ಮನೆ ರಾಜ್ಯ ಒಂದು ದೇಶ ಒಂದು ಚುನಾವಣೆ: ಇದು ಸಣ್ಣ ಪಕ್ಷಗಳನ್ನು ಮುಗಿಸುವ ಯತ್ನ- ಡಿಕೆಶಿ

ಒಂದು ದೇಶ ಒಂದು ಚುನಾವಣೆ: ಇದು ಸಣ್ಣ ಪಕ್ಷಗಳನ್ನು ಮುಗಿಸುವ ಯತ್ನ- ಡಿಕೆಶಿ

0

ವಿಜಯಪುರ: ಒಂದು ದೇಶ ಒಂದು ಚುನಾವಣೆ ಇದು ಸಣ್ಣ ಪಕ್ಷಗಳನ್ನು ಮುಗಿಸುವ ಯತ್ನ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

Join Our Whatsapp Group

ವಿಜಯಪುರದಲ್ಲಿ ಈ ಕುರಿತು ಹೇಳಿಕೆ ನೀಡಿದ ಅವರು ನಮ್ಮ ಕಾಂಗ್ರೆಸ್ ಗೆ ಮೂಲ‌ ಸಿದ್ಧಾಂತ ಇದೆ, ನಮ್ಮ ರಾಷ್ಟ್ರೀಯ ನಾಯಕರು ಈಗಾಗಲೇ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದೆಲ್ಲ ಸಣ್ಣ ಸಣ್ಣ ಪಕ್ಷಗಳನ್ನು ಮುಗಿಸುವ ತಂತ್ರ ಬೇರೆ ಬೇರೆ ರಾಜ್ಯಗಳಲ್ಲಿ ಇವರಿಗೆ (ಬಿಜೆಪಿ) ಸೀಟು ಬರುತ್ತಿಲ್ಲ, ಹಾಗಾಗಿ ಸಣ್ಣ ಪಕ್ಷಗಳನ್ನು ಮುಗಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

 ಇನ್ನು ಕೆಲವೆಡೆ ಈಗ ಹೊಸದಾಗಿ ಸರ್ಕಾರ ಬಂದಿದೆ, ಕೆಲವೆಡೆ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ ಅವುಗಳಿಗೆ ಹೇಗೆ ನಿಯಮ ಮಾಡುತ್ತಾರೋ ಗೊತ್ತಿಲ್ಲ. ನನ್ನ ಪ್ರಕಾರದ ಇದು ಕಷ್ಟ ಎಂದು ಹೇಳಿದ್ದಾರೆ.

ಆಲಮಟ್ಟಿ ಸಂತ್ರಸ್ತರ ಹೋರಾಟ ವಿಚಾರವಾಗಿ ಮಾತನಾಡಿದ ಅವರು 524 ಮೀಟರ್ ಎತ್ತರ ಏನು ಮಾಡಬೇಕು ಅದನ್ನು ನಾವು ಮಾಡುತ್ತೇವೆ ಅದರ ಭೂಸ್ವಾಧೀನ ನೊಟಿಫಿಕೇಷನ್ ಆಗಬೇಕಿದೆ, ನೊಟಿಫಿಕೇಷನ್ ಮುಂಚೆಯೇ ಅಲ್ಲಿ ಕೆಲಸ ಮಾಡಬೇಕಾ ಬೇಡವಾ ಎಂಬ ವಿಚಾರ ನಡೆದಿದೆ. ಭೂ ಸ್ವಾಧೀನಕ್ಕೆ ಈ ಮೊದಲು ಬೊಮ್ಮಾಯಿ ಸರ್ಕಾರ ಕೊಟ್ಟ ರೇಟ್ ಗೆ ತಕರಾರಿಲ್ಲ, ನಾವು ಕೊಡಲು ಸಿದ್ಧರಿದ್ದೇವೆ ಇದೇ ವಿಚಾರಕ್ಕೆ ಸೋಮವಾರ ಸಿಎಂ ಅವರು ಸಂಬಂಧಿಸಿದ ಕೆಲವರನ್ನು ಕರೆದಿದ್ದಾರೆ, ಅವರು ಅದರ ವಿಚಾರ ಮಾಡುತ್ತಾರೆ. ಸಂತ್ರಸ್ತರು ನೂರು ಬೇಡಿಕೆ ಇಡಲಿ, ಆದರೆ ಕಾನೂನು ಚೌಕಟ್ಟಿನಲ್ಲಿ ಏನು ಮಾಡಲು ಸಾಧ್ಯವಿದೆ ಅದನ್ನು ನಾವು ಮಾಡುತ್ತೇವೆ ಅದಕ್ಕೂ ಮೊದಲು ಕೇಂದ್ರ ಗೆಜೆಟ್ ನೊಟಿಫಿಕೇಷನ್ ಮಾಡಬೇಕಿದೆ ಎಂದರು.

ಕೃಷ್ಣ ಜನಾಂದೋಲನ ಮಾಡಿ ವರ್ಷಕ್ಕೆ 40 ಸಾವಿರ ಕೋಟಿ ನೀಡುವ ಮಾತಿನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಕೆಶಿ ಸಿಎಂ ಅವರು ಅದಕ್ಕೆ ಉತ್ತರಿಸುತ್ತಾರೆ ಎಂದು ಹೇಳಿದ್ದಾರೆ.