ಮನೆ ಜ್ಯೋತಿಷ್ಯ ಉತ್ತರಾಷಾಡ ನಕ್ಷತ್ರ ಮತ್ತು ಜಾತಕ

ಉತ್ತರಾಷಾಡ ನಕ್ಷತ್ರ ಮತ್ತು ಜಾತಕ

0

ಉತ್ತರಾಷಾಢಾ ನಕ್ಷತ್ರದ ಪ್ರಥಮ ಚರಣದ ಕ್ಷೇತ್ರವ್ಯಾಪ್ತಿ 26 ಅಂಶ 40 ಕಲಾ ಧನುರಾಶಿಯಿಂದ 30 ಅಂಶ ಧನು ರಾಶಿಯವರೆಗೆ. ರಾಶಿ ಸ್ವಾಮಿ- ಬೃಹಸ್ಪತಿ, ನಕ್ಷತ್ರಸ್ವಾಮಿ – ಸೂರ್ಯ, ನಕ್ಷತ್ರ ದೇವತೆ – ವಿಶ್ವದೇವತೆಗಳು, ತಾರಾಸಮೂಹ -2, ಆಕಾಶಭಾಗ – ದಕ್ಷಿಣ, ಅಂತ್ಯನಾಡಿ, ಎತ್ತು(ನಕುಲ) ಯೋನಿ, ಮನುಷ್ಯಗಣ, ನಾಮಾಕ್ಷರ- ಬೇ. ಈ ನಕ್ಷತ್ರದ ಪ್ರಥಮ ಚರಣ ಪ್ರತಿನಿಧಿಸುವ ಜಾತಕನ ಶರೀರ ಭಾಗ ತೊಡೆಗಳು ಊರ್ವ ಸ್ಥಿ,ಬಾಯಿಮಾರ್ಗ, ದಮನಿಗಳು, ನಾಡಿಗಳು.

 ಉತ್ತರಾಷಾಢಾ ನಕ್ಷತ್ರದ ಜಾತಕನ ಸ್ವರೂಪ :

       ಉನ್ನತ ಆದರ್ಶಗಳುಳ್ಳವ, ಸ್ಥಿರ ವ್ಯಕ್ತಿತ್ವ, ಮಹತ್ವಾಕಾಂಕ್ಷಿ ಆಕರ್ಷಕ, ಉದಾನ ವ್ಯಕ್ತಿತ್ವ, ಲೋಕೋಪಕಾರಿ, ಧಾರ್ಮಿಕ ಕೃತ್ಯಗಳಲ್ಲಿ ಸಫಲ, ಕಾನೂನು ತಿಳಿದವ, ಕಾನೂನಿನ ಅನುಸಾರ ಯುದ್ಧ ಮಾಡುವವ, ವ್ಯಯಶೀಲ, ಹಸನ್ಮುಖಿ ಮತ್ತು ಪ್ರತಸನ್ನಚಿತ್ರ ಸ್ಫೂರ್ತಿಯುಕ್ತ ಆಶಾವಾದಿ, ಸರಳ ಮನಸ್ಸಿನವ ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುವವ, ಸಮಾಜದಲ್ಲಿ ಪ್ರಮುಖ, ಮನೆಯ ಮುಖ್ಯಸ್ಥ ಅಥವಾ ಮನೆಯಲ್ಲಿ ಎಲ್ಲರಿಗಿಂತ ಹಿರಿಯ, ಆಶಾಪೂರಿತ ವಿಚಾರ, ಯಾವುದಾದರೂ ವಿಶಿಷ್ಟ ಅಧ್ಯಯನ ಕ್ಷೇತ್ರದಲ್ಲಿ ಪ್ರಾವಿಣ್ಯ ಪ್ರಾಪ್ತಿ ಹೊಂದುವನ ಅಧ್ಯಯನಶೀಲ, ವೈದ್ಯ, ವಿಶೇಷಜ್ಞ, ವಿಶಾರದ, ಬಹುಭಾಷಿ ಬಾಷಾಶಾಸ್ತ್ರಿ ರಾಜನೀತಿಜ್ಞ

* ಉತ್ತರಾಷಾಢಾ ಜಾತಕನ ಉದ್ಯೋಗ :

ಮಾವುತ, ಪೈಲ್ವಾನ್, ಕುದುರೆಯುಳ್ಳವ, ಆನೆಗಳ ಪಾಲಕ, ಸ್ಥಿರ ಸಂಪತ್ತಿನ ಯಜಮಾನ, ಯುದ್ಧಪ್ರಧಾನ, ಭಗವಂತನ ಭಕ್ತ, ಯೋಗಾಭ್ಯಾಸಿ, ವಿಲಾಸಿ, ತರ್ಕಯುಕ್ತ ಸದ್ ವ್ಯವಹಾರದ ಇಚ್ಚುಕ, ಅಧಿಕಾರಾಡಳಿತದ ಪ್ರೇಮಿ, ಆದೇಶ ನೀಡುವನ, ಅನೇಕ ಮಿತ್ರರುಳ್ಳವ ಸಜ್ಜನ ನಾಗರಿಕ, ಮತ್ತು ವ್ಯವಸ್ಥಿತ, ತರ್ಕಶಾಸ್ತ್ರಿ (ನ್ಯಾಯವಾದಿ), ನ್ಯಾಯಾಧೀಶ, ರಾಜಕೀಯ ಧುರೀಣ, ಬ್ಯಾಂಕ್, ಆರ್ಥಿಕ ವಿಭಾಗ,” ಶಿಪ್ಪಿಂಗ್, ಶಿಕ್ಷಣ, ಧಾರ್ಮಿಕ, ಅಂತಾರಾಷ್ಟ್ರೀಯ ವ್ಯಾಪಾರ ಅಥವಾ ಸಂಖ್ಯಾ ಶಾಸ್ತ್ರಕ್ಕೆ ಸಂಬಂಧಿತ, ದೂತಾವಾಸ, ನಿರ್ಯಾತ ನಿಗಮ, ಸಹಾಯಕ ಆಯುಕ್ತ ಜಿಲ್ಲಾಧಿಕಾರಿ, ಆಯುರ್ವೇದ, ಪೋರ್ಟ್ ಟ್ರಸ್ಟ್, ಅಬಕಾರಿ, ಪುನರ್ವಸತಿ ಕೇಂದ್ರ, ಆಸತ್ರೆ, ಧರ್ಮಾರ್ಥ ಸಂಸ್ಥೆಗಳು, ಸಂಪಾದಕ, ಪ್ರಕಾಶನ ಸಂಸ್ಥೆ ನಿರ್ದೇಶಕ, ಆಡಳಿತ ಸೇವೆ

ಉತ್ತರಾಷಾಢಾ ಜಾತಕನ ರೋಗ :

ಶರೀರದ ಅಂಗಗಳಲ್ಲಿ ಶಿಥಿಲತೆಯ ತೊಂದರೆ, ಅಂಗಘಾತ ವಾತರೋಗ, ಸಂಧಿ ವಾತ, ಪುಪ್ಪಸ ರೋಗ, ನೇತ್ರವಿಕಾರ,  ಸ್ಕೈಟಿಕಾ.

 ವಿಶೇಷ:

ಬೃಹಸ್ಪತಿಯ ರಾಶಿ ಮತ್ತು ಸೂರ್ಯನ ನಕ್ಷತ್ರದಲ್ಲಿ ಜನಿಸಿದ ಅಧಿಕಾಂಶ ಜಾತಕರು ಅಧ್ಯಯನಶೀಲ, ಮಹತ್ವಾಕಾಂಕ್ಷಿ ಜೀವನದ ಅಭಿಲಾಷಿ, ಚಿತ್ರಕಲೆಯಲ್ಲಿ ನಿಪುಣತೆ ಸ್ವಚ್ಛ ವಸ್ತ್ರಗಳಲ್ಲಿ ಅಭಿರುಚಿಯಿರುವವರು, ಗೌರವ-ಪ್ರತಿಷ್ಠೆಪ್ರಾ ಪ್ತಿಹೊಂದುವವರಾಗುತ್ತಾರೆ.ಭಾಷಣ ಕಲೆಯಲ್ಲಿ ಇವರು ನಿಪುಣರಿರುತ್ತಾರೆ. ಇವರು ತಮ್ಮ ಮಾತುಗಳಲ್ಲಿ ಸಂಯಮ ಮತ್ತು ಸಂತುಲಿತ ಭಾಷೆಯ ಪ್ರಯೋಗ ಮಾಡುತ್ತಾರೆ. ಅನೇಕ ಪ್ರಕಾರದ ಭಾಷೆಗಳ ಜ್ಞಾನವನ್ನು ಹೊಂದುತ್ತಾರೆ ಮತ್ತು ಸಾರ್ವಜನಿಕ ಕಾರ್ಯಗಳ ಮೂಲಕ ವಿಶೇಷ ಪ್ರಕಾರದಿಂದ ಪ್ರೋತ್ಸಾಹಿತರಾಗುತ್ತಾರೆ. ಇಂಥ ಜಾತಕರು ಪುಷ್ಪ ಶರೀರದವರು, ಶ್ರೇಷ್ಠ ಬುದ್ದಿಯುಕ್ತ, ಅಲ್ಪಾಯಸ್ಸಿನವರು, ಗರ್ವಿ, ತಡೆ-ತಡೆದು ಮಾತನಾಡುವವರು, ವ್ಯಾಪಾರಾದಿ ಕಾರ್ಯಗಳಿಂದ ಲಾಭ ಪ್ರಾಪ್ತಿ ಹೊಂದುವವರು, ಗೃಹ ಕಾರ್ಯದಲ್ಲಿ ನಿಪುಣರು, ತೀವ್ರ ಸ್ಮರಣಶಕ್ತಿಯುಕ್ತರು ಮತ್ತು ಭವಿಷ್ಯಕ್ಕಾಗಿ ಸುಖ-ಸೌಲಭ್ಯಗಳನ್ನು ಹೊಂದಿಸಿಕೊಳ್ಳುವವರೂ ಆಗುತ್ತಾರೆ. ಕಾನೂನು ಮತ್ತು ಆಡಳಿತ ಸಂಬಂಧಿ ಕಾರ್ಯಗಳ ಮೂಲಕ ಈ ಜಾತಕರಲ್ಲಿ ವಿಶಿಷ್ಟ ಕಾರ್ಯಶಕ್ತಿಯ ವಿಕಾಸವಾಗುತ್ತದೆ. ಸರಕಾರ ಅಥವಾ ಸರಕಾರಿ ಕ್ಷೇತ್ರಗಳಿಂದ ಇವರಿಗೆ ವಿಶೇಷ ಲಾಭ ಪ್ರಾಪ್ತಿಯಾಗುತ್ತದೆ.

   ಈ ನಕ್ಷತ್ರದ ಮೇಲೆ ( ಪ್ರಥಮ ಚರಣ) ಸೂರ್ಯನು ಪುಷ್ಯ ಮಾಸದ ಕೊನೆಯ ಮೂರೂವರೆ ದಿನಗಳವರೆಗೆ ಇರುತ್ತಾನೆ. ಚಂದ್ರನು ಪ್ರತಿ ಇಪತ್ತೇಳನೆಯ ದಿನ ಸುಮಾರು ಆರು ಗಂಟೆಯವರೆಗೆ ಈ ನಕ್ಷತ್ರದ ಭಾಗದ ಮೇಲಿರುತ್ತಾನೆ. ನಕ್ಷತ್ರದ ಉಳಿದ ಭಾಗದಲ್ಲಿಯ ಭ್ರಮಣವನ್ನು ಚಂದ್ರನು ಮುಂದಿನ ರಾಶಿಯಲ್ಲಿ ಪೂರ್ಣಗೊಳಿಸುತ್ತಾನೆ.

ಒಂದು ವೇಳೆ ಜಾತಕನ ಜನ್ಮ ಕುಂಡಲಿಯಲ್ಲಿ ಸೂರ್ಯ ಮತ್ತು ಬೃಹಸ್ಪತಿಯ ಗೋಚರ ಯೋಗವಿದ್ದರೆ, ಜಾತಕನು ಗೌರವ- ಪ್ರತಿಷ್ಠೆ ಪ್ರಾಪ್ತಿ ಹೊಂದಲು ಸಫಲನಾಗುತ್ತಾನೆ ಮತ್ತು ರಾಜ್ಯದಿಂದ ಈತನಿಗೆ ವಿಶೇಷ ಲಾಭವಾಗುತ್ತದೆ.