಸೆ ತಯಾರಿಸುವಾಗ ಹುದುಗು ಬರಿಸಲು ಉದ್ದಿನಬೇಳೆಯ ಬದಲು ಅಕ್ಕಿಯೊಂದಿಗೆ ದಾಸವಾಳದ ಎಲೆಗಳನ್ನು ಬಳಸಬಹುದು ದಾಸವಾಳದ ಎಲೆ ಹಾಕಿ ತಯಾರಿಸಿದ ಇಡ್ಲಿ, ದೋಸೆ ಮೃದುವಾಗಿರುತ್ತದೆ, ರುಚಿಯಾಗಿರುತ್ತದೆ.
ಇತರೆ
ಹೈಬಿಸ್ಯನ್ ಪದವು ‘ಈಬಿಸ್ಕೋಸ್’ ಎಂಬ ಗ್ರೀಕ್ ಪದದಿಂದ ಬಂದಿದೆ. ಸಂಸ್ಕೃತದಲ್ಲಿ ಜಾವ ಅಥವಾ ಜಾವಾ ಎಂದರೆ ಪ್ರಾರ್ಥನೆ ಮತ್ತು ಜವ ದಾಸವಾಳದ ದಳಗಳನ್ನು ಬೂಟುಗಳಿಗೆ ಹೊಳಪು ತರಲು ಬಳಸುವುದರಿಂದ ಇದನ್ನು ಇಂಗ್ಲಿಷರು ‘ಶೂ ಫ್ಲವರ್’ ಎಂದು ಹೆಸರಿಸಿದರು.
ಬಂಗಾಳದಲ್ಲಿ ‘ಚರಕ್’ ಹಬ್ಬವನ್ನು ಏಪ್ರಿಲ್ ತಿಂಗಳಲ್ಲಿ ಆಚರಿಸುತ್ತಾರೆ. ಭಕ್ತಾದಿಗಳು ಈ ಸಂದರ್ಭದಲ್ಲಿ ತಮ್ಮ ಪಾಪಕಾರ್ಯಗಳ ಪ್ರಾಯಶ್ಚಿತ್ವಕ್ಕೆ ತಪಸ್ಸು ಮಾಡಿ ಚರ್ಮವನ್ನು ಜಾಬಾ ಹೂವಿನ (ದಾಸವಾಳದ) ಹೂವಿನ ತುದಿಯಿರುವ ಸಣ್ಣ ಬಾಣಗಳಿಂದ ಚುಚ್ಚಿಸಿಕೊಳ್ಳುತ್ತಾರೆ.
ಇತರ ಭಾಷೆಗಳಲ್ಲಿ
ಸಂಸ್ಕೃತ – ರುದ್ರಪುಷ್ಪ, ಜಪಾಪುಷ್ಪ
ಹಿಂದಿ.- ಜಸುತ್,ಜಸೂನ್,ಗುಥಾಲ್
ಮರಾಠಿ – ಜಸವಂದ
ತಮಿಳು – ಚಂಬರತ್ತಿ ಪೂ. ಸಪತ್
ಮಲಯಾಳಂ – ಚಂಪಾರುತ್ತಿ
ತೆಲುಗು – ಜಪಾಪುಷ್ಪಮ್, ದಾಸನ ಪೂ, ದಾನಚಟ್ಟು, ಮಂದಾರ
ವೈಜ್ಞಾನಿಕ ಹೆಸರು – Hibiscus rosa-sinesis