ಮನೆ ಯೋಗಾಸನ ತಾರುಣ್ಯವನ್ನು ಉಳಿಸಿಕೊಳ್ಳಲು ಈ ಯೋಗಾಸನ ಮಾಡಿ

ತಾರುಣ್ಯವನ್ನು ಉಳಿಸಿಕೊಳ್ಳಲು ಈ ಯೋಗಾಸನ ಮಾಡಿ

0

ಮಾಲಿನ್ಯ, ಬದುಕಿನ ಒತ್ತಡ, ಆರ್ಥಿಕ ಚಿಂತೆಯಂತಹ ಮಾನಸಿಕ ಉದ್ವೇಗದ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರತಿದಿನವೂ ಭಯದ ವಾತಾವರಣದಲ್ಲಿಯೇ ದಿನ ದೂಡುವಂತಾಗಿದೆ. ಪಾರ್ಕ್ನ ವ್ಯಾಯಾಮವಿರಲಿ, ಮನೆಯ ಜಗುಲಿಯ ಮೇಲೆ ಕುಳಿತು ನೆಮ್ಮದಿಯಿಂದ ಪಕ್ಕದ ಮನೆಯವರೊಟ್ಟಿಗೆ ಮಾತನಾಡುವುದು ಕೂಡ ಈಗ ಅಸಾಧ್ಯ. ಈ ನಿಟ್ಟಿನಲ್ಲಿ ಬಹುತೇಕರು, ಮಾನಸಿಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಲ್ಲದೇ ದೈಹಿಕ ಆರೋಗ್ಯವೂ ಕೂಡ ಹದಗೆಡುತ್ತಿದೆ.

ಇನ್ನೂ ವರ್ಕ್ ಫ್ರಂ ಹೋಂ ಕಾರಣ ಕುಳಿತಲ್ಲೇ ಕೂತು, ಮನೆಯಲ್ಲಿರುವುದರಿಂದ ಹೆಚ್ಚಾಗಿ ತಿನಿಸಿಗೆ ಅಂಟಿಕೊಂಡಿರುವ ಕಾರಣ ದೇಹ ಬೊಜ್ಜಿನ ಆವಾಸಸ್ಥಾನವಾಗುತ್ತಿದೆ. ಈ ನಿಟ್ಟಿನಲ್ಲಿ ಅವಧಿಗೆ ಮುಂಚೆಯೇ ಬಹುತೇಕರು ಹತ್ತು ವರ್ಷ ಹೆಚ್ಚಿಗೆ ವಯಸ್ಸಾದವರಂತೆ ಕಾಣಲು ಆರಂಭಿಸಿದ್ದಾರೆ. ಈ ರೀತಿ ಅಕಾಲಿಕ ಮುಪ್ಪು ಸಂಭವಿಸಬಾರದು.

ಯೋಗವೇ ಮಂತ್ರ

ಹಾಗಾದರೆ, ಅಕಾಲಿಕ ಮುಪ್ಪು ಆವರಿಸದಂತೆ, ಬಹು ಬೇಗ ವಯಸ್ಸಾಗದಂತೆ ಇರಲು ಯಾವೆಲ್ಲಾ ಆಸನಗಳು ಯೋಗಾಸನದಲ್ಲಿವೆ? ಇದನ್ನು ಮಾಡುವ ಕ್ರಮ ಹೇಗೆ ? ದಿನಕ್ಕೆ ಎಷ್ಟು ಸಮಯ ಈ ಆಸನ ಮಾಡಬೇಕು? ಈ ಆಸನಗಳು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಇದೆಲ್ಲದರ ಬಗ್ಗೆಯೂ ಯೋಗ ಗುರುಗಳಾದ ಡಾ. ರಾಜೇಶ್ವರಿ ಅವರು ತಿಳಿಸಿಕೊಟ್ಟಿದ್ದಾರೆ ಮುಂದೆ ಓದಿ.

ಆಧುನಿಕ ದಿನಗಳಲ್ಲಿ ಫಿಟ್ನೆಸ್ ಎನ್ನುವುದು ಬಹು ಮುಖ್ಯವಾಗಿದೆ. ಒಬ್ಬ ಮನುಷ್ಯನಿಗೆ ಫಿಟ್ ಆಗಿರಬೇಕಾದರೇ ದಿನಕ್ಕೆ ಕನಿಷ್ಠ 20 ನಿಮಿಷಗಳ ಕಾಲ ಸತತವಾಗಿ ವ್ಯಾಯಾಮ ಮಾಡಬೇಕು. ಈ ವ್ಯಾಯಾಮ ಮಾಡುವುದು ಸಾಂಪ್ರದಾಯಿಕವಾಗಿದ್ದಾಗ ಒಬ್ಬ ಮನುಷ್ಯ ಫಿಟ್ ಆಗಿ ಇರುವ ಜತೆಗೆ, ವ್ಯಕ್ತಿಯ ಚೈತನ್ಯವೂ ಕೂಡ ಹೆಚ್ಚಾಗ ತೊಡಗುತ್ತದೆ.

ಇದರ ಜೊತೆ ಜೊತೆಗೆ ಆ್ಯಂಟಿ ಏಜಿಂಗ್ ಎಂದು ನಾವು ಕರೆಯುವ ಅಂದರೆ ನಿಧಾನವಾಗಿ ವಯಾಸ್ಸಾಗುವ ಶಕ್ತಿಯನ್ನು ನಾವು ಪಡೆದುಕೊಳ್ಳಬಹುದು. ದಂಡ ಬೈಟಕ್ ಅನ್ನುವಂತಹ ಒಂದು ಪ್ರಾಚೀನ ಕಾಲದಿಂದ ಬಂದಂತಹ ಅಭ್ಯಾಸದ ನಾನಿಂದು ನಿಮಗೆ ತಿಳಿಸಿಕೊಡಲಿದ್ದೇನೆ. ಈ ದಂಡ ಬೈಟಕ್ನಲ್ಲಿ ಅನೇಕ ವಿಧಗಳಿವೆ. ಅದರಲ್ಲಿ ಮೊದಲನೆಯ ದಂಡ ಹಾಗೂ ಮೊದಲನೆಯ ಬೈಟಕ್ ಎಂದು ಕರೆಯುವ ಈ ಅಭ್ಯಾಸವನ್ನು ಹೇಗೆ ಮಾಡಬೇಕೆಂಬುದನ್ನು ನಿಮಗೆ ತಿಳಿಸಿಕೊಡುತ್ತೇನೆ.

ಪ್ರತಿದಿನ ಈ ಅಭ್ಯಾಸ ಮಾಡುವುದರಿಂದ ನಮ್ ಕೋರ್ ಅಂದರೆ ನಮ್ಮ ದೇಹ ಸಂಪೂರ್ಣವಾಗಿ ಹೊಟ್ಟೆಯ ಭಾಗ, ಬೆನ್ನಿನ ಭಾಗದಲ್ಲಿ ಕೂಡ ಶಕ್ತಿಯನ್ನುಂಟು ಮಾಡಿ, ನಮ್ಮ ಬೆನ್ನು ನೋವಾಗಿರಬಹುದು ಅಥವಾ ಹೊಟ್ಟೆಯ ಬೊಜ್ಜಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಜೊತೆಗೆ ಕೈಗಳನ್ನು ಸಹ ಬಲಿಷ್ಠಗೊಳಿಸಬಹುದು. ಹಾಗಾದರೆ ಇಷ್ಟೆಲ್ಲ ಪ್ರಯೋಜನವಿರುವ ಈ ಅಭ್ಯಾಸವನ್ನು ಮಾಡುವುದು ಹೇಗೆ ಇಲ್ಲಿದೆ ಗಮನಿಸಿ.

ಸಾಧಾರಣ ದಂಡ

ಈ ಅಭ್ಯಾಸವನ್ನು ಸಾಧಾರಣ ದಂಡ ಎಂದು ಕರೆಯುತ್ತೀವಿ. ಈ ಅಭ್ಯಾಸವನ್ನು ಮಾಡಬೇಕು ಅಂದರೆ ಮೊದಲು ಮೂರು ಆಸನಗಳನ್ನು ಕಲಿಯಬೇಕಾಗುತ್ತದೆ. ಮೊದಲನೆಯದಾಗಿ ಪರ್ವತಾಸನ ಅಥವಾ ಅಧೋಮುಖ ಶ್ವಾನಾಸನ ಎಂದು ಕರೆಯುತ್ತೇವೆ. ಈ ಅಧೋಮುಖ ಶ್ವಾನಾಸನವನ್ನು ನಾವು ಕೆಲಕಾಲ ಅಭ್ಯಾಸ ಮಾಡಬೇಕು.

ಮೈಯನ್ನು ಬಿಲ್ಲಿನಂತೆ ಬಗ್ಗಿಸಿ, ಕಾಲನ್ನು ಹಿಂದಕ್ಕೆ ಚಾಚಿ ಕೈಗಳನ್ನು ಮುಂದಕ್ಕೆ ಬಿಟ್ಟು, ಕಣ್ಣಗಳು, ನಿಮ್ಮ ಪಾದಗಳನ್ನು ನೋಡುತ್ತಿರುವಂತೆ ಇರಬೇಕು. ಹೀಗೆ ಕೆಲಕಾಲ ಅಭ್ಯಾಸ ಮಾಡಿದ ಬಳಿಕ ನಮ್ಮ ಕೈಗಳಿಗೆ ಮತ್ತು ಕಾಲುಗಳಿಗೆ ಬಲ ಬರುತ್ತದೆ.

ಚದುರಂಗ ದಂಡಾಸಾನ

ಉಸಿರನ್ನು ಹೊರಗೆ ಹಾಕ್ತಾ, ಹೊಟ್ಟೆಯನ್ನು ಒಳಗೆ ಎಳೆಯುತ್ತಾ ನಿಧಾನವಾಗಿ ನಮ್ಮ ದೇಹವನ್ನು ಕೆಳಗೆ ತರ್ತ್ತಾ ಇರೋಣಾ. ಅದೇ ರೀತಿ ದೇಹದ ಯಾವ ಭಾಗವು ಹಸ್ತಗಳು ಮತ್ತು ಕಾಲಿನ ಬೆರಳುಗಳನ್ನು ಬಿಟ್ಟು ದೇಹದ ಉಳಿದೆಲ್ಲಾ ಭಾಗಗಳು ನೆಲದಿಂದ ಮೇಲಕ್ಕೆ ಇರುವಂತೆ ಗಮನಿಸೋಣಾ. ಚದುರಂಗ ದಂಡಾಸಾನದಲ್ಲಿ ಇರುವಂತೆ ಅಭ್ಯಾಸ ಮಾಡಿಕೊಳ್ಳೋಣಾ. ಕೆಲಕಾಲ ವ್ಯಸನದಲ್ಲಿ ವಿರಮಿಸೋಣಾ. ಮುಂದಿನ ಆಸನ ಭುಜಂಗಾಸನ.

ಭುಜಾಂಗಾಸನ

ಚದುರಂಗ ದಂಡಸಾನದಿಂದ ಭುಜಂಗಸಾನಕ್ಕೆ ಹೊಂದಿಕೊಳ್ಳಬೇಕು. ಕಾಲುಗಳನ್ನು ಕೆಳಗಿರಸಿ ದೀರ್ಘಾವಾದ ಉಸಿರನೊಂದಿಗೆ ತಲೆಯನ್ನು ಮೇಲಕ್ಕೆ ಎತ್ತುತ್ತಾ ಮೇಲಕ್ಕೆ ನೋಡುತ್ತಾ ಹೋಗಬೇಕು. ಎದೆಯನ್ನು ವಿಸ್ತಾರಗೊಳಿಸಿಕೊಳ್ಳಬೇಕು. ಎಷ್ಟು ಸಾಧ್ಯವಾಗುತ್ತದೋ ಅಷ್ಟು ಮೇಲಕ್ಕೆ ನೋಡಬೇಕು. ಈ ಆಸನವನ್ನು ಕೂಡ ಕೆಲಕಾಲ ಅಭ್ಯಾಸ ಮಾಡಿ. ನಂತರ ಈ ಮೂರು ಆಸನಗಳನ್ನು ಕಂಬೈಂಡ್ ಮಾಡಿ ನಾವು ಸಾಧಾರಣ ದಂಡವನ್ನು ಅಭ್ಯಾಸ ಮಾಡಬೇಕು.

ಮೊದಲನೆಯದಾಗಿ ಪರ್ವತಾಸನ, ಅದೋಮುಖ ಶ್ವಾನಾಸನ, ಅದೋಮುಖಶ್ವಾನಾಸನದಿಂದ ಚದುರಂಗ ದಂಡಾಸನ, ಚದುರಂಗ ದಂಡಾಸನದಿಂದ ಭುಜಂಗಾಸಾನ ಮಾಡುತ್ತಾ ಇದೇ ರೀತಿ ಅಭ್ಯಾಸವನ್ನು ಮುಂದುವರೆಸುತ್ತಾ ಹೋಗಬೇಕು. ಎಷ್ಟು ಅಗೋತ್ತೋ ಅಷ್ಟು ವೇಗದಲ್ಲಿ ಈ ಅಭ್ಯಾಸವನ್ನು ಮಾಡಬಹುದು ಸುಮಾರು ಇಪತ್ತು ಬಾರಿ ಈ ಅಭ್ಯಾಸವನ್ನು ಮುಂದುವರೆಸಬಹುದು. ನಂತರ ವಿಶ್ರಾಂತಿ .

ಸಾಮಾನ್ಯ ಬೈಟಕ್

ಸಾಮಾನ್ಯ ಬೈಟಕ್ ಇಲ್ಲವೇ ಹಾಫ್ ಸ್ಕ್ವಾಟ್ ಎಂದೂ ಸಹ ಇದನ್ನು ಕರೆಯಲಾಗುತ್ತದೆ. ನೇರವಾಗಿ ನಿಂತ ಕೈಗಳನ್ನು ಮುಂದಕ್ಕೆ ಚಾಚಬೇಕು. ಬಳಿಕ ಬಸ್ಕಿ ಹೊಡೆಯುವ ರೀತಿಯಲ್ಲಿ ಇದನ್ನು ಅಭ್ಯಾಸ ಮಾಡಬೇಕು.

ದೀರ್ಘಾವಾದ ಉಸಿರನ್ನು ತೆಗೆದುಕೊಂಡು, ಮತ್ತೆ ಉಸಿರನ್ನು ಹೊರಗೆ ಹಾಕುತ್ತಾ ಕೆಳಗೆ ಕುಳಿತುಕೊಳ್ಳುವುದು ಈ ಅರ್ಭಯಾಸದ ಕ್ರಮವಾಗಿದೆ. ಈ ಅಭ್ಯಾಸವನ್ನು ವೇಗವಾಗಿ ಮಾಡಿದಷ್ಟು ಒಳಿತು. ಇದನ್ನು ಸುಮಾರು ಇಪ್ಪತ್ತು ಬಾರಿ ಮಾಡಿದರೆ ಹೆಚ್ಚು ಪ್ರಯೋಜನಕಾರಿ. ಹಾಗೆ ಮುಂದುವರೆಸಿದರೂ ಒಳ್ಳೆಯದು. ಈಗ ವಿಶ್ರಾಂತಿ .

ಪ್ರತಿದಿನ ಈ ಆಸನಗಳನ್ನು ಮಾಡುತ್ತಾ ಆರೋಗ್ಯವಂತರಾಗಿರಬಹುದು. ಅಲ್ಲದೇ ಸಣ್ಣಪುಟ್ಟ ಕಾಯಿಲೆಗಳಿಂದಲೂ ಸಹ ದೂರವಾಗಿ ಫಿಟ್ ಆಗಿರಬಹುದು. ಈಗ ಮಳೆಗಾಲ ಆರಂಭವಾಗಿದೆ. ಕೊರೊನಾ 3 ನೇ ಅಲೆಯ ಸೂಚನೆಯೂ ಇದೆ. ಈ ನಿಟ್ಟಿನಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರಿಯಾದ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ದೇಹವನ್ನು ಸದೃಢಗೊಳಿಸಿಕೊಳ್ಳಬೇಕು. ಇಲ್ಲವಾದರೆ ದೇಹ ದೌರ್ಬಲ್ಯಗೊಂಡು ಬೇಗನೇ ಕಾಯಿಲೆಗಳ ಗೂಡಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿನಿತ್ಯ ಗಂಟೆ ಗಟ್ಟಲೇ ಜಿಮ್ನಲ್ಲಿ ಸಮಯ ಕಳೆಯಲು ಸಾಧ್ಯವಾಗದಿದ್ದರೇ ತೊಂದರೆ ಇಲ್ಲ. ನಾವು ಹೇಳಿಕೊಟ್ಟಿರುವ ಈ ಆಸನಗಳನ್ನು ಅನುಸರಿಸಿ ಪ್ರಯೋಜನ ಪಡೆದುಕೊಳ್ಳಿ.

ಒಂದು ವೇಳೇ ನೀವು ಯೋಗಾಸನಕ್ಕೆ ಹೊಸಬರಾಗಿದ್ದರೆ ತಜ್ಞರ ಮಾರ್ಗದರ್ಶನವನ್ನು ಪಡೆದು ಅಭ್ಯಾಸಿಸಿ. ಆರಂಭದಲ್ಲಿ ನಿಧಾನವಾಗಿ ಅಭ್ಯಾಸ ಮಾಡಿಕೊಳ್ಳಿ. ಆ ನಂತರ ಪ್ರತಿದಿನ ಅನುಸರಿಸುವ ಮೂಲಕ ವೇಗವನ್ನು ಹೆಚ್ಚಿಸಿಕೊಳ್ಳಬಹುದು. ಇನ್ನೂ ಈಗಾಗಲೇ ಯೋಗಾಭ್ಯಾಸದಲ್ಲಿರುವವರಿಗೆ ಈ ಆಸನಗಳು ಹೊಸ ಅಡಿಷನ್. ಒಟ್ಟಿನಲ್ಲಿ ಆರೋಗ್ಯವೇ ಭಾಗ್ಯ.

ಹಿಂದಿನ ಲೇಖನಶ್ರೀ ಚಿದಂಬರಾಷ್ಟಕಂ
ಮುಂದಿನ ಲೇಖನಶನಿಯ ನೆಚ್ಚಿನ ರಾಶಿಗಳಿವು